-->
ನ್ಯಾಯಾಧೀಶರನ್ನೇ ಡಿಸ್‌ಮಿಸ್‌ ಮಾಡಿದ ದೆಹಲಿ ಹೈಕೋರ್ಟ್: ಸುಪ್ರೀಂ ಕೋರ್ಟ್ ಸಹಮತ

ನ್ಯಾಯಾಧೀಶರನ್ನೇ ಡಿಸ್‌ಮಿಸ್‌ ಮಾಡಿದ ದೆಹಲಿ ಹೈಕೋರ್ಟ್: ಸುಪ್ರೀಂ ಕೋರ್ಟ್ ಸಹಮತ

ನ್ಯಾಯಾಧೀಶರನ್ನೇ ಡಿಸ್‌ಮಿಸ್‌ ಮಾಡಿದ ದೆಹಲಿ ಹೈಕೋರ್ಟ್: ಸುಪ್ರೀಂ ಕೋರ್ಟ್ ಸಹಮತ





ನ್ಯಾಯಾಧೀಶರು ತಮ್ಮ ಹುದ್ದೆಗಿರುವ ಸ್ಥಾನಮಾನಕ್ಕೆ ವಿರುದ್ಧವಾಗಿ ನಡೆದುಕೊಂಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಹೈಕೋರ್ಟ್ ನ್ಯಾಯಾಂಗ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದೆ.



ಈ ಆದೇಶಕ್ಕೆ ಸುಪ್ರೀಂ ಕೋರ್ಟ್ ಕೂಡ ಸಹಮತ ವ್ಯಕ್ತಪಡಿಸಿದ್ದು, ನ್ಯಾಯಾಧೀಶರಿಗೆ ಮತ್ತು ನ್ಯಾಯಾಂಗ ಸೇವೆಯಲ್ಲಿ ಇರುವ ಎಲ್ಲರಿಗೂ ಇದೊಂದು ಎಚ್ಚರಿಕೆಯ ಕರೆಗಂಟೆ ಎಂದು ಹೇಳಿದೆ.



ಘಟನೆ ಏನು...?

ಅಪರಿಚಿತ ವ್ಯಕ್ತಿಯೊಬ್ಬರು ಹೊಟೇಲ್ ಬುಕ್ಕಿಂಗ್ ಆಫರ್‌ನ್ನು ನ್ಯಾಯಾಧೀಶರು ಸ್ವೀಕರಿಸಿದ್ದರು. ಅಪರಿಚಿತ ವ್ಯಕ್ತಿಯೊಬ್ಬವರು ನ್ಯಾಯಾಧೀಶರು ಮತ್ತು ಅವರ ಕುಟುಂಬದ ವಿದೇಶಿ ಫ್ಯಾಮಿಲಿ ಟ್ರಿಪ್‌ನ ಹೊಟೇಲ್ ಬುಕ್ಕಿಂಗ್ ಖರ್ಚು - ವೆಚ್ಚಗಳನ್ನು ಭರಿಸಿದ್ದು ತನಿಖೆಯಿಂದ ಮೇಲ್ನೋಟಕ್ಕೆ ಸಾಬೀತಾಗಿತ್ತು.



ನ್ಯಾಯಾಧೀಶರು ಕುಟುಂಬ ಸಮೇತರಾಗಿ ವಿದೇಶ ಪ್ರವಾಸ ಮಾಡಿದ್ದ ಸಂದರ್ಭದಲ್ಲಿ ಅನಾಮಧೇಯ ವ್ಯಕ್ತಿಯೊಬ್ಬರು ಜಡ್ಜ್ ಮತ್ತು ಅವರ ಕುಟುಂಬದ ಎಲ್ಲ ಖರ್ಚು ವೆಚ್ಚಗಳನ್ನು ತಾನೇ ಕೈಯ್ಯಾರೆ ಪಾವತಿ ಮಾಡಿದ್ದರು.


ಹೊಟೇಲ್ ಬುಕ್ಕಿಂಗ್ ಮತ್ತು ಇತರ ಪಾವತಿಗಳನ್ನು ಅಪರಿಚಿತರಿಂದ ಸ್ವೀಕರಿಸಲು ನ್ಯಾಯಾಧೀಶರು ಏಕೆ ಒಪ್ಪಿಕೊಂಡರು ಎಂಬುದಕ್ಕೆ ಆರೋಪ ಜಡ್ಜ್‌ ಸೂಕ್ತ ವಿವರಣೆ ನೀಡಿಲ್ಲ. ಇದು ಅವರನ್ನು ಅಪರಾಧಿಯನ್ನಾಗಿ ಮಾಡಲು ಪ್ರಮುಖ ಕಾರಣ ಎಂದು ಹೇಳಲಾಗಿದೆ.


ನ್ಯಾಯಾಧೀಶರು ತಮ್ಮ ಹುದ್ದೆಗಿರುವ ಸ್ಥಾನಮಾನಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದು, ಇದೊಂದು ಲಂಚದ ಪ್ರಕರಣವಾಗಿದೆ ಎಂದು ಹೈಕೋರ್ಟ್ ನ್ಯಾಯಪೀಠ ಹೇಳಿದೆ. ನ್ಯಾ. ಮನಮೋಹನ್ ಮತ್ತು ಸೌರಭ್ ಬ್ಯಾನರ್ಜಿ ಅವರು ಈ ಆದೇಶ ಹೊರಡಿಸಿದ್ದು,  ನ್ಯಾಯಾಧೀಶರು ಪಾಲಿಸುತ್ತಿರುವ ಹುದ್ದೆ ಅತ್ಯಂತ ಗೌರವಯುತವಾಗಿದ್ದು, ಅದರದ್ದೇ ಆದ ಜವಾಬ್ದಾರಿಗಳನ್ನು ಹೊಂದಿದೆ ಎಂದು ಟಿಪ್ಪಣಿ ಮಾಡಿದ್ದರು.


ನ್ಯಾಯಾಧೀಶರು ಇಂತಹ ವಿಷಯಗಳನ್ನು ಕ್ಷುಲ್ಲಕ ಹಾಗೂ ಅವಿವೇಕದಿಂದ ವರ್ತಿಸಲಾಗದು. ಜಡ್ಜ್ ಹೆಚ್ಚು ವಿವೇಕಯುಕವಾಗಿರಬೇಕು ಮತ್ತು ನ್ಯಾಯಬದ್ಧ ತೀರ್ಪಿಗೆ ಬದ್ಧನಾಗಿರಬೇಕು ಎಂದು ನ್ಯಾಯಪೀಠ ಹೇಳಿದೆ.



ಈ ಆದೇಶದಲ್ಲಿ ಮಧ್ಯಪ್ರವೇಶ ಮಾಡಲಾಗದು ಎಂದು ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ಹೇಳಿದ್ದು, ಆದೇಶವನ್ನು ಸಮರ್ಥಿಸಿಕೊಂಡಿದೆ. ನ್ಯಾ. ಹೃಷಿಕೇಶ್ ರಾಯ್ ಮತ್ತು ಪಂಕಜ್ ಮಿಥಾಲ್ ಅವರಿದ್ದ ನ್ಯಾಯಪೀಠ ನ್ಯಾಯಾಧೀಶರನ್ನು ಸೇವೆಯಿಂದ ವಜಾಗೊಳಿಸುವ ಹೈಕೋರ್ಟ್ ಆದೇಶಕ್ಕೆ ಸಹಮತ ವ್ಯಕ್ತಪಡಿಸಿದೆ.



ವಜಾಗೊಂಡ ಜಡ್ಜ್ ಹೇಳಿದ್ದೇನು..?

ಪ್ರವಾಸ ಹೊರಡುವ ಮೊದಲು ಹೊಟೇಲ್ ಬುಕ್ಕಿಂಗ್‌ಗೆ ಪ್ರತಿಯಾಗಿ ಹಣ ನೀಡಲಾಗಿದೆ ಎಂಬುದನ್ನು ಅಪರಿಚಿತ ವ್ಯಕ್ತಿ ತಿಳಿಸಿದ್ದರು. ಪ್ರವಾಸದಿಂದ ಹಿಂತಿರುಗಿದ ನಂತರ ಹಣ ಪಡೆದುಕೊಳ್ಳುವುದಾಗಿ ತಿಳಿಸಿದ್ದರು. ಆದರೆ, ಪ್ರವಾಸ ಮುಗಿಸಿ ಹಣ ನೀಡಲು ಹೋದಾಗ ಆ ವ್ಯಕ್ತಿ ಹಣ ಸ್ವೀಕರಿಸಲಿಲ್ಲ. ಇದರಲ್ಲಿ ಯಾವುದೇ ದುರುದ್ದೇಶವಿರಲಿಲ್ಲ ಎಂದು ವಜಾಗೊಂಡ ನ್ಯಾಯಾಧೀಶರು ಮಾಹಿತಿ ನೀಡಿದ್ದರು.



ಅಲ್ಲದೆ, ತಾವು ಯಾವುದೇ ಲಂಚ ಯಾ ಆಮಿಷಕ್ಕೆ ಬಲಿಯಾಗಿಲ್ಲ ಎಂದು ಅವರು ವಾದಿಸಿದ್ದರು. ಅಪರಿಚಿತ ವ್ಯಕ್ತಿ ಸಿಂಗಾಪುರದಲ್ಲಿ ವಾಸವಾಗಿದ್ದು, ಅರ್ಜಿದಾರ ನ್ಯಾಯಾಧೀಶರು ಅವರನ್ನು ಬಾಧ್ಯತೆ ವಹಿಸುವ ಯಾವುದೇ ಪರಿಸ್ಥಿತಿ ಇರಲಿಲ್ಲ ಎಂದು ಅವರು ವಾದಿಸಿದ್ದರು.

.

Ads on article

Advertise in articles 1

advertising articles 2

Advertise under the article