-->
ಮೂಲಗೇಣಿ ಹಕ್ಕು: ಭೂ ಮಾಲೀಕರ ಅರ್ಜಿ ವಜಾ, ಗೇಣಿದಾರರ ಹಕ್ಕು ಸಿಂಧುತ್ವ ಎತ್ತಿ ಹಿಡಿದ ಹೈಕೋರ್ಟ್‌

ಮೂಲಗೇಣಿ ಹಕ್ಕು: ಭೂ ಮಾಲೀಕರ ಅರ್ಜಿ ವಜಾ, ಗೇಣಿದಾರರ ಹಕ್ಕು ಸಿಂಧುತ್ವ ಎತ್ತಿ ಹಿಡಿದ ಹೈಕೋರ್ಟ್‌

ಮೂಲಗೇಣಿ ಹಕ್ಕು: ಭೂ ಮಾಲೀಕರ ಅರ್ಜಿ ವಜಾ, ಗೇಣಿದಾರರ ಹಕ್ಕು ಸಿಂಧುತ್ವ ಎತ್ತಿ ಹಿಡಿದ ಹೈಕೋರ್ಟ್‌





ಮೂಲಗೇಣಿ ಅಥವಾ ಒಳಮೂಲಗೇಣಿ ಗೇಣಿದಾರರಿಗೆ ಮಾಲಕತ್ವ ಪ್ರಧಾನ ಮಾಡುವ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಮೂಲಗೇಣಿ, ಒಳಮೂಲಗೇಣಿ ಹಕ್ಕು ಅಧಿನಿಯಮ-2011ರ ಸಿಂಧುತ್ವವನ್ನು ಕರ್ನಾಟಕ ಹೈಕೋರ್ಟ್‌ ಎತ್ತಿ ಹಿಡಿದಿದೆ.



ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ಗೇಣಿದಾರರಿಗೆ ಹೈಕೋರ್ಟ್‌ನ ಈ ಆದೇಶದಿಂದ ಆನೆಬಲ ಬಂದಂತಾಗಿದೆ.



ಉಡುಪಿ ಅದಮಾರು ಮಠ, ಗಣೇಶ್ ಪೈ ಮತ್ತಿತರರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ.



ಪ್ರಕರಣದ ಹಿನ್ನೆಲೆ:

ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ಭೂ ಕಂದಾಯ ವಸೂಲಿ ಮಾಡುವ ಅಧಿಕಾರವನ್ನು ಸ್ಥಳೀಯ ಶ್ರೀಮಂತರು, ಮಠ-ಮಂದಿರ, ಮಸೀದಿ ಮತ್ತು ಚರ್ಚುಗಳಿಗೆ ನೀಡಲಾಗಿತ್ತು. ಕಾಲಕ್ರಮೇಣ, ಆ ಭೂಮಿಯ ಕಂದಾಯ ವಸೂಲಿ ಮಾಡಿ, ಮೇಲುಸ್ತುವಾರಿ ನೋಡಿಕೊಳ್ಳುವವರು ಮೂಲದಾರರು ಎನಿಸಿಕೊಂಡರು. ಒಂದರ್ಥದಲ್ಲಿ ಅವರೇ ಭೂ ಮಾಲೀಕರು ಆದರು.

ಕಾಲಾನಂತರದಲ್ಲಿ ಆ ಭೂಮಿಯನ್ನು ತಲೆತಲಾಂತರಗಳಿಂದ ವಾಸ್ತವಿಕವಾಗಿ ಅನುಭವಿಸಿ ಬಾಳಿ ಬದುಕಿಕೊಂಡು ಬಂದುವರು ಮೂಲಗೇಣಿದಾರರು ಎಂದು ಭೂಮಿಯ ಪ್ರಮಾಣ ಪತ್ರದಲ್ಲಿ ನಮೂದು ಮಾಡಲಾಯಿತು.

ಭೂಮಿಯ ಸ್ವಾಧೀನದಲ್ಲಿ ಇದ್ದರೂ ಒಡೆತನ ಇಲ್ಲದೆ ಜಾಗವನ್ನು ಅಭಿವೃದ್ಧಿಪಡಿಸುವುದು ಕಷ್ಟವಾಗಿತ್ತು. ಬ್ಯಾಂಕಿನಿಂದ ಸಾಲ-ಸೌಲಭ್ಯವೂ ದೊರೆಯುತ್ತಿರಲಿಲ್ಲ. ಅಷ್ಟೇ ಅಲ್ಲ, ಮೂಲಗೇಣಿ ಭೂಮಿಯನ್ನು ಮಾರಾಟ ಮಾಡುವ ಹಕ್ಕೂ ಮೂಲಗೇಣಿದಾರರಿಗೆ ಇಲ್ಲವಾಗಿತ್ತು.

ಸಾಕಷ್ಟು ಹೋರಾಟದ ಬಳಿಕ ಮೂಲಗೇಣಿದಾರರಿಗೆ ಜಮೀನಿನ ಪೂರ್ಣ ಮಾಲೀಕತ್ವ ಮತ್ತು ಮೂಲದಾರರಿಗೆ ನ್ಯಾಯಯುತ ಪರಿಹಾರ ನೀಡುವ ಉದ್ದೇಶದಿಂದ 2011ರಲ್ಲಿ ರಾಜ್ಯ ಸರ್ಕಾರ ಕಾಯಿದೆ ಜಾರಿಗೆ ತಂದಿತ್ತು.

ಈ ಕಾಯಿದೆಯನ್ನು ಪ್ರಶ್ನಿಸಿ ಕೆಲ ವ್ಯಕ್ತಿಗಳು ಮತ್ತು ಸಂಸ್ಥೆಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ಇದೀಗ ಹೈಕೋರ್ಟ್ ನ್ಯಾಯಪೀಠ ವಜಾಗೊಳಿಸಿ ಕಾಯಿದೆಯ ಸಿಂಧುತ್ವವನ್ನು ಎತ್ತಿಹಿಡಿದಿದೆ.



Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200