-->
ಚಿತ್ರಮಂದಿರದಲ್ಲಿ ಮೂಷಿಕ ಪ್ರಹಾರ: ಮಾಲೀಕನ ಜೇಬಿಗೆ ಬಿತ್ತು ಕತ್ತರಿ…!

ಚಿತ್ರಮಂದಿರದಲ್ಲಿ ಮೂಷಿಕ ಪ್ರಹಾರ: ಮಾಲೀಕನ ಜೇಬಿಗೆ ಬಿತ್ತು ಕತ್ತರಿ…!

ಚಿತ್ರಮಂದಿರದಲ್ಲಿ ಮೂಷಿಕ ಪ್ರಹಾರ: ಮಾಲೀಕನ ಜೇಬಿಗೆ ಬಿತ್ತು ಕತ್ತರಿ…!ಸಿನಿಮಾ ಮಂದಿರದಲ್ಲಿ ಚಿತ್ರ ಪ್ರದರ್ಶನದ ವೇಳೆ ಪ್ರೇಕ್ಷಕನಿಗೆ ಇಲಿ ಕಚ್ಚಿದ ಹಿನ್ನೆಲೆಯಲ್ಲಿ ಗ್ರಾಹಕನಿಗೆ 67282/- ರೂ. ಪರಿಹಾರ ನೀಡುವಂತೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ಹೊರಡಿಸಿದ ಘಟನೆ ಅಸ್ಸಾಂನಲ್ಲಿ ನಡೆದಿದೆ.

ಅಸ್ಸಾಂ ರಾಜ್ಯದ ಕಾಮರೂಪ್ ಜಿಲ್ಲಾ ಗ್ರಾಹಕ ವ್ಯವಹಾರಗಳ ಪರಿಹಾರ ಆಯೋಗ ಅಧ್ಯಕ್ಷ ಎ.ಎಫ್.ಎ. ಬೋರಾ ಮತ್ತು ಇಬ್ಬರು ಸದಸ್ಯರ ನ್ಯಾಯಪೀಠ ಈ ಪರಿಹಾರದ ಆದೇಶ ಹೊರಡಿಸಿದೆ.

ಫಿಲಂ ವೀಕ್ಷಣೆಗೆ ಸಿನಿಮಾ ಮಂದಿರಕ್ಕೆ ಬರುವ ಪ್ರೇಕ್ಷಕರ ಹಿತ ಕಾಪಾಡುವುದು ಚಿತ್ರ ಮಂದಿರದ ಮಾಲಕರ ಕರ್ತವ್ಯ. ಟಾಕೀಸ್ ನ್ನು ಸ್ವಚ್ಛವಾಗಿ ಇಡುವುದು ಅವರ ಕರ್ತವ್ಯ ಕೂಡ.  ಈ ಕರ್ತವ್ಯ ಲೋಪ ಋಜುವಾತು ಆದ ಹಿನ್ನೆಲೆಯಲ್ಲಿ ಮಾಲೀಕ ತನ್ನ ಗ್ರಾಹಕನಿಗೆ ಸೂಕ್ತ ಪರಿಹಾರ ನೀಡಬೇಕಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ಬಿಡುವಿನ ವೇಳೆ ಗ್ರಾಹಕರು ತಿನ್ನುವ ಸ್ನ್ಯಾಕ್ಸ್, ಪಾಪ್ ಕಾರ್ನ್ ಮುಂತಾದ ಪದಾರ್ಥಗಳನ್ನು ತಿನ್ನಲು ಇಲಿಗಳು, ಹೆಗ್ಗಣಗಳು ಓಡಾತ್ತಿದ್ದವು ಎಂಬ ಮೌಖಿಕ ಸಾಕ್ಷ್ಯವನ್ನು ಪರಿಗಣಿಸಿ ಈ ಆದೇಶ ಹೊರಡಿಸಲಾಗಿದೆ.

ಅಲ್ಲದೆ, ಸಿನಿಮಾ ಮಂದಿರವನ್ನು ಹೈಜನಿಕ್ ಆಗಿ ಆರೋಗ್ಯಕರವಾಗಿ ಇಡಬೇಕಾಗಿತ್ತು. ಕಸ ಗುಡಿಸುತ್ತಿರಲಿಲ್ಲ. ನೈರ್ಮಲ್ಯ ಕಾಪಾಡುವಲ್ಲಿ  ಚಿತ್ರ ಮಂದಿರದ ಮಾಲಕರು ಸೂಕ್ತ ಅಸ್ಥೆ ವಹಿಸಿಲ್ಲ ಎಂಬುದು ಎದ್ದುಕಾಣುತ್ತಿದೆ ಎಂದು ನ್ಯಾಯಪೀಠ ಹೇಳಿದೆ.

ಚಿತ್ರದ ಪ್ರದರ್ಶನದ ವೇಳೆ ತಮಗೆ ಏನೋ ಕಚ್ಚಿ ರಕ್ತ ಸುರಿಯುತ್ತಿರುವ ಅನುಭವ ಆಯಿತು. ಏನು ಕಚ್ಚಿದೆ ಎಂದು ತಕ್ಷಣಕ್ಕೆ ಗೊತ್ತಾಗಲಿಲ್ಲ. ಚಿತ್ರದ ಮಧ್ಯಂತರದ ಬಿಡುವಿನ ವೇಳೆ ರಕ್ತ ಸೋರುವುದು ಗಮನಕ್ಕೆ ಬಂದ ನಂತರ ತಮ್ಮನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ಸಂದರ್ಭದಲ್ಲೂ ಥಿಯೇಟರ್ ವ್ಯವಸ್ಥಾಪಕರು ನಿರ್ಲಕ್ಷ್ಯ ವಹಿಸಿದ್ದರು ಎಂಬುದಾಗಿ ದೂರುದಾರರು ತಮ್ಮ ದೂರಿನಲ್ಲಿ ದೂರಿದ್ದರು.

ಗ್ರಾಹಕರ ಮಾನಸಿಕ ಯಾತನೆಗೆ 3.5 ಲಕ್ಷ ರೂ., ನೋವು ಮತ್ತು ಸಂಕಟಕ್ಕೆ ರೂ. 2.5 ಲಕ್ಷ ಹಾಗೂ ಉಳಿದ ವೈದ್ಯಕೀಯ ವೆಚ್ಚ ಸೇರಿದಂತೆ 6 ಲಕ್ಷ ರೂ. ಪರಿಹಾರ ನೀಡುವಂತೆ ಸಂತ್ರಸ್ತ ಮಹಿಳೆ  ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಕೋರಿಕೊಂಡಿದ್ದರು.

ದೆಹಲಿಯ ಉಪಹಾರ್ ಚಿತ್ರ ಮಂದಿರದ ಅಗ್ನಿದುರಂತದ ಪ್ರಕರಣಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ ಗ್ರಾಹಕರ ನ್ಯಾಯಾಲಯ ಈ ತೀರ್ಪು ನೀಡಿತು.

 

Ads on article

Advertise in articles 1

advertising articles 2

Advertise under the article