ವಿಚ್ಚೇದನ ಪ್ರಕರಣ: ವಾದಕ್ಕೆ ಅವಕಾಶ ನೀಡಿಲ್ಲ ಎಂದು ತಲೆಕೆಟ್ಟು ಜಡ್ಜ್ ಕಾರನ್ನೇ ಪುಡಿ ಮಾಡಿದ ಪ್ರತಿವಾದಿ!
ವಿಚ್ಚೇದನ ಪ್ರಕರಣ: ವಾದಕ್ಕೆ ಅವಕಾಶ ನೀಡಿಲ್ಲ ಎಂದು ತಲೆಕೆಟ್ಟು ಜಡ್ಜ್ ಕಾರನ್ನೇ ಪುಡಿ ಮಾಡಿದ ಪ್ರತಿವಾದಿ!
ಕೌಟುಂಬಿಕ ಕಲಹ ಪ್ರಕರಣದಲ್ಲಿ ಜಡ್ಜ್ ಮತ್ತು ವಾದಿ(ಪತ್ನಿ) ಪರ ವಕೀಲರು ಸೇರಿ ತಮಗೆ ಸಹಜ ನ್ಯಾಯದಿಂದ ವಂಚಿತರನ್ನಾಗಿ ಮಾಡಿದ್ದಾರೆ ಹಾಗೂ ಮಹಿಳಾ ತನಗೆ ವಾದ ಮಂಡಿಸಲು ಅವಕಾಶ ನೀಡಲಿಲ್ಲ ಎಂದು ಕ್ಷುದ್ರಗೊಂಡ ಪ್ರತಿವಾದಿ ಪತಿ ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಲಾಗಿದ್ದ ನ್ಯಾಯಾಧೀಶರ ಕಾರನ್ನೇ ಪುಡಿ ಮಾಡಿ ತನ್ನ ಆಕ್ರೋಶವನ್ನು ಹೊರಗೆಡಹಿದ್ದಾನೆ.
ಈ ಘಟನೆ ನಡೆದಿರುವುದು ಕೇರಳದ ತಿರುವಲ್ಲ ನ್ಯಾಯಾಲಯ ಆವರಣದಲ್ಲಿ. ಈ ದೃಶ್ಯ ವೈರಲ್ ಆಗಿದ್ದು, ಪ್ರತಿವಾದಿ ಪತಿ, ಸುಮಾರು 55 ವರ್ಷ ಪ್ರಾಯದ ವ್ಯಕ್ತಿ ನ್ಯಾಯಾಲಯದಿಂದ ಹೊರ ಬಂದ ಬಳಿಕ ಜಡ್ಜ್ ಕಾರಿನ ಗಾಜನ್ನು ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದ. ಪೊಲೀಸರು ಸ್ಥಳಕ್ಕೆ ಆಗಮಿಸುತ್ತಲೇ ತನ್ನನ್ನು ಪೊಲೀಸರ ವಶಕ್ಕೆ ಒಪ್ಪಿಸಿಕೊಂಡ.
ಕೋರ್ಟ್ ಕಾರ್ಯಕ್ಕೆ ಅಡ್ಡಿ, ಬೆದರಿಕೆ, ಸಾರ್ವಜನಿಕ ಆಸ್ತಿಗೆ ಆಹನಿ ಮೊದಲಾದ ಆರೋಪಗಳಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಘಟನೆಯ ವಿವರ:
ಹೆಂಡತಿ ವಿರುದ್ಧ ಕಾದಾಟ ನಡೆಸಿರುವ ಆರೋಪಿ ಕೋರ್ಟ್‌ನಲ್ಲಿ ತನ್ನ ಪರವಾಗಿ ತಾನೇ ಸ್ವತಃ ವಾದಿಸುತ್ತಿದ್ದ. ಕೋರ್ಟ್‌ನಿಂದ ತನಗೆ ಸ್ವಾಭಾವಿಕ ನ್ಯಾಯ ಸಿಗುತ್ತಿಲ್ಲ ಎಂದು ಆರೋಪಿಸಿದ್ದ. ಈ ವ್ಯಕ್ತಿಯ ಜೊತೆಗಿನ ವೈವಾಹಿಕ ಬದುಕಿನಿಂದ ತನಗೆ ಬಿಡುಗಡೆ (ವಿಚ್ಚೇದನ) ಸಿಗಬೇಕು ಎಂದು ಪತ್ನಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ತನ್ನ ಪತ್ನಿಯ ವಕೀಲರು ಮತ್ತು ನ್ಯಾಯಾಧೀಶರು ಇಬ್ಬರೂ ಸೇರಿಕೊಂಡು ತನ್ನ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಆತ ಆರೋಪಿಸಿದ್ದರು. ತನ್ನ ವಾದವನ್ನು ನ್ಯಾಯಾಧೀಶರು ಸರಿಯಾಗಿ ಆಲಿಸುತ್ತಿಲ್ಲ ಎಂದು ಆತನ ದೂರು.
ಆದರೆ, ನ್ಯಾಯಾಲಯದ ವಿರುದ್ಧ ದೂರು ಹೇಳುತ್ತಿರುವುದು ಇದೇ ಮೊದಲಲ್ಲ. 2017ರಲ್ಲಿ ಪಟ್ಟಣಂತಿಟ್ಟ ಕೌಟುಂಬಿಕ ನ್ಯಾಯಾಲಯದಲ್ಲಿ ಮೊದಲು ಪತ್ನಿ ಡೈವರ್ಸ್ ಕೋರಿ ಅರ್ಜಿ ಸಲ್ಲಿಸಿದ್ದು, ಪ್ರಕರಣ ದಾಖಲಾಗಿತ್ತು. ಆಧರೆ, ಈ ನ್ಯಾಯಾಲಯದಲ್ಲಿ ತನಗೆ ಯಾವುದೇ ನಂಬಿಕೆ ಇಲ್ಲ, ವಿಚಾರಣೆ ಸರಿಯಾಗಿ ನಡೆಯುತ್ತಿದ್ದ ಎಂದು ಆತ ಈ ಅರ್ಜಿ ವಿಚಾರಣೆಯನ್ನು ತಿರುವಳ್ಳ ಕೋರ್ಟ್‌ಗೆ ವರ್ಗಾವಣೆ ಮಾಡಿಸಿಕೊಂಡಿದ್ದ.