ಜಡ್ಜ್ ರನ್ನು ತರಬೇತಿಗೆ ಕಳಿಸಿದ ಹೈಕೋರ್ಟ್ ಆದೇಶ ರದ್ದು: ಸುಪ್ರೀಂ ಕೋರ್ಟ್
ಜಡ್ಜ್ ರನ್ನು ತರಬೇತಿಗೆ ಕಳಿಸಿದ ಹೈಕೋರ್ಟ್
ಆದೇಶ ರದ್ದು: ಸುಪ್ರೀಂ ಕೋರ್ಟ್
ನ್ಯಾಯಾಂಗದ ಅಧಿಕಾರಿ ತಮ್ಮ ನ್ಯಾಯಿಕ ವಿವೇಚನೆ ಬಳಸಿ ನ್ಯಾಯತೀರ್ಮಾನ
ಮಾಡುತ್ತಿಲ್ಲ ಎಂಬ ಕಾರಣಕ್ಕೆ ನ್ಯಾಯಾಧೀಶರನ್ನು ಹೆಚ್ಚಿನ ತರಬೇತಿ ಪಡೆಯಲು ನ್ಯಾಯಾಂಗ ಅಕಾಡೆಮಿಗೆ
ಕಳುಹಿಸಿದ ಆದೇಶ ಸಮರ್ಥನೀಯವಲ್ಲ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, ಕರ್ನಾಟಕ ಹೈಕೋರ್ಟ್
ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ.
ನ್ಯಾಯಾಧೀಶರಾದ ಅಶ್ವಿನಿ ವಿಜಯ್ ಶಿರಿಯಣ್ಣವರ್ ಸಲ್ಲಿಸಿದ್ದ
ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎ.ಎಸ್. ಬೋಪಣ್ಣ ಹಾಗೂ ನ್ಯಾ. ಪಂಕಜ್ ಮಿತ್ತಲ್ ಅವರಿದ್ದ ನ್ಯಾಯಪೀಠ,
ಹೈಕೋರ್ಟ್ ಹೊರಡಿಸಿರುವ ಆದೇಶವು ನ್ಯಾಯಾಧೀಶರ ವೃತ್ತಿ ಘನತೆ ಮತ್ತು ಗೌರವದ ಮೇಲೆ ಪರಿಣಾಮ ಬೀರುತ್ತದೆ.
ಹಾಗಾಗಿ ಅದಕ್ಕೆ ವಿವರಣೆ ನೀಡದೆ ಆದೇಶವನ್ನು ಜಾರಿಗೆ ತರಬಾರದು ಎಂದು ಅಭಿಪ್ರಾಯಪಟ್ಟಿದ್ದು, ಹೈಕೋರ್ಟ್
ನೀಡಿದ್ದ ಅಭಿಪ್ರಾಯಗಳನ್ನು ಬದಿಗೆ ಸರಿಸಿದೆ.
ಏನಿದು
ಪ್ರಕರಣ?
ವರದಕ್ಷಿಣೆ
ಕಿರುಕುಳಕ್ಕೆ ಒಳಗಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದ ಪ್ರಕರಣವೊಂದರಲ್ಲಿ ಐದನೇ ಹೆಚ್ಚುವರಿ ಜಿಲ್ಲಾ
ಮತ್ತು ಸತ್ರ ನ್ಯಾಯಾಧೀಶರಾದ ಅಶ್ವಿನಿ ವಿಜಯ್ ಶಿರಿಯಣ್ಣವರ್ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ
ಆದೇಶ ಹೊರಡಿಸಿದ್ದರು.
ಈ
ಜಾಮೀನು ಆದೇವನ್ನು ರದ್ದುಗೊಳಿಸಬೇಕು ಎಂದು ಕೋರಿ ಮೃತ ಮಹಿಳೆಯ ಸಹೋದರ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಜಿಲ್ಲಾ ನ್ಯಾಯಾಧೀಶರ ಆದೇಶವನ್ನು ತೀಕ್ಷ್ಣವಾಗಿ
ತರಾಟೆಗೆ ತೆಗೆದುಕೊಂಡಿದ್ದರು. ಜಿಲ್ಲಾ ನ್ಯಾಯಾಧೀಶರು ನೀಡಿದ ಆದೇಶ ವಕ್ರ ಮತ್ತು ವಿಚಿತ್ರವಾಗಿದೆ
ಎಂದು ತೀರ್ಪು ನೀಡಿತ್ತು.
ಅಲ್ಲದೆ,
ಆರೋಪಿಗಳಿಗೆ ನೀಡಿದ್ದ ಜಾಮೀನನ್ನು ರದ್ದುಪಡಿಸಿತ್ತು. ಘೋರ ಅಪರಾಧಿಕ ಪ್ರಕರಣದಲ್ಲಿ ನ್ಯಾಯಿಕ ವಿವೇಚನೆ
ಬಳಸುವುದು ಹೇಗೆ ಎಂಬುದನ್ನು ನ್ಯಾಯಾಧೀಶರು ಕಲಿತುಕಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ
ನ್ಯಾಯಪೀಠ, ಒಬ್ಬ ನ್ಯಾಯಾಂಗದ ಅಧಿಕಾರಿ ನ್ಯಾಯಿಕ ವಿವೇಚನೆಯನ್ನು ಬಳಸುವುದು ಹೇಗೆ ಎಂಬದನ್ನು ಕಲಿತುಕೊಳ್ಳುವ
ಅಗತ್ಯವಿದೆ ಎಂದು ಹೇಳಿ, ನ್ಯಾಯಾಧೀಶರು ನ್ಯಾಯಾಂಗ ಅಕಾಡೆಮಿಯಲ್ಲಿ ಹೆಚ್ಚಿನ ತರಬೇತಿ ಪಡೆಯಲಿ ಎಂದು
ನಿರ್ದೇಶನ ನೀಡಿತ್ತು.
ಪ್ರಕರಣ:
ಅಶ್ವಿನಿ ವಿಜಯ್ ಶಿರಿಯಣ್ಣವರ್ ಮತ್ತು ಕರ್ನಾಟಕ ರಾಜ್ಯ ಮತ್ತಿತರರು
ಸುಪ್ರೀಂ
ಕೋರ್ಟ್ CrA 1616/2023 Dated 19-05-2023