-->
ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ದೇಶದ್ರೋಹವೇ..?: ಕರ್ನಾಟಕ ಹೈಕೋರ್ಟ್ ಹೇಳಿದ್ದೇನು..?

ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ದೇಶದ್ರೋಹವೇ..?: ಕರ್ನಾಟಕ ಹೈಕೋರ್ಟ್ ಹೇಳಿದ್ದೇನು..?

ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ದೇಶದ್ರೋಹವೇ..?: ಕರ್ನಾಟಕ ಹೈಕೋರ್ಟ್ ಹೇಳಿದ್ದೇನು..?





ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದರೆ ಅದು ದೇಶದ್ರೋಹವೇ..? ಈ ಬಗ್ಗೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.



ಪ್ರಧಾನಿ ಮೋದಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ನೀಡಿದ್ದ ಹೇಳಿಕೆ ಬಗ್ಗೆ ಹೈಕೋರ್ಟ್‌ ಈ ಮಹತ್ವದ ತೀರ್ಪು ನೀಡಿದೆ.



ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ದೇಶದ್ರೋಹದ ಕೃತ್ಯವಲ್ಲ ಎಂದು ಹೈಕೋರ್ಟ್‌ನ ಕಲಬುರ್ಗಿ ವಿಭಾಗೀಯ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.


ಬೀದರ್‌ನ ಶಾಹೀನ್ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಅಲ್ಲಾವುದ್ದೀನ್, ಅನ್ದುಲ್ ಕಲೇಕ್, ಮಹಮ್ಮದ್ ಬಿಲಾಲ್ ಇನಾಮ್‌ದಾರ್ ಮತ್ತು ಮೊಹಮ್ಮದ್ ಮೆಹ್ತಾಬ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ನ್ನು ನ್ಯಾ. ಹೇಮಂತ್ ಚಂದನ್ ಗೌಡರ್ ರದ್ದು ಮಾಡಿದರು.


ಸದ್ರಿ ಆರೋಪ ಮಾಡಲಾದ ಹೇಳಿಕೆಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಯಾವುದೇ ಅಂಶಗಳು ಕಂಡುಬಂದಿಲ್ಲ. ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಹೇಳಿರುವುದು ಅವಹೇಳನಕಾರಿಯಲ್ಲ. ಬದಲಿಗೆ ಬೇಜವಾಬ್ದಾರಿತನದಿಂದ ಕೂಡಿದ ಹೇಳಿಕೆಯಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.


ಸರ್ಕಾರದ ನೀತಿಗಳನ್ನು, ಕಾಯ್ದೆಗಳನ್ನು ಟೀಕಿಸುವುದು ಸಹಜ. ಆದರೆ, ಮಕ್ಕಳ ನಾಟಕದ ಮೂಲಕ ಹಿಂಸಾಚಾರ ಹಾಗೂ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರುವ ಯಾವುದೇ ಅಂಶಗಳು ಕಂಡುಬಂದಿಲ್ಲ ಎಂದು ನ್ಯಾಯಪೀಠ ಹೇಳಿದೆ.



ಅರೋಪಿತರ ಪೈಕಿ ಒಬ್ಬರು ನಾಟಕದ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu