-->
54 ವರ್ಷ ಬಳಿಕ ಜನನ-ಮರಣ ಕಾಯ್ದೆಗೆ ತಿದ್ದುಪಡಿ: ಈ ಸರ್ಟಿಫಿಕೇಟ್‌ಗೆ ಮತ್ತಷ್ಟು ಬಲ...

54 ವರ್ಷ ಬಳಿಕ ಜನನ-ಮರಣ ಕಾಯ್ದೆಗೆ ತಿದ್ದುಪಡಿ: ಈ ಸರ್ಟಿಫಿಕೇಟ್‌ಗೆ ಮತ್ತಷ್ಟು ಬಲ...

54 ವರ್ಷ ಬಳಿಕ ಜನನ-ಮರಣ ಕಾಯ್ದೆಗೆ ತಿದ್ದುಪಡಿ: ಈ ಸರ್ಟಿಫಿಕೇಟ್‌ಗೆ ಮತ್ತಷ್ಟು ಬಲ...

54 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಜನನ ಮತ್ತು ಮರಣ ನೋಂದಣಿ ಕಾಯ್ದೆ-1069ಕ್ಕೆ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿದೆ.ಕಾಯ್ದೆ ಅಸ್ತಿತ್ವಕ್ಕೆ ಬಂದ ಬಳಿಕ ಐದೂವರೆ ದಶಕದಲ್ಲಿ ಇದೇ ಮೊದಲ ಬಾರಿಗೆ ತಿದ್ದುಪಡಿ ಮಾಡಲಾಗುತ್ತಿರುವುದು ಎಂಬುದು ಗಮನಾರ್ಹ ವಿಚಾರ.ಈ ಕಾಯ್ದೆ ಜಾರಿಗೆ ಬಂದ ಬಳಿಕ, ಶಾಲಾ ಕಾಲೇಜುಗಳಲ್ಲಿ ಪ್ರವೇಶ, ಚಾಲನಾ ಪರವಾನಗಿ ಪಡೆಯಲು ಮತ್ತು ಸರ್ಕಾರಿ ನೌಕರಿಗೆ ನೇಮಕಾತಿ ಪಡೆಯುವ ಸಂದರ್ಭದಲ್ಲಿ ಜನನ ಪ್ರಮಾಣಪತ್ರವನ್ನು ಏಕೈಕ ದಾಖಲೆಯಾಗಿ ಬಳಸಲಾಗುತ್ತದೆ.


ಮತದಾರರ ಪಟ್ಟಿ ಸಿದ್ದಪಡಿಸಲು, ಆಧಾರ್ ಸಂಖ್ಯೆ ನೀಡುವಾಗ ಹಾಗೂ ವಿವಾಹ ನೋಂದಣಿ ಸಂದರ್ಭದಲ್ಲಿ... ಹೀಗೆ ಎಲ್ಲ ಸಂದರ್ಭಗಳಲ್ಲೂ ಜನನ ಪ್ರಮಾಣ ಪತ್ರವನ್ನೇ ಪ್ರಮುಖ ಆಧಾರವಾಗಿ ಪರಿಗಣಿಸಲಾಗುತ್ತದೆ.


ಸಾಮಾಜಿಕವಾಗಿ ಆಗಿರುವ ಬದಲಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಮತ್ತು ತಂತ್ರಜ್ಞಾನದಲ್ಲಿನ ಪ್ರಗತಿಗೆ ತಕ್ಕಂತೆ ಈ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.


ನೂತನ ಪ್ರಸ್ತಾಪಿತ ತಿದ್ದುಪಡಿ ಕಾಯ್ದೆಯ ಪ್ರಮುಖಾಂಶಗಳು:


# ಜನನ ಪ್ರಮಾಣಪತ್ರವನ್ನು ಜನಿಸಿದ ದಿನಾಂಕ, ಸ್ಥಳದ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನಿಖರವಾಗಿ ನೀಡುವುದು


# ಜನಸಂಖ್ಯಾ ನೋಂದಣಿ, ಮತದಾರರ ಪಟ್ಟಿ, ಆಧಾರ್ ಸಂಖ್ಯೆ, ಪಡಿತರ ಚೀಟಿ, ಪಾಸ್‌ಪೋರ್ಟ್‌, ಆಸ್ತಿ ನೋಂದಣಿಯಲ್ಲಿ ಜನನ ಪ್ರಮಾಣಪತ್ರವನ್ನು ಮೂಲ ಆಧಾರವಾಗಿ ಪರಿಗಣಿಸುವುದು


# ಕೇಂದ್ರ ಸರ್ಕಾರದ ಅಗತ್ಯಕ್ಕೆ ತಕ್ಕಂತೆ, ಅಗತ್ಯ ಸಂಸ್ಥೆಗೆ ಯಾ ಸಕ್ಷಮ ಪ್ರಾಧಿಕಾರಕ್ಕೆ ಜನನ-ಮರಣ ಡಾಟಾ ಬೇಸ್‌ ಒದಗಿಸುವುದು


# ದತ್ತು ಪಡೆದ ಮಗು, ಅನಾಥ ಯಾ ಪರಿತ್ಯಕ್ತ ಮಗು, ಬಾಡಿಗೆ ತಾಯ್ತನದಿಂದ ಪಡೆದ ಮಗುವಿನ ನೋಂದಣಿಗೆ ಸ್ಪಷ್ಟ ವ್ಯಾಖ್ಯೆ


# ಒಬ್ಬರೇ ಪಾಲಕರು (ಸಿಂಗಲ್ ಪೇರೆಂಟ್) ಅಥವಾ ಅವಿವಾಹಿತ ತಾಯಿಯ ಮಗುವಿನ ನೋಂದಣಿಗೂ ತಿದ್ದುಪಡಿಯಿಂದ ಅವಕಾಶ


# ವಿಪತ್ತು ಅಥವಾ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡ ಸಂದರ್ಭದಲ್ಲಿ ಮರಣಗಳ ನೋಂದಣಿ ಹಾಗೂ ಮರಣ ಪ್ರಮಾಣ ಪತ್ರ ವಿತರಣೆ ಪ್ರಕ್ರಿಯೆಯೆ ವೇಗ ನೀಡುವುದಕ್ಕಾಗಿ ವಿಶೇಷ ರಿಜಿಸ್ಟ್ರಾರ್‌ಗಳ ನೇಮಕಕ್ಕೆ ಅವಕಾಶ ನೀಡುವುದು


Ads on article

Advertise in articles 1

advertising articles 2

Advertise under the article