"ವಕೀಲರ ಸೇವೆ" ವಾಣಿಜ್ಯ ಚಟುವಟಿಕೆಯಲ್ಲ: ವಾಣಿಜ್ಯ ತೆರಿಗೆ ವಿಧಿಸುವಂತಿಲ್ಲ
"ವಕೀಲರ ಸೇವೆ" ವಾಣಿಜ್ಯ ಚಟುವಟಿಕೆಯಲ್ಲ: ವಾಣಿಜ್ಯ ತೆರಿಗೆ ವಿಧಿಸುವಂತಿಲ್ಲ
ವಕೀಲರು ತಮ್ಮ ಕಕ್ಷಿದಾರರಿಗೆ ನೀಡುವ ವೃತ್ತಿಪರ ಸೇವೆಯನ್ನು ವಾಣಿಜ್ಯಾತ್ಮಕವಾಗಿ ನೋಡುವಂತಿಲ್ಲ. ಹಾಗಾಗಿ, ವಕೀಲರ ಶುಲ್ಕವನ್ನು ವಾಣಿಜ್ಯ ಸಂಸ್ಥೆ ವರ್ಗದಡಿ ವಾಣಿಜ್ಯ ತೆರಿಗೆ ವಿಧಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಆದೇಶ ನೀಡಿದೆ.
ನ್ಯಾ. ನಜ್ಮಿ ವಜೀರಿ ಹಾಗೂ ಸುಧೀರ್ ಕುಮಾರ್ ಜೈನ್ ಅವರಿದ್ದ ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ. 2015ರ ಜನವರಿಯಲ್ಲಿ ದೆಹಲಿ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಪೀಠ ಇತ್ಯರ್ಥಗೊಳಿಸಿತು.
ವಕೀಲರ ವೃತ್ತಿಪರ ಸೇವೆಯು ವಾಣಿಜ್ಯ ಚಟುವಟಿಕೆಯಲ್ಲ.. ಮತ್ತು ವೃತ್ತಿ ಶುಲ್ಕಕ್ಕೆ ವಾಣಿಜ್ಯ ತೆರಿಗೆ ವಿಧಿಸುವಂತಿಲ್ಲ ಎಂದು ತೆರಿಗೆ ಕಾಯ್ದೆಯನ್ನು ಉಲ್ಲೇಖಿಸಿದ ನ್ಯಾಯಪೀಠ, ಏಕಸದಸ್ಯ ಪೀಠನೀಡಿದ ತೀರ್ಪಿಗೆ ಮಧ್ಯಪ್ರವೇಶ ಮಾಡುವ ಯಾವುದೇ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿತು.
ವೃತ್ತಿಪರ ಚಟವಟಿಕೆಯನ್ನು ವಾಣಿಜ್ಯ ಚಟುವಟಿಕೆ ಎಂದು ಕಾನೂನಿನಲ್ಲಿ ಎಲ್ಲೂ ಹೇಳಿಲ್ಲ. ಹಾಗಾಗಿ ವಕೀಲರನ್ನು ಕರ್ಮಷಿಯಲ್ ಟ್ಯಾಕ್ಸ್ ಅಡಿ ತೆರಿಗೆ ವ್ಯಾಪ್ತಿಗೆ ಸೇರಿಸುವಂತಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.
ಪ್ರಕರಣ: ದಕ್ಷಿಣ ದೆಹಲಿ ಮಹಾನಗರ ಪಾಲಿಕೆ Vs ಬಿ.ಎನ್. ಮಾಗೊನ್
(ದೆಹಲಿ ಹೈಕೋರ್ಟ್)
.