-->
ಬಿಜೆಪಿ ಸೋಲಿಗೆ ಇದೇ ಪ್ರಮುಖ ಕಾರಣ: ರೇಣುಕಾಚಾರ್ಯ ಹೇಳಿದ್ದಿಷ್ಟು..!

ಬಿಜೆಪಿ ಸೋಲಿಗೆ ಇದೇ ಪ್ರಮುಖ ಕಾರಣ: ರೇಣುಕಾಚಾರ್ಯ ಹೇಳಿದ್ದಿಷ್ಟು..!

ಬಿಜೆಪಿ ಸೋಲಿಗೆ ಇದೇ ಪ್ರಮುಖ ಕಾರಣ: ರೇಣುಕಾಚಾರ್ಯ ಹೇಳಿದ್ದಿಷ್ಟು..!ಬಿಜೆಪಿ ಸೋಲಿಗೆ ನಾನಾ ಕಾರಣಗಳನ್ನು ನೀಡಲಾಗುತ್ತಿದೆ. ರಾಜಕೀಯ ಪಂಡಿತರು ವಿವಿಧ ಲೆಕ್ಕಾಚಾರಗಳನ್ನು ಮುಂದಿಡುತ್ತಿದ್ದಾರೆ. ಆದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪರಮಾಪ್ತ, ಮಾಜಿ ಸಚಿವ ರೇಣುಕಾಚಾರ್ಯ ತಮ್ಮದೇ ವಿಶ್ಲೇಷಣೆಗಳನ್ನು ಮಾಡಿದ್ದಾರೆ.

ಅವರು ಮಾಡಿರುವ ವಿಶ್ಲೇಷಣೆಯಲ್ಲಿ ಬಿಜೆಪಿ ಎಲ್ಲಿ ಎಡವಿದೆ ಎಂಬುದನ್ನು ಸವಿವರವಾಗಿ ನಾಡಿನ ಮುಂದಿಟ್ಟಿದ್ದಾರೆ. ಆ ವಿವರಗಳು ಹೀಗಿವೆ…

1) ಗುಜರಾತ್ ಮಾದರಿಯ ಪ್ರಯೋಗವೇ ರಾಜ್ಯ ಬಿಜೆಪಿ ಸೋಲಿಗೆ ಮುಳುವಾಯಿತು… ಹೊಸಬರಿಗೆ ಟಿಕೆಟ್ ನೀಡಿದ್ದು, ಕೆಲವೊಂದು ಕ್ಷೇತ್ರಗಳಲ್ಲಿ ಬಿಜೆಪಿ ಹಿನ್ನಡೆಗೆ ಕಾರಣವಾಯಿತು. ಕೆಲವೊಂದು ಕ್ಷೇತ್ರಗಳಲ್ಲಿ ಬಂಡಾಯವನ್ನು ಶಮನ ಮಾಡಲು ನಾಯಕತ್ವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ.

2) ಯಾವುದೇ ಗಮನಾರ್ಹ ಕಾರಣ ಇಲ್ಲದೆ, ಬಿ.ಎಸ್. ಯಡಿಯೂರಪ್ಪ ಅವರನ್ನು ತೆರೆ ಮರೆಗೆ ಸರಿಸಲಾಯಿತು. ಪ್ರಚಾರದಲ್ಲಾಗಲೀ, ಟಿಕೆಟ್ ಹಂಚಿಕೆಯಲ್ಲಾಗಲೀ ಯಡಿಯೂರಪ್ಪ ಅವರ ಅನುಭವ ಮತ್ತು ಸಾಮರ್ಥ್ಯವನ್ನು ಪರಿಗಣಿಸಲಿಲ್ಲ.

3) ಪಡಿತರ ವ್ಯವಸ್ಥೆಯಲ್ಲಿ 7 ಕೆ.ಜಿ. ಅಕ್ಕಿ ಬದಲಿಗೆ 5 ಕೆ.ಜಿ. ಅಕ್ಕಿ ನೀಡುವ ನಿರ್ಧಾರವೂ ಮತದಾರರ ಆಕ್ರೋಶಕ್ಕೆ ಕಾರಣವಾಯಿತು.

4) ಕಾಂಗ್ರೆಸ್ ನ ಐದು ಗ್ಯಾರಂಟಿಗಳು, ಉಚಿತ ಕೊಡುಗೆಗಳು ಮತ ಕ್ರೋಢೀಕರಣಕ್ಕೆ ನಾಂದಿ ಹಾಡಿತು.. ಉಚಿತ ಕೊಡುಗೆಗಳು ಜನರನ್ನು ಆಕರ್ಷಿಸಿದವು. ಬಿಜೆಪಿಯಲ್ಲಿ ಅಂತಹ ಆಕರ್ಷಕ ಯೋಜನೆಗಳನ್ನು ಘೋಷಿಸಲಿಲ್ಲ.

5) ಪಕ್ಷದ ವರಿಷ್ಟರ ಕೆಲ ತಪ್ಪು ನಿರ್ಧಾರಗಳು ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿತು…

ಈ ಪ್ರಮುಖ ವಿಷಯಗಳನ್ನು ಪಟ್ಟಿ ಮಾಡಿದ ರೇಣುಕಾಚಾರ್ಯ ತಮ್ಮ ಸೋಲು ಅತೀವ ದುಃಖ ತಂದಿದೆ. ಇನ್ನೆಂದೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.

 


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200