ನೋಟರಿ ನೇಮಕದಲ್ಲಿ ಲಂಚ: ಕೇಂದ್ರ ಸರ್ಕಾರದ ಅಧಿಕಾರಿಗಳ ವಿರುದ್ಧ ಸಿಬಿಐ ಎಫ್‌ಐಆರ್
ನೋಟರಿ ನೇಮಕದಲ್ಲಿ ಲಂಚ: ಕೇಂದ್ರ ಸರ್ಕಾರದ ಅಧಿಕಾರಿಗಳ ವಿರುದ್ಧ ಸಿಬಿಐ ಎಫ್‌ಐಆರ್
ನೋಟರಿ ವಕೀಲರ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ದೂರು ದಾಖಲಾಗಿದೆ.
ಕೇಂದ್ರ ಕಾನೂನು ಸಚಿವಾಲಯದ ಕಾನೂನು ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಸಲಹೆಗಾರ ಟಿ.ಕೆ. ಮಲಿಕ್ ಮತ್ತು ಇತರರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.
ನೋಟರಿ ಕೋಶದ ಹೆಚ್ಚುವರಿ ಕಾನೂನು ಸಲಹೆಗಾರರಾಗಿದ್ದ ಮಲ್ಲಿಕ್ ಅವರು ಬೆಂಗಳುರು ಕೋಶದ ಪ್ರಭಾರ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಈ ಸಂದರ್ಭದಲ್ಲಿ ನೋಟರಿ ನೇಮಕಾತಿ ಮಾಡಲು ಕೆಲವು ವಕೀಲರಿಂದ ಲಂಚ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ನೋಟರಿ ನೇಮಕ ಕೋರಿ ಅರ್ಜಿ ಸಲ್ಲಿಸಿದ ವಕೀಲರಿಂದ ಮಲಿಕ್ ಮತ್ತು ಇತರರು ಲಂಚ ಪಡೆಯುತ್ತಿದ್ದರು ಎಂದು ಸಿಬಿಐ ದಾಖಲಿಸಿಕೊಂಡಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರಿನ ವಕೀಲರಾದ ಜಿ.ಕೆ. ವಾಣಿ ಎಂಬವರು ಮಲಿಕ್ ಮತ್ತು ಇತರರ ಜೊತೆಗೆ ನಿರಂತರ ಸಂಪರ್ಕದಲ್ಲಿ ಇದ್ದರು.
ಐವರು ವಕೀಲರನ್ನು ನೋಟರಿಯನ್ನಾಗಿ ನೇಮಕ ಮಾಡಲು ತಲಾ ರೂ. 50,000/- ದಂತೆ ಲಂಚ ನೀಡಲು ಬೇಡಿಕೆ ಇಟ್ಟಿದ್ದರು. ವಾಣಿ ಅವರು ಕೂಡ ಈ ಲಂಚದ ಹಣ ನೀಡಲು ಒಪ್ಪಿಕೊಂಡಿದ್ದರು.
ಮೇ 8ರಂದು ಮಲಿಕ್ ಅವರನ್ನು ವಾಣಿ ಭೇಟಿ ಮಾಡಿ ಅಕ್ರಮ ನಡೆಸಿದ್ದರು ಎಂದು ಎಫ್‌ಐಆರ್‌ನಲ್ಲಿ ಮಾಹಿತಿ ಇದೆ.