-->
ಇಂದಿನಿಂದ AILU ಉಪನ್ಯಾಸ ಮಾಲಿಕೆ: ಜಡ್ಜ್ ಅಭ್ಯರ್ಥಿಗಳಿಗೆ ಆನ್‌ಲೈನ್ ಉಪನ್ಯಾಸ

ಇಂದಿನಿಂದ AILU ಉಪನ್ಯಾಸ ಮಾಲಿಕೆ: ಜಡ್ಜ್ ಅಭ್ಯರ್ಥಿಗಳಿಗೆ ಆನ್‌ಲೈನ್ ಉಪನ್ಯಾಸ

ಇಂದಿನಿಂದ AILU ಉಪನ್ಯಾಸ ಮಾಲಿಕೆ: ಜಡ್ಜ್ ಅಭ್ಯರ್ಥಿಗಳಿಗೆ ಆನ್‌ಲೈನ್ ಉಪನ್ಯಾಸ

ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಸಹಕಾರದೊಂದಿಗೆ ಅಖಿಲ ಭಾರತ ವಕೀಲರ ಒಕ್ಕೂಟ AILU ಇದರ ಕರ್ನಾಟಕ ಅಂತರ್ಜಾಲ ಉಪನ್ಯಾಸ ಸಮಿತಿಯು ಸಿವಿಲ್ ಜಡ್ಜ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗಾಗಿ ಅಂತರ್ಜಾಲ ಉಪನ್ಯಾಸ ಮಾಲಿಕೆಯನ್ನು ಹಮ್ಮಿಕೊಂಡಿದೆ.ಈ ಉಪನ್ಯಾಸ ಮಾಲಿಕೆಯ ಉದ್ಘಾಟನೆಯು 06-07-2023 ರ ಗುರುವಾರ ದಿವಸ ಸಂಜೆ 6- ಘಂಟೆಗೆ ನಡೆಯಲಿದ್ದು, ಮಾನ್ಯ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಶ್ರೀ ರಾಮಚಂದ್ರ ಡಿ. ಹುದ್ದಾರ ಅವರು 8ನೇ ಉಪನ್ಯಾಸ ಅವತರಣಿಕೆಯನ್ನು ಉದ್ಘಾಟನೆ ಮಾಡಲಿದ್ದಾರೆ.ಮೊದಲ ಉಪನ್ಯಾಸವನ್ನು ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಉಪ ನಿರ್ದೇಶಕರಾದ ಮಾನ್ಯ ಶ್ರೀ ರವಿಕುಮಾರ್ ಎಚ್ ಅರ್ ಅವರು ಮಾಡಲಿದ್ದು, ಭಾರತೀಯ ಕರಾರು ಅಧಿನಿಯಮ ಕುರಿತು ಅವರು ಉಪನ್ಯಾಸ ನೀಡಲಿದ್ದಾರೆ.ಆಸಕ್ತ ಪರೀಕ್ಷಾರ್ಥಿಗಳು ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೆಚ್ಹು ಹೆಚ್ಹು ಅನುಭವ ಪಡೆದು ಕೊಳ್ಳಲು ಸಮಿತಿಯ ಬಿ.ವಿ. ಕೋರಿಮಠ ಅವರು ವಿನಂತಿಸಿದ್ದಾರೆ.Ads on article

Advertise in articles 1

advertising articles 2

Advertise under the article