ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಪಿ.ಕೆ. ಮಿಶ್ರಾ, ಕೆ.ವಿ. ವಿಶ್ವನಾಥನ್ ನೇಮಕ
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಪಿ.ಕೆ. ಮಿಶ್ರಾ, ಕೆ.ವಿ. ವಿಶ್ವನಾಥನ್ ನೇಮಕ
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಜಸ್ಟಿಸ್ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಹಿರಿಯ ವಕೀಲರಾದ ಕೆ.ವಿ. ವಿಶ್ವನಾಥನ್ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ನಡೆಯುವ ಸಮಾರಂಭದಲ್ಲಿ ಇಬ್ಬರು ನ್ಯಾಯಮೂರ್ತಿಗಳು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಪ್ರಮಾಣ ವಚನ ಸಮಾರಂಭವು ಸುಪ್ರೀಂ ಕೋರ್ಟ್‌ನ ಯೂಟ್ಯೂಬ್ ಚಾನೆಲ್ ಮೂಲಕ ನೇರ ಪ್ರಸಾರಗೊಳ್ಳಲಿದೆ.
ಈ ಇಬ್ಬರನ್ನು ನೇಮಕ ಮಾಡಲು ಮೇ 16ರಂದು ಸುಪ್ರೀಂ ಕೋರ್ಟ್ ಕೊಲೀಜಿಯಂ ಶಿಫಾರಸ್ಸು ಮಾಡಿತ್ತು.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಕೊಲೀಜಿಯಂ ಸಮಿತಿಯಲ್ಲಿ ಎಸ್.ಕೆ. ಕೌಲ್, ಕೆ.ಎಂ. ಜೋಸೆಫ್, ಅಜಯ್ ರಸ್ತೋಗಿ ಮತ್ತು ಸಂಜೀವ್ ಖನ್ನಾ ಅವರು ಸದಸ್ಯರಾಗಿದ್ದಾರೆ.
ವಕೀಲರ ಸಮುದಾಯದಿಂದ ನೇರವಾಗಿ ನ್ಯಾಯಮೂರ್ತಿ ಹುದ್ದೆಗೆ ನೇಮಕಗೊಳ್ಳುವ ಹುದ್ದೆಗೆ ಕೆ.ವಿ. ವಿಶ್ವನಾಥನ್ ಅವರನ್ನು ಕೊಲೀಜಿಯಂ ಶಿಫಾರಸ್ಸು ಮಾಡಿತ್ತು.
ಎಸ್.ಎಂ. ಸಿಕ್ರಿ, ಎಸ್.ಸಿ. ರಾಯ್, ಕುಲದೀಪ್ ಸಿಂಗ್, ಸಂತೋಷ್ ಹೆಗ್ಡೆ, ರೋಹಿಂಗ್ಟನ್ ಫಾಲಿ ನಾರಿಮನ್, ಉದಯ್ ಉಮೇಶ್ ಲಲಿತ್, ಎಲ್. ನಾಗೇಶ್ವರ ರಾವ್, ಇಂದು ಮಲ್ಹೋತ್ರಾ ಮತ್ತು ಪಿ.ಎಸ್. ನರಸಿಂಹ ಅವರು ವಕೀಲರ ಸಮುದಾಯದಿಂದ ನೇರವಾಗಿ ನಿಯುಕ್ತಿಗೊಂಡ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿದ್ದಾರೆ.