-->
CONTRACT ACT-ಮೈಲುಗಲ್ಲಾದ ತೀರ್ಪು:  "ಥಮ್ಸ್ ಅಪ್" (👍) ಇಮೋಜಿ ಹಾಕಿದರೂ ಒಪ್ಪಂದ ಸಿಂಧು: ಕೆನಡಾ ನ್ಯಾಯಾಲಯ

CONTRACT ACT-ಮೈಲುಗಲ್ಲಾದ ತೀರ್ಪು: "ಥಮ್ಸ್ ಅಪ್" (👍) ಇಮೋಜಿ ಹಾಕಿದರೂ ಒಪ್ಪಂದ ಸಿಂಧು: ಕೆನಡಾ ನ್ಯಾಯಾಲಯ

CONTRACT ACT-ಮೈಲುಗಲ್ಲಾದ ತೀರ್ಪು:  "ಥಮ್ಸ್ ಅಪ್" 👍 ಇಮೋಜಿ ಹಾಕಿದರೂ ಒಪ್ಪಂದ ಸಿಂಧು: ಕೆನಡಾ ನ್ಯಾಯಾಲಯ



ಸಂದೇಶವೊಂದಕ್ಕೆ 'ಥಮ್ಸ್ ಅಪ್' ಇಮೋಜಿ ಬಳಸಿದ ಹಿನ್ನೆಲೆಯಲ್ಲಿ ಈ ಒಪ್ಪಂದ ಸಿಂಧುವಾಗಿದೆ ಎಂಬುದಾಗಿ ಪರಿಗಣಿಸಿ ಕೆನಡಾ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.


ಈ ಮೂಲಕ ಇಮೋಜಿ ಸಂದೇಶದ ಮೂಲಕವೂ ಒಪ್ಪಂದವೊಂದನ್ನು ಮಾನ್ಯ ಮಾಡಬಹುದು, ನ್ಯಾಯಾಲಯ ಅದಕ್ಕೆ ಸಿಂಧುತ್ವ ಕಲ್ಪಿಸಬಹುದು ಎಂಬ ಸಂದೇಶವನ್ನು ಕೆನಡಾ ನ್ಯಾಯಾಲಯ ಜಗತ್ತಿಗೆ ಸಾರಿದೆ.


ಸೌತ್ ವೆಸ್ಟ್ ಟರ್ಮಿನಲ್ ಲಿ. Vs ಆಕ್ಟರ್ ಲ್ಯಾಂಡ್ & ಕ್ಯಾಟಲ್ ಲಿ. ಪ್ರಕರಣದಲ್ಲಿ ಕೆನಡಾ ನ್ಯಾಯಾಲಯ ಈ ತೀರ್ಪು ನೀಡಿದೆ.

ಇದೊಂದು ಅಪರೂಪದ ಪ್ರಕರಣ ಎಂದು ಉಲ್ಲೇಖಿಸಿದ ನ್ಯಾಯಾಧೀಶರು, ಹೊಸ ಸವಾಲುಗಳಿಗೆ ನ್ಯಾಯಾಂಗವೂ ಪ್ರತಿಸ್ಪಂದಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. 


ಸಮಾಜದಲ್ಲಿ ಆಧುನಿಕ ತಂತ್ರಜ್ಞಾನದ ಬಗ್ಗೆ ಟಿಪ್ಪಣಿ ಮಾಡಿದ ನ್ಯಾಯಾಲಯ ಇಮೋಜಿ ಸಹಿತ ಸಂಕೇತಗಳಿಂದ ಉದ್ಭವಿಸುಬಹುದಾದ ಹೊಸ ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಬೇಕು ಎಂದು ಕರೆ ನೀಡಿತು. 


Ads on article

Advertise in articles 1

advertising articles 2

Advertise under the article