ಕುವೆಂಪು ನಾಡಗೀತೆ ರಾಗದ ತಕರಾರು: ಕಟಕಟೆಯಲ್ಲೇ ವಿವಿಧ ರಾಗದಲ್ಲಿ ಹಾಡಿದ ಕಿಕ್ಕೇರಿ... ಹೈಕೋರ್ಟ್ ಹೇಳಿದ್ಧೆನು..?
ಕುವೆಂಪು ನಾಡಗೀತೆ ರಾಗದ ತಕರಾರು: ಕಟಕಟೆಯಲ್ಲೇ ವಿವಿಧ ರಾಗದಲ್ಲಿ ಹಾಡಿದ ಕಿಕ್ಕೇರಿ... ಹೈಕೋರ್ಟ್ ಹೇಳಿದ್ಧೆನು..?
ನಾಡಗೀತೆಯ ತಕರಾರು ಹೈಕೋರ್ಟ್ ಮೆಟ್ಟಿಲೇರಿದ್ದು, ಯಾವ ರಾಗದ ನಾಡಗೀತೆ ಸೂಕ್ತ ಎಂಬ ವಿಷಯವನ್ನು ನ್ಯಾಯಪೀಠಕ್ಕೆ ವಿವರಿಸಿದ ವಿನೂತನ ಪ್ರಸಂಗಕ್ಕೆ ಕರ್ನಾಟಕ ಹೈಕೋರ್ಟ್ ಸಾಕ್ಷಿಯಾಯಿತು.
ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಕುವೆಂಪು ವಿರಚಿತ ನಾಡಗೀತೆಯ ರಾಗದ ಬಗ್ಗೆ ತಕರಾರು ತೆರೆದಿದ್ದರು. ಈ ಕುರಿತಂತೆ, ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಈ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಹೈಕೋರ್ಟ್‌ನಲ್ಲಿ ರಾಗದ ವಿವಿಧ ಆಯಾಮಗಳನ್ನು ಪರಿಚಯಿಸಿದ ಕಿಕ್ಕೇರಿ ನ್ಯಾಯಪೀಠಕ್ಕೆ ಅಚ್ಚರಿ ಮೂಡಿಸಿದರು. ಇದು ಅಷ್ಟೊಂದು ಸರಳವಾದ ಪ್ರಶ್ನೆಯಲ್ಲ, ಬದಲಿಗೆ, ಆಳವಾದ ಅಧ್ಯಯನ, ಗಂಭೀರವಾದ ವಿಚಾರ ಹಾಗೂ ಸಮಗ್ರ ಮಾಹಿತಿಯ ಪ್ರಶ್ನೆಯಾಗಿದೆ ಎಂಬುದನ್ನು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.
ವಿಚಾರಣೆಯ ಸಮಯದಲ್ಲಿ, ಕಿಕ್ಕೇರಿ ಕೃಷ್ಣಮೂರ್ತಿಯವರು ವಿವಿಧ ರಾಗಗಳನ್ನು ಬಳಸಿ ನಾಡಗೀತೆಯನ್ನು ಹಾಡಿ ತೋರಿಸಿದರು. ಉದಯ ರವಿಚಂದ್ರಿಕೆ, ಜಂಜೂಟಿ, ಹಿಂದೋಳ, ಕಲ್ಯಾಣ ಮತ್ತು ಮಾಯಾ ಮಾಧವ ಗೌಳ ರಾಗಗಳಲ್ಲಿ ಹಾಡಿತೋರಿಸಿದ ಕಿಕ್ಕೇರಿ ಕೃಷ್ಣ ಮೂರ್ತಿ, ನಾಡಗೀತೆಯ ತಮ್ಮ ತಕರಾರನ್ನು ಸಮರ್ಥಿಸಲು ಕೋರ್ಟ್ ಹಾಲ್‌ನಲ್ಲೇ ಹಾಡಿದರು.
ಸಿ. ಅಶ್ವತ್ಥ್ ಸಂಯೋಜಿಸಿದ ರಾಗದಲ್ಲೇ ನಾಡಗೀತೆಯನ್ನು ಹಾಡುವುದು ಸಮಂಜಸ ಎಂದು ಕಿಕ್ಕೇರಿ ಅವರು ನ್ಯಾಯಪೀಠದ ಮುಂದೆ ಪ್ರತಿಪಾದಿಸಿದರು.
ಇದೊಂದು ಗಂಭೀರ ವಿಚಾರ. ಆಳವಾದ ಅಧ್ಯಯನ, ಸಮಗ್ರ ಮಾಹಿತಿ ಜೊತೆಗೆ ವಿವರವಾದ ವರದಿಯನ್ನು ನ್ಯಾಯಪೀಠದ ಮುಂದೆ ಇಡುವಂತೆ ಸರ್ಕಾರಿ ವಕೀಲರಿಗೆ ಸೂಚನೆ ನೀಡಿದರು.