-->
ಪವರ್ ಟಿವಿಗೆ ಸಂಕಷ್ಟ!- ಚಂದನ್ ಶರ್ಮಾ, ರಾಕೇಶ್ ಶೆಟ್ಟಿ ಸಹಿತ ಮೂವರಿಗೆ ಕೋರ್ಟ್ ಸಮನ್ಸ್

ಪವರ್ ಟಿವಿಗೆ ಸಂಕಷ್ಟ!- ಚಂದನ್ ಶರ್ಮಾ, ರಾಕೇಶ್ ಶೆಟ್ಟಿ ಸಹಿತ ಮೂವರಿಗೆ ಕೋರ್ಟ್ ಸಮನ್ಸ್

ಪವರ್ ಟಿವಿಗೆ ಸಂಕಷ್ಟ!- ಚಂದನ್ ಶರ್ಮಾ, ರಾಕೇಶ್ ಶೆಟ್ಟಿ ಸಹಿತ ಮೂವರಿಗೆ ಕೋರ್ಟ್ ಸಮನ್ಸ್





ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಮಾನಹಾನಿಕರವಾಗಿ ಆಧಾರರಹಿತ ಸುದ್ದಿ ಪ್ರಕಟಿಸಿದ ಪವರ್‌ ಟಿವಿ ಸುದ್ದಿ ಸಂಸ್ಥೆಗೆ ಸಂಕಷ್ಟ ಎದುರಾಗಿದೆ. 


ಆಕ್ಷೇಪಾರ್ಹ ಸುದ್ದಿ ಪ್ರಕಟಿಸಿದ್ದಾರೆ ಎಂಬ ಆರೋಪದ ಬಗ್ಗೆ ಸಲ್ಲಿಸಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು ವಿಚಾರಣೆಗೆ ಎತ್ತಿಕೊಂಡ ಬೆಂಗಳೂರಿನ ನ್ಯಾಯಾಲಯ, ಪವರ್ ಟಿ ಮುಖ್ಯಸ್ಥರು, ನಿರೂಪಕ ಚಂದನ್ ಶರ್ಮಾ ಮತ್ತಿತರರಿಗೆ ಸಮನ್ಸ್ ಜಾರಿಗೊಳಿಸಿದೆ.


ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀಶರಾದ ಬಿ.ಸಿ. ಚಂದ್ರಶೇಖರ್, ಆರೋಪಿಗಳಾದ ಪವರ್ ಟಿವಿ ಎಂಡಿ ರಾಕೇಶ್ ಸಂಜೀವ ಶೆಟ್ಟಿ, ಡಿ.ಎಲ್. ಮಧು ಹಾಗೂ ಚಂದನ್ ಶರ್ಮ ಅವರಿಗೆ ಸಮಸ್ಯೆ ಜಾರಿಗೊಳಿಸಿದ್ದಾರೆ.


2022ರ ಮೇ ಹಾಗೂ ಜೂನ್‌ಗಳಲ್ಲಿ KSRTC ಮತ್ತು BMTC ನೌಕರರ ಪ್ರತಿಭಟನೆ ನಿಲ್ಲಿಸಲು ಹಾಗೂ ರೈತರ ಹೋರಾಟ ಮುಕ್ತಾಗೊಳಿಸಲು ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್ ಅವರು ಕೋಟ್ಯಂತರ ರೂ. ಹಣ ಕೇಳಿದ್ದರು ಎಂದು ಆರೋಪಿಸಿ ವರದಿ ಮಾಡಲಾಗಿತ್ತು.


ದೂರನ್ನು ಪರಾಮರ್ಶೆಗೆ ಒಳಪಡಿಸಿದ ನ್ಯಾಯಾಲಯ, ಖಾಸಗಿ ದೂರನ್ನು ಕ್ರಿಮಿನಲ್ ದೂರನ್ನಾಗಿ ಪರಿವರ್ತಿಸಿ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಲಾಗಿದೆ. ಕೋಡಿಹಳ್ಳ ಕೃಷ್ಣಮುರ್ತಿ ಅವರ ಪರವಾಗಿ ಹಿರಿಯ ನ್ಯಾಯವಾದಿ ಎಸ್. ಬಾಲನ್ ಅವರು ವಾದಿಸಿದ್ದರು.



Ads on article

Advertise in articles 1

advertising articles 2

Advertise under the article