ಸರ್ಕಾರಿ ಮಹಿಳಾ ನೌಕರರಿಗೆ ಒಂದು ವರ್ಷ ಹೆರಿಗೆ ರಜೆ; ಪುರುಷ ನೌಕರರಿಗೂ ಬಂಪರ್ ಆಫರ್!
Friday, July 28, 2023
ಸರ್ಕಾರಿ ಮಹಿಳಾ ನೌಕರರಿಗೆ ಒಂದು ವರ್ಷ ಹೆರಿಗೆ ರಜೆ; ಪುರುಷ ನೌಕರರಿಗೂ ಬಂಪರ್ ಆಫರ್!
ಸರ್ಕಾರಿ ಮಹಿಳಾ ನೌಕರರಿಗೆ ಒಂದು ವರ್ಷ ಹೆರಿಗೆ ರಜೆ ನೀಡುವ ಆದೇಶವನ್ನು ಸಿಕ್ಕಿಂ ರಾಜ್ಯ ಸರ್ಕಾರ ಹೊರಡಿಸಿದೆ. ಇದೇ ವೇಳೆ, ಪುರುಷ ನೌಕರರಿಗೆ ಒಂದು ತಿಂಗಳ ಕಾಲ ಪಿತೃತ್ವ ರಜೆ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸಿಕ್ಕಿಂನ ರಾಜ್ಯ ಸೇವಾ ಅಧಿಕಾರಿಗಳ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಂಗ್ ಈ ವಿಷಯವನ್ನು ಪ್ರಕಟಿಸಿದ್ದಾರೆ.
ಈ ಯೋಜನೆಯಿಂದ ಸರ್ಕಾರಿ ನೌಕರರು ತಮ್ಮ ಮಕ್ಕಳು ಹಾಗೂ ಕುಟುಂಬದ ಬಗ್ಗೆ ಕಾಳಜಿ ವಹಿಸಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.