-->
ನೋಟರಿ ಲಂಚ ಹಗರಣ: 34 ಲಕ್ಷ ಜಪ್ತಿ, ಕೇಂದ್ರದ ಕಾನೂನು ಸಲಹೆಗಾರ, ವಕೀಲೆ ಅರೆಸ್ಟ್‌!

ನೋಟರಿ ಲಂಚ ಹಗರಣ: 34 ಲಕ್ಷ ಜಪ್ತಿ, ಕೇಂದ್ರದ ಕಾನೂನು ಸಲಹೆಗಾರ, ವಕೀಲೆ ಅರೆಸ್ಟ್‌!

ನೋಟರಿ ಲಂಚ ಹಗರಣ: 34 ಲಕ್ಷ ಜಪ್ತಿ, ಕೇಂದ್ರದ ಕಾನೂನು ಸಲಹೆಗಾರ, ವಕೀಲೆ ಅರೆಸ್ಟ್‌!

ನೋಟರಿ ವಕೀಲರ ನೇಮಕ ಹಗರಣದ ತನಿಖೆ ಮತ್ತಷ್ಟು ಅಕ್ರಮಗಳನ್ನು ಬಯಲುಗೊಳಿಸಿದೆ.  ನೋಟರಿ ವಕೀಲರನ್ನು ನೇಮಕ ಮಾಡಲು ಲಂಚ ಸ್ವೀಕರಿಸುತ್ತಿದ್ದ ಕಾನೂನು ಮತ್ತು ನ್ಯಾಯ ಸಚಿವಾಲಯದ ಟಿ.ಕೆ. ಮಲಿಕ್ ಅನ್ನು ಸಿಬಿಐ ಅಧಿಕಾರಿಗಳು ಬಂಧಿಸಿದರು. 


ಈ ಅಕ್ರಮಕ್ಕೆ ಸಹಕಾರ ನೀಡಿದ್ದ ವಕೀಲರಾದ ಜಿ.ಕೆ. ವೀಣಾ ಅವರನ್ನೂ ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


ಕೇಂದ್ರ ಸರ್ಕಾರದ ಮಾನ್ಯತೆಯ ನೋಟರಿ ವಕೀಲರ ನೇಮಕ ಹಾಗೂ ನೋಂದಣಿ ಜವಾಬ್ದಾರಿಯನ್ನು ಕಾನೂನು ವ್ಯವಹಾರ ವಿಭಾಗಕ್ಕೆ ವಹಿಸಲಾಗಿದೆ. ವಿಭಾಗದ ಬೆಂಗಳೂರು ಶಾಖೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಲಿಕ್, ಅಧಿಕಾರ ದುರುಪಯೋಗ ಮಾಡಿ ಲಂಚ ಪಡೆದು ನೋಟರಿ ವಕೀಲರ ನೇಮಕ ಮಾಡುತ್ತಿದ್ದ ಬಗ್ಗೆ ವಕೀಲರೊಬ್ಬರು ಸಿಬಿಐಗೆ ದೂರು ನೀಡಿದ್ದರು.


ದೂರು ಪಡೆದುಕೊಂಡು ಎಫ್‌ಐಆರ್‌ ದಾಖಲಿಸಿಕೊಂಡಿದ್ದ ಸಿಬಿಐ ಅಧಿಕಾರಿಗಳು ಬೆಂಗಳೂರಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಮಲಿಕ್ ಮತ್ತು ವಾಣಿ ಅವರನ್ನು ಬಂಧಿಸಿದ್ದರು.


ಟಿ.ಕೆ. ಮಲಿಕ್ ಅವರು ನೋಟರಿ ನೇಮಕಕ್ಕೆ ವಕೀಲರೊಬ್ಬರಿಂದ 50 ಸಾವಿರ ರೂ. ಲಂಚ ಕೇಳಿದ್ದರು. ಮತ್ತು 25000 ರೂ. ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿ ಮಲಿಕ್ ಅವರನ್ನು ಬಂಧಿಸಲಾಗಿದೆ. ಅವರು ನೀಡಿದ್ದ ಮಾಹಿತಿ ಆಧರಿಸಿ ವಾಣಿ ಅವರನ್ನು ಬಂಧಿಸಲಾಗಿದೆ.


ದಾಳಿ ವೇಳೆ ಮಲಿಕ್ ಅವರಿಂದ 4.32 ಲಕ್ಷ ರೂಪಾಯಿಗಳನ್ನು ಜಪ್ತಿ ಮಾಡಲಾಗಿದೆ. ಅದೆಲ್ಲವೂ ನೋಟರಿ ವಕೀಲರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಲಂಚದ ಹಣವಾಗಿದೆ ಎನ್ನಲಾಗಿದೆ.

ಗಾಜಿಯಾಬಾದ್ ಮತ್ತು ಬೆಂಗಳೂರಿನಲ್ಲಿ ಆರೋಪಿಗೆ ಸೇರಿದ್ದ ಎರಡು ಸ್ಥಳಗಳಿಗೆ ಅಧಿಕಾರಿಗಳು ತೆರಳಿ 34 ಲಕ್ಷ ರೂ.ಲಗಳನ್ನು ಜಪ್ತಿ ಮಾಡಲಾಗಿದೆ.


ಮಹತ್ವದ ಪ್ರಕರಣಗಳಲ್ಲಿ ಎದುರಾಳಿ ವಕೀಲರ ಜೊತೆಗೂ ಮಲಿಕ್ ಒಡನಾಡ ಇಟ್ಟುಕೊಂಡು ಪ್ರಕರಣವನ್ನು ಗೆಲ್ಲಲು ಸಹಕಾರ ನೀಡುತ್ತಿದ್ದರು ಎಂಬ ವಿಚಾರವನ್ನೂ ಪತ್ತೆ ಹಚ್ಚಲಾಗಿದೆ.


ದೇಶದ ಇತರ ರಾಜ್ಯಗಳ್ಲಲೂ ಇಂಥದ್ದೇ ಅಕ್ರಮಗಳು ನಡೆದಿರಬಹುದು ಎಂಬ ಸಂಶಯ ಇದ್ದು, ಆ ನಿಟ್ಟಿನಲ್ಲೂ ತನಿಖೆ ನಡೆಸಲಾಗಿದೆ.


ಇದನ್ನೂ ಓದಿ:

ನೋಟರಿ ನೇಮಕದಲ್ಲಿ ಲಂಚ: ಕೇಂದ್ರ ಸರ್ಕಾರದ ಅಧಿಕಾರಿಗಳ ವಿರುದ್ಧ ಸಿಬಿಐ ಎಫ್‌ಐಆರ್‌Ads on article

Advertise in articles 1

advertising articles 2

Advertise under the article