-->
ಲವ್‌ ಮಾಡುವವರಿಗೆ ಕರ್ನಾಟಕ ಹೈಕೋರ್ಟ್ ಎಚ್ಚರಿಕೆ: ನ್ಯಾಯಪೀಠ ಹೇಳಿದ್ದೇನು..?

ಲವ್‌ ಮಾಡುವವರಿಗೆ ಕರ್ನಾಟಕ ಹೈಕೋರ್ಟ್ ಎಚ್ಚರಿಕೆ: ನ್ಯಾಯಪೀಠ ಹೇಳಿದ್ದೇನು..?

ಲವ್‌ ಮಾಡುವವರಿಗೆ ಕರ್ನಾಟಕ ಹೈಕೋರ್ಟ್ ಎಚ್ಚರಿಕೆ: ನ್ಯಾಯಪೀಠ ಹೇಳಿದ್ದೇನು..?





ಪ್ರೇಮಿಗಳು ಪರಸ್ಪರರನ್ನು ಲವ್ ಮಾಡುವಾಗ ಮದುವೆ ಆಗುವುದಾಗಿ ಭರವಸೆ ನೀಡಿ ಬಳಿಕ ಆ ಭರವಸೆಯನ್ನು ಈಡೇರಿಸದೆ ಮದುವೆ ಆಗದಿದ್ದರೆ ಅದು ವಂಚನೆ ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.



ಕ್ರಿಮಿನಲ್ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.



ಪ್ರಕರಣದ ಆರೋಪಿ ಪ್ರಿಯಕರ ತನ್ನ ಪ್ರಿಯತಮೆ ಸಂತ್ರಸ್ತೆ ಮದುವೆ ಆಗುವುದಾಗಿ ಭರವಸೆ ನೀಡಿದ್ದ. ಇದಾದ ಬಳಿಕ ಇಬ್ಬರ ನಡುವೆ ಮನಸ್ತಾಪವಾಗಿದ್ದು, ಪ್ರೇಮ ಸಂಬಂಧದಲ್ಲಿ ಬಿರುಕು ಮೂಡಿದೆ. ಈ ಪ್ರಕ್ರಿಯೆಯನ್ನು ವಂಚನೆ ಆರೋಪದಲ್ಲಿ ಪರಿಧಿಗೆ ತರಲಾಗದು. ಇದೇ ವೇಳೆ, ಅರ್ಜಿದಾರರನ್ನು ವಂಚನೆ ಆರೋಪದಲ್ಲಿ ಅಪರಾಧಿ ಎಂದು ನಿರ್ಣಯಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.



ಸದ್ರಿ ಪ್ರಕರಣದಲ್ಲಿ ಪ್ರಾಪ್ತ ವಯಸ್ಕರಾದ ಸಂತ್ರಸ್ತೆ ಮತ್ತು ಅರ್ಜಿದಾರರು ಜೊತೆಯಾಗಿ ವಿವಿಧ ಕಡೆಗೆ ತಿರುಗಾಟ ಮಾಡಿದ್ದಾರೆ. ಅಲ್ಲದೇ, ಮದುವೆಯಾಗುವುದಾಗಿ ಒಪ್ಪಿಕೊಂಡು ಬಳಿಕ ಮದುವೆ ಆಗುವುದಕ್ಕೆ ಸಾಧ್ಯವಾಗಿಲ್ಲ. ಇದನ್ನು ಐಪಿಸಿ ಸೆಕ್ಷನ್ 415ರ ಪ್ರಕಾರ ಮೋಸ ಎಂದು ಪರಿಗಣಿಸಲಾಗದು. ಹೀಗಾಗಿ ಮೇಲ್ಮನವಿದಾರನನ್ನು ವಂಚನೆ ಆರೋಪದಲ್ಲಿ ಶಿಕ್ಷೆಗೆ ಗುರಿಪಡಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.



Ads on article

Advertise in articles 1

advertising articles 2

Advertise under the article