-->
ಸರ್ಕಾರಿ ನೌಕರರಿಗೂ ಸಂಘ ಸಂಸ್ಥೆಗಳನ್ನು ರಚಿಸುವ ಹಕ್ಕು ಇದೆ: ದೆಹಲಿ ಹೈಕೋರ್ಟ್

ಸರ್ಕಾರಿ ನೌಕರರಿಗೂ ಸಂಘ ಸಂಸ್ಥೆಗಳನ್ನು ರಚಿಸುವ ಹಕ್ಕು ಇದೆ: ದೆಹಲಿ ಹೈಕೋರ್ಟ್

ಸರ್ಕಾರಿ ನೌಕರರಿಗೂ ಸಂಘ ಸಂಸ್ಥೆಗಳನ್ನು ರಚಿಸುವ ಹಕ್ಕು ಇದೆ: ದೆಹಲಿ ಹೈಕೋರ್ಟ್

ಸರ್ಕಾರದ ನೌಕರರೂ ಹೊಸ ಸಂಘ ಸಂಸ್ಥೆಗಳನ್ನು ಹುಟ್ಟು ಹಾಕಬಹುದು, ಇಲ್ಲವೇ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಬಹುದು. ಅವರಿಗೂ ಸಂಘ ಸಂಸ್ಥೆ ರಚಿಸುವ ಹಕ್ಕು ಇದೆ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.ಕೇಂದ್ರೀಯ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳ ಸಂಘ Vs ಭಾರತ ಒಕ್ಕೂಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾ. ವಿ. ಕಾಮೇಶ್ವರ್ ರಾವ್ ಮತ್ತು ನ್ಯಾ. ಅನೂಪ್ ಕುಮಾರ್ ಮೆಂದಿರೆಟ್ಟ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.ಭಾರತದ ಸಂವಿಧಾನದ 19ನೇ ವಿಧಿಯಡಿ ಎಲ್ಲರಿಗೂ ಸಂಘ ಸಂಸ್ಥೆಗಳನ್ನು ಸ್ಥಾಪಿಸುವ, ಮುನ್ನಡೆಸುವ ಮೂಲಭೂತ ಹಕ್ಕು ಇರುತ್ತದೆ. ಆದರೆ, ಸರ್ಕಾರಿ ನೌಕರರಿಗೆ ಕೆಲವೊಂದು ನಿರ್ಬಂಧಗಳಿವೆ. ಅವರು ಸಾರ್ವಜನಿಕ ಸೇವೆಯಲ್ಲಿ ಕರ್ತವ್ಯ ನಿಭಾಯಿಸಬೇಕಾಗಿದೆ. ಆದರೂ. ಅವರನ್ನು ಸಂವಿಧಾನದ ಮೂರನೇ ಅಧ್ಯಾಯದಡಿ ಒದಗಿಸಲಾದ ಹಕ್ಕುಗಳಿಂದ ಅವರನ್ನು ಹೊರಗಿಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.ಸಂವಿಧಾನದ 19(1)(c) ಪರಿಚ್ಚೇದದಡಿ ಸಂಘಟನೆ ಇಲ್ಲವೇ ಒಕ್ಕೂಟ ಯಾ ಸಹಕಾರ ಸಂಘಗಳಿಗೆ ಸರ್ಕಾರ ಮಾನ್ಯತೆ ನೀಡುವುದು ಮೂಲಭೂತ ಹಕ್ಕಾಗಿ ಇಲ್ಲದಿದ್ದರೂ ಅವುಗಳನ್ನು ರಚಿಸುವುದು ಮೂಲಭೂತ ಹಕ್ಕಾಗಿದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ವಿವರಿಸಿದೆ.ಕೇಂದ್ರ ನಾಗರಿಕ ಸೇವೆಗಳ ನಿಯಮಗಳ ಪ್ರಾಥಮಿಕ ಉದ್ದೇಶಕ್ಕೆ ಚ್ಯುತಿ ಬರದಂತೆ, ಸರ್ಕಾರ ಮತ್ತು ಅದರ ನೌಕರರ ನಡುವೆ ಮಾತುಕತೆಗಳನ್ನು ಸಕ್ರಿಯಗೊಳಿಸಲು ಮತ್ತು ಸಾಮರಸ್ಯದ ವಾತಾವರಣವನ್ನು ಸೌಹಾರ್ದ ಸಂಬಂಧವನ್ನು ಕಾಪಾಡಿಕೊಳ್ಳಲು ಕಾನೂನುಬದ್ಧ ಸಂಘಟನೆಗಳ ಚಟುವಟಿಕೆಗೆ ಪ್ರೇರೇಪಿಸುವುದು ಕಾನೂನುಬದ್ಧವಾಗಲಿದೆ ಎಂದು ನ್ಯಾಯಪೀಠ ತಿಳಿಸಿದೆ.

.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200