-->
ಜೂಜು ದಂಧೆಗೆ ಸಹಕಾರ: ಪೊಲೀಸ್ ಸಿಬ್ಬಂದಿಗೆ ಅಮಾನತು ಶಿಕ್ಷೆ

ಜೂಜು ದಂಧೆಗೆ ಸಹಕಾರ: ಪೊಲೀಸ್ ಸಿಬ್ಬಂದಿಗೆ ಅಮಾನತು ಶಿಕ್ಷೆ

ಜೂಜು ದಂಧೆಗೆ ಸಹಕಾರ: ಪೊಲೀಸ್ ಸಿಬ್ಬಂದಿಗೆ ಅಮಾನತು ಶಿಕ್ಷೆ

ಮಂಗಳೂರಿನಲ್ಲಿ ಜೂಜು ದಂಧೆಗೆ ಸಹಕಾರ ನೀಡುತ್ತಿದ್ದ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.


ಪೊಲೀಸ್ ಠಾಣೆಯ ಸ್ಪೆಷಲ್ ಬ್ರ್ಯಾಂಚ್‌ ಕಾನ್ಸ್‌ಟೆಬಲ್ ವಾಸುದೇವ ಚೌಹಾಣ್ ಅಮಾನತುಗೊಂಡಿರುವ ಸಿಬ್ಬಂದಿ. ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಈ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.


ಕೇರಳದ ಗಡಿ ಭಾಗದಲ್ಲಿ ಜೂಜಾಟ ನಡೆಸುತ್ತಿದ್ದ ಸ್ಥಳಕ್ಕೆ ಸಹಾಯಕ ಪೊಲೀಸ್ ಕಮಿಷನರ್‌ (ಎಸಿಪಿ) ಧನ್ಯ ನಾಯಕ್ ದಾಖಲಿಸಿ ನಡೆಸಿ ಜೂಜಾಟದಲ್ಲಿ ತೊಡಗಿದ್ದ ಆರೋಪಿಗಳನ್ನು ಬಂಧಿಸಿದ್ದರು.


ದಾಳಿಯ ಸಮಯದಲ್ಲಿ ಪ್ರಮುಖ ಆರೋಪಿಯಾಗಿದ್ದ ತಲಪಾಡಿ ಗ್ರಾಮ ಪಂಚಾಯತ್ ಸದಸ್ಯ ಪರಾರಿಯಾಗಿದ್ದ. ಆ ಬಳಿಕ ಆತನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದರುದಾಳಿಯ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ವಾಸುದೇವ ಆರೋಪಿಗಳಿಗೆ ಮಾಹಿತಿ ನೀಡಿದ್ದು ಬಯಲಿಗೆ ಬಂತು. 


ಆರೋಪಿಗಳ ಜೊತೆಗೆ ಕೃತ್ಯದಲ್ಲಿ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಕಮಿಷನರ್ ಆರೋಪಿ ಪೊಲೀಸ್ ವಾಸುದೇವ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶಿಸಿದರು.Ads on article

Advertise in articles 1

advertising articles 2

Advertise under the article