-->
ವೃತ್ತಿ ದುರ್ನಡತೆ ಆರೋಪ ಸಾಬೀತು: ಮಂಗಳೂರು, ಬೆಳಗಾವಿ ವಕೀಲರ ಸನದು ಶಾಶ್ವತ ರದ್ದು!

ವೃತ್ತಿ ದುರ್ನಡತೆ ಆರೋಪ ಸಾಬೀತು: ಮಂಗಳೂರು, ಬೆಳಗಾವಿ ವಕೀಲರ ಸನದು ಶಾಶ್ವತ ರದ್ದು!

ವೃತ್ತಿ ದುರ್ನಡತೆ ಆರೋಪ ಸಾಬೀತು: ಮಂಗಳೂರು, ಬೆಳಗಾವಿ ವಕೀಲರ ಸನದು ಶಾಶ್ವತ ರದ್ದು!





ವಕೀಲ ವೃತ್ತಿಯಲ್ಲಿ ದುರ್ನಡತೆ ತೋರಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಕೀಲರಿಬ್ಬರ ಸನದು ರದ್ದುಗೊಳಿಸಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಆದೇಶ ಹೊರಡಿಸಿದೆ.



ಈ ವಕೀಲರಲ್ಲಿ ಒಬ್ಬರು ಕರಾವಳಿ ಕರ್ನಾಟಕ ಹಾಗೂ ಇನ್ನೊಬ್ಬರು ಬೆಳಗಾವಿಯವರಾಗಿದ್ದಾರೆ. ಮಂಗಳೂರಿನ ವಕೀಲರಾದ ಡಿ. ಪದ್ಮನಾಭ ಕುಮಾರ್ ಹಾಗೂ ಬೆಳಗಾವಿಯ ಪ್ರಭು ಶಿವಪ್ಪ ಯತ್ನಟ್ಟಿ ಅವರೇ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಿಂದ ಶಿಕ್ಷೆಗೊಳಪಟ್ಟವರಾಗಿದ್ದಾರೆ.



ಸನದು ರದ್ದುಗೊಂಡ ಈ ವಕೀಲರು ದೇಶದ ಯಾವುದೇ ನ್ಯಾಯಾಲಯ ಅಥವಾ ಪ್ರಾಧಿಕಾರದ ಮುಂದೆ ವಕೀಲಿಕೆ ಮಾಡದಂತೆ ಶಾಶ್ವತವಾಗಿ ತಡೆ ಹಿಡಿಯಲಾಗಿದೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಅಧ್ಯಕ್ಷ ವಿಶಾಲ ರಘು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.


ತಮ್ಮ ಕಕ್ಷಿದಾರರಿಗೆ ಸೂಕ್ತ ನ್ಯಾಯ ದೊರಕಿಸಿಕೊಡಲು ವಿಫಲರಾದ ಹಾಗೂ ಕಕ್ಷಿದಾರರಿಗೆ ವಂಚನೆ ಮಾಡಿದ ಆರೋಪ ರುಜುವಾತು ಆದ ಕಾರಣ ಸಮರ್ಪಕ ತನಿಖೆಯ ನಂತರ ಈ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.



ಮಂಗಳೂರಿನ ಡಿ. ಪದ್ಮನಾಭ ಕುಮಾರ್ ಹಾಗೂ ಬೆಳಗಾವಿಯ ವಕೀಲರಾದ ಪ್ರಭು ಶಿವಪ್ಪ ಯತ್ನಟ್ಟಿ ಸನದು ರದ್ದುಗೊಳಿಸಲಾಗಿದೆ. ಹಾಗೂ ರೂ. 20,000/- ದಂಡ ವಿಧಿಸಲಾಗಿದೆ.


ಈ ಇಬ್ಬರ ವಿರುದ್ಧದ ವೃತ್ತಿ ದುರ್ನಡತೆ ಆರೋಪ ವಿಚಾರಣೆ ನಡೆಸಿದ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಶಿಸ್ತು ಕ್ರಮ ಸಮಿತಿ, ವಕೀಲರ ವಿರುದ್ಧದ ಆರೋಪ ಸಾಬೀತು ಆದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ಪರಿಷತ್ತು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200