
ಆಡಳಿತ ನ್ಯಾಯಧೀಕರಣ ತರಬೇತಿ: ಕಾನೂನು ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಆಡಳಿತ ನ್ಯಾಯಧೀಕರಣ ತರಬೇತಿ: ಕಾನೂನು ವಿದ್ಯಾರ್ಥಿಗಳಿಂದ
ಅರ್ಜಿ ಆಹ್ವಾನ
ಸ ಮಾಜ ಕಲ್ಯಾಣ ಇಲಾಖೆಯಿಂದ 2023-24ನೇ ಸಾಲಿನ
ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಗೆ ಎರಡು ವರ್ಷದ ಆಡಳಿತ ನ್ಯಾಯಾಧಿಕರಣ ವಿಷಯದಲ್ಲಿ ತರಬೇತಿ ನೀಡಲು
ಆನ್ ಲೈನ್ ಮೂಲಕ ಅರ್ಜಿಗಳನ್ನು
ಆಹ್ವಾನಿಸಲಾಗಿದೆ.
ಅರ್ಹ
ಪರಿಶಿಷ್ಟ ಜಾತಿಯ ಕಾನೂನು ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು
ಜುಲೈ 15,2023 ಕೊನೆಯ ದಿನವಾಗಿರುತ್ತದೆ.
ಅರ್ಜಿ
ಸಲ್ಲಿಸುವಾಗ ಸಂಬಂಧಪಟ್ಟ ದಾಖಲಾತಿಗಳ ದೃಢೀಕೃತ ಪ್ರತಿಗಳನ್ನು ಅರ್ಜಿಯೊಂದಿಗೆ ಸಮಾಜ ಕಲ್ಯಾಣ ಇಲಾಖೆಯ
ಕಚೇರಿಗೆ ಸಲ್ಲಿಸತಕ್ಕದ್ದು.
ಅರ್ಜಿಗಳನ್ನು
ವೆಬ್ ಸೈಟ್ ಮೂಲಕವೂ ಸಲ್ಲಿಸಬಹುದಾಗಿದೆ. ವೆಬ್ ಸೈಟ್ ವಿವರ: www.sw.kar.nic.in
ಹೆಚ್ಚಿನ
ಹಾಗೂ ವಿಸ್ತೃತ ಮಾಹಿತಿಗಾಗಿ ನಿಮ್ಮ ಸಮೀಪದ ತಾಲೂಕು ಯಾ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಕಚೇರಿಗೆ
ಭೇಟಿ ನೀಡಿ ಉಪ ನಿರ್ದೇಶಕರು ಯಾ ಸಹಾಯಕ ನಿರ್ದೇಶಕರಿಂದ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.