-->
ದೇವಸ್ಥಾನದ ಭೂಮಿಯ ಮಾಲಕತ್ವ: ಗೊಂದಲ ಬಗೆಹರಿಸಿದ ಸುಪ್ರೀಂ ಕೋರ್ಟ್ ತೀರ್ಪು!

ದೇವಸ್ಥಾನದ ಭೂಮಿಯ ಮಾಲಕತ್ವ: ಗೊಂದಲ ಬಗೆಹರಿಸಿದ ಸುಪ್ರೀಂ ಕೋರ್ಟ್ ತೀರ್ಪು!

ದೇವಸ್ಥಾನದ ಭೂಮಿಯ ಮಾಲಕತ್ವ: ಗೊಂದಲ ಬಗೆಹರಿಸಿದ ಸುಪ್ರೀಂ ಕೋರ್ಟ್ ತೀರ್ಪು!





ದೇವಸ್ಥಾನಕ್ಕೆ ಮೀಸಲಾದ ಭೂಮಿಯ ಒಡೆತನ ಯಾರಿಗೆ ಸೇರಿದ್ದು ಎಂಬ ಗೊಂದಲವನ್ನು ಸುಪ್ರೀಂ ಕೋರ್ಟ್ ತನ್ನ ಮಹತ್ವದ ತೀರ್ಪಿನಲ್ಲಿ ಬಗೆಹರಿಸಿದೆ.



ದೇವಸ್ಥಾನದ ಅರ್ಚಕ ಯಾ ಪೂಜಾರಿಯು ದೇವಸ್ಥಾನದ ಸ್ವತ್ತಿನ ಒಡೆಯ ಅಲ್ಲ. ದೇವರೇ ನಿಜವಾದ ಮಾಲೀಕ ಎಂದು ಆದೇಶ ಹೊರಡಿಸಿದೆ.



ದೇವಸ್ಥಾನಗಳಿಗೆ ಮೀಸಲಾದ ಭೂದಾಖಲೆಗಳಲ್ಲಿ ಅರ್ಚಕರ ಹೆಸರನ್ನು ಸೇರಿಸುವುದಕ್ಕೆ ಉದ್ಭವಿಸಿರುವ ಗೊಂದಲ ಕುರಿತ ಪ್ರಕರಣದ ವಿಚಾರಣೆ ನಡೆಸಿದ ಹೇಮಂತ್ ಗುಪ್ತಾ ಮತ್ತು ಎ.ಎಸ್. ಬೋಪಣ್ಣ ಅವರಿದ್ದ ನ್ಯಾಯಪೀಠ ಈ ಮಹತ್ವದ ಆದೇಶವನ್ನು ಹೊರಡಿಸಿದೆ.

ಪುರೋಹಿತರು, ಅರ್ಚಕರು ಅಥವಾ ಪೂಜೆ ಮಾಡುವ ಪೂಜಾರಿ ದೇವಸ್ಥಾನದ ಆಸ್ತಿಯ ನಿರ್ವಹಣೆಗಾಗಿ ಮಾತ್ರ ಭೂಮಿಯ ಮೇಲಿನ ತಾತ್ಕಾಲಿಕ ಒಡೆತನ ಹೊಂದಬಹುದಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.



ಕಲ್ಲಿನ ವಿಗ್ರಹವಾಗಿರುವ ಭಗವಂತನ ಹೆಸರಿನಲ್ಲಿ ಇರುವ ಕೋಟ್ಯಂತರ ರೂ. ಬೆಲೆ ಬಾಳುವ ಭೂಮಿಯನ್ನು ಹೇಗೆ ನಿರ್ವಹಿಸುವುದು? ದೇವಸ್ಥಾನದ ನಿತ್ಯದ ಚಟುವಟಿಕೆಗಳು, ಬೆಳವಣಿಗೆಗಳನ್ನು ನಿಭಾಯಿಸುವವರು, ನೋಡಿಕೊಳ್ಳುವವರು ಯಾರು? ಪರಭಾರೆ ವ್ಯವಹಾರ ಹೇಗೆ ನಡೆಸುವುದು ಎಂಬ ಗೊಂದಲಗಳು ಉಂಟಾಗಿತ್ತು. ಈ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು. 


ಈ ಕುರಿತ ಗೊಂದಲ, ವಿವಾದಗಳಿಗೆ ಸುಪ್ರೀಂ ಕೋರ್ಟ್‌ನ ಈ ತೀರ್ಪು ಉತ್ತರ ನೀಡಿದೆ.

ದೇವಸ್ಥಾನಕ್ಕೆ ಸಂಬಂಧಿಸಿದ ಸೊತ್ತಿನ ವಿಷಯದಲ್ಲಿ ಭೂದಾಖಲೆಗಳ ಮಾಲೀಕತ್ವದ ಕಾಲಂನಲ್ಲಿ ದೇವರ ಹೆಸರು ಮಾತ್ರ ಇರಬೇಕು. ದೇವರೇ ನಿರ್ದಿಷ್ಟ ಭೂಮಿಯ ನಿಜವಾದ ಮಾಲೀಕ. ಅಧಿಕೃತ ವಾರಿಸುದಾರರೂ ದೇವರೇ ಆಗಿರುತ್ತಾರೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.


ಭೂಮಿ ಬಳಸಿಕೊಂಡು ವೃತ್ತಿ ಕೈಗೊಳ್ಳುವುದಾದರೆ ಅದು ಕೂಡ ದೇವರ ಮಾಲೀಕತ್ವದ ಅಡಿಯಲ್ಲಿಯೇ ಇರಬೇಕು. ಆದರೆ ವೃತ್ತಿ ನಿರ್ವಹಣೆಗೆ ಸೇವಕರನ್ನು ನೇಮಕ ಮಾಡಿಕೊಳ್ಳಬಹುದಾಗಿದೆ. ಅಂತಹ ಸೇವಕರ ಹೆಸರನ್ನು ಭೂ ದಾಖಲೆಗಳಲ್ಲಿ ನಮೂದಿಸುವ ಅಗತ್ಯ ಇಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಸ್ಪಷ್ಟ ನಿರ್ದೇಶನವನ್ನು ನೀಡಿದೆ.

ಈ ವಿಷಯದಲ್ಲಿ ಕಾನೂನು ಸ್ಪಷ್ಟವಾಗಿದೆ. ಪುರೋಹಿತರು, ಅರ್ಚಕರು ದೇವಸ್ಥಾನಕ್ಕೆ ಸಂಬಂಧಿಸಿದ ಕೃಷಿ ಭೂಮಿಯ ಗೇಣಿದಾರ ಅಥವಾ ಸರ್ಕಾರಿ ಬೋಗಿದಾರ ಅಥವಾ ಮಾಫಿ ಭೂಮಿಯ ಬಾಡಿಗೆದಾರ ಅಲ್ಲ ಎಂದು ಕಾಯ್ದೆ ಹೇಳುತ್ತದೆ.


ಆದರೆ, ದೇವಸ್ಥಾನದ ನಿರ್ವಹಣೆಯ ಉದ್ದೇಶಕ್ಕೆ ಆಡಳಿತ ಮಂಡಳಿಯ ಮೂಲಕ ತಾತ್ಕಾಲಿಕ ಉಳುಮೆ ಒಡೆತನವನ್ನು ಹೊಂದಬಹುದಾಗಿದೆ. ಖಾಯಂ ಮಾಲೀಕತ್ವ ಮಾತ್ರ ದೇವರದ್ದೇ ಆಗಿರುತ್ತದೆ ಎಂದು ತೀರ್ಪು ಸ್ಪಷ್ಟವಾಗಿ ಹೇಳಿದೆ.



ಪ್ರಕರಣ: ಮಧ್ಯಪ್ರದೇಶ Vs ಪೂಜಾರಿ ಉತ್ತಾನ್ ಆವಾಮ್ ಕಲ್ಯಾಣ ಸಮಿತಿ

ಸುಪ್ರೀಂ ಕೋರ್ಟ್: CA 4850/2021 Dated 06-09-2021


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200