-->
ಯುವ ಕಾನೂನು ಪದವೀಧರರಿಗೆ ಮಾಸಿಕ ರೂ. 10,000/- ಶಿಷ್ಯವೇತನ- ಕೂಡಲೇ ಅರ್ಜಿ ಸಲ್ಲಿಸಿ!

ಯುವ ಕಾನೂನು ಪದವೀಧರರಿಗೆ ಮಾಸಿಕ ರೂ. 10,000/- ಶಿಷ್ಯವೇತನ- ಕೂಡಲೇ ಅರ್ಜಿ ಸಲ್ಲಿಸಿ!

ಯುವ ಕಾನೂನು ಪದವೀಧರರಿಗೆ ಮಾಸಿಕ ರೂ. 10,000/- ಶಿಷ್ಯವೇತನ- ಕೂಡಲೇ ಅರ್ಜಿ ಸಲ್ಲಿಸಿ!

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವ ವಕೀಲರಿಗೆ ಕಾನೂನು ತರಬೇತಿ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಆರ್ಥಿಕ ನೆರವು ನೀಡುತ್ತದೆ. ಈ ನಿಟ್ಟಿನಲ್ಲಿ ಇಲಾಖೆಯು ತನ್ನ ಸ್ಟೈಫಂಡ್ ಯೋಜನೆಯ ಫಲಾನುಭವಿಗಳಾಗಲು ಅರ್ಹ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನಿಸಿದೆ.ಅರ್ಹ ಅಭ್ಯರ್ಥಿಗಳಿಗೆ ಎರಡು ವರ್ಷಗಳ ಕಾಲ ಪ್ರತಿ ತಿಂಗಳು ರೂ. 10,000/- ಶಿಷ್ಯವೇತನ ಪಾವತಿಸಲಾಗುತ್ತದೆ ಎಂದು ಇಲಾಖೆ ತನ್ನ ಪ್ರಕಟಣೆ ಮೂಲಕ ತಿಳಿಸಿದೆ.ಆಸಕ್ತರು ಜುಲೈ 17, 2023ರೊಳಗೆ ಇಲಾಖೆಯ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಅಂತರ್ಜಾಲ ತಾಣವನ್ನು ಕ್ಲಿಕ್ ಮಾಡಬಹುದು.


ಅಭ್ಯರ್ಥಿಗಳ ಆಯ್ಕೆಗೆ ಮಾನದಂಡ:

# ಅರ್ಜಿ ಸಲ್ಲಿಸುವ ದಿನಾಂಕದಂದು ಅಭ್ಯರ್ಥಿಯು ಕಾನೂನು ಪದವಿ ಪಡೆದು ಎರಡು ವರ್ಷಗಳು ಮೀರಿರಬಾರದು


# ತರಬೇತಿಯನ್ನು ಆಯಾ ಜಿಲ್ಲೆಯಲ್ಲೇ ಪಡೆದುಕೊಳ್ಳತಕ್ಕದ್ದು.


# ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದಂದು ಅಭ್ಯರ್ಥಿಯ ವಯಸ್ಸು 40 ಮೀರಿರಬಾರದು.


#  ಆಯ್ಕೆಯಾದ ಅಭ್ಯರ್ಥಿಗಳು ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್‌, ಸರ್ಕಾರಿ ವಕೀಲರು ಅಥವಾ 20 ವರ್ಷಗಳಿಗೆ ಕಡಿಮೆ ಇಲ್ಲದಂತೆ ವಕೀಲ ವೃತ್ತಿಯಲ್ಲಿ ಸೇವೆ ಸಲ್ಲಿಸಿರುವ ನ್ಯಾಯವಾದಿಗಳ ಬಳಿ ತರಬೇತಿ ಪಡೆಯುವ ಕುರಿತು ಲಿಖಿತವಾಗಿ ತಿಳಿಸಬೇಕು.


#  ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ರೂ. 10,000/- ಶಿಷ್ಯ ವೇತನ ಪಾವತಿಸಲಾಗುವುದು


#  ಆಯ್ಕೆಯಾದ ಅಭ್ಯರ್ಥಿಗಳು ಶಿಷ್ಯವೇತನವನ್ನು ಮಧ್ಯದಲ್ಲಿ ಬಿಡುವುದಿಲ್ಲ ಎಂದು, ಒಂದು ವೇಳೆ ಬಿಟ್ಟರೆ, ತರಬೇತಿ ಅವಧಿಯಲ್ಲಿ ಪಡೆದಿರುವ ಶಿಷ್ಯ ವೇತನವನ್ನು ಶೆ. 10ರ ಬಡ್ಡಿ ದರದೊಂದಿಗೆ ವಾಪಸ್ ನೀಡಲು ಬದ್ಧರಿರುವುದಾಗಿ ಲಿಖಿತ ಮುಚ್ಚಳಿಕೆ ನೀಡಬೇಕು.


# ಈ ನಿಯಮ ರಾಜ್ಯ/ಕೇಂದ್ರ ಸರ್ಕಾರದಲ್ಲಿ ನೌಕರಿ ಪಡೆದರೆ ಅನ್ವಯಿಸುವುದಿಲ್ಲ


#  ಸುಳ್ಳು ಮಾಹಿತಿ ಯಾ ಖೊಟ್ಟಿ ದಾಖಲೆ ನೀಡಿ ಆಯ್ಕೆಯಾದಲ್ಲಿ ಶಿಷ್ಯವೇತನವನ್ನು ಶೇ. 10 ಬಡ್ಡಿಯೊಂದಿಗೆ ಸರಕಾರಕ್ಕೆ ವಾಪಸ್ ಕಟ್ಟಬೇಕು


#  ತಪ್ಪಿದ್ದಲ್ಲಿ, ಭೂ ಕಂದಾಯ ಬಾಕಿ ವಸೂಲಿಯಂತೆ ವಸೂಲು ಮಾಡಲಾಗುತ್ತದೆ.


Ads on article

Advertise in articles 1

advertising articles 2

Advertise under the article