-->
ಎಸ್‌ಸಿ, ಎಸ್‌ಟಿ PTCL Actಗೆ ತಿದ್ದುಪಡಿ: ಪರಭಾರೆ, ಭೂ ಕಬಳಿಕೆ, ಹಕ್ಕು ಮರುಸ್ಥಾಪನೆ... ಏನೆಲ್ಲ ಬದಲಾವಣೆಗಳು..?

ಎಸ್‌ಸಿ, ಎಸ್‌ಟಿ PTCL Actಗೆ ತಿದ್ದುಪಡಿ: ಪರಭಾರೆ, ಭೂ ಕಬಳಿಕೆ, ಹಕ್ಕು ಮರುಸ್ಥಾಪನೆ... ಏನೆಲ್ಲ ಬದಲಾವಣೆಗಳು..?

ಎಸ್‌ಸಿ, ಎಸ್‌ಟಿ PTCL Actಗೆ ತಿದ್ದುಪಡಿ: ಪರಭಾರೆ, ಭೂ ಕಬಳಿಕೆ, ಹಕ್ಕು ಮರುಸ್ಥಾಪನೆ... ಏನೆಲ್ಲ ಬದಲಾವಣೆಗಳು..?


ರಾಜ್ಯದಲ್ಲಿ ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡಲಾಗಿದ್ದ ಭೂಮಿಯನ್ನು ಕಸಿದುಕೊಳ್ಳುವುದಕ್ಕೆ ತಡೆ ನೀಡುವ ಎಸ್‌ಸಿ, ಎಸ್‌ಟಿ PTCL Actಗೆ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸರ್ಕಾರದಿಂದ ಮಂಜೂರಾಗಿರುವ ಭೂಮಿಯನ್ನು ಸಶಕ್ತರು ಯಾ ಬಲಶಾಲಿಗಳು ಕಿತ್ತುಕೊಳ್ಳುತ್ತಾರೆ. ಇದರಿಂದ ದಮನಿತರು, ದಲಿತರು ಭೂಮಿಯಿಂದ ವಂಚಿತರಾಗುತ್ತಾರೆ. ಅವರ ಭೂಮಿಯನ್ನು ಅವರಲ್ಲೇ ಉಳಿಸಲು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲ ಭೂಮಿಗಳ ಪರಭಾರೆ ನಿಷೇಧ) ಅಧಿನಿಯಮ 1978ಕ್ಕೆ ತಿದ್ದುಪಡಿ ತರಲಾಗುತ್ತದೆ.ಈ ಬಗ್ಗೆ ಕಾನೂನು ಇಲಾಖೆ ಕೆಲವೊಂದು ಮಹತ್ವದ ಅಭಿಪ್ರಾಯಗಳು, ಸಲಹೆಯನ್ನು ನೀಡಿವೆ.

ಅವುಗಳೆಂದರೆ, ಪಿಟಿಸಿಎಲ್ ಕಾಯ್ದೆಯ ಕಲಂ 5(1)ರಲ್ಲಿ ಪುನರ್ ಸ್ಥಾಪನೆ ಕೋರಿ ಅರ್ಜಿ ಸಲ್ಲಿಸಲು ಅಥವಾ ಸಕ್ಷಮ ಪ್ರಾಧಿಕಾರವು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಕಾಲಮಿತಿ ನಿಗದಿಪಡಿಸುವುದು.


ಭೂ ಸುಧಾರನಾ ಕಾಯ್ದೆಯ ಜಾರಿಗೆ ಬಂದ 1965 ಅಕ್ಟೋಬರ್ 2ರಿಂದ ಪುನರ್‌ ಸ್ಥಾಪನೆ ಕೋರಿ ಅರ್ಜಿ ಸಲ್ಲಿಸಲು ಅವಕಾಶ ನೀಡುವುದು.ಯಾವುದೇ ಕಾಲಮಿತಿ ಇಲ್ಲ ಎಂದು ಪಿಟಿಸಿಎಲ್‌ ಕಾಯ್ದೆಗೆ ತಿದ್ದುಪಡಿ ಹಾಗೂ ಸಹಾಯಕ ಆಯುಕ್ತರ ನ್ಯಾಯಾಲಯಗಳ ಮುಂದಿರುವ ಪ್ರಕರಣಗಳಿಗೆ ಅನ್ವಯವೆಂದು ತಿದ್ದುಪಡಿ ಮಾಡುವುದು.


ಪರಭಾರೆ ಮಾಡಿರುವುದು ಹೇಗೆ..?

ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಂಜೂರು ಮಾಡಿರುವ ಭೂಮಿಯನ್ನು ಬಡತನ, ಮುಗ್ಧತೆ ಮತ್ತು ಮೌಢ್ಯವನ್ನು ಬಂಡವಾಳ ಮಾಡಿಕೊಂಡು ಸಾಮಾನ್ಯ ದರ, ದರ ರಹಿತ ಅಥವಾ ಅಡಮಾನ ಮೂಲಕ ಸರ್ಕಾರದ ಅನುಮತಿ ಇಲ್ಲದೆ ಕಬಳಿಸಿದ್ದಾರೆ.ಮೂಲ ಮಂಜೂರಾತಿದಾರ ಅಥವಾ ಅವರ ವಾರಿಸುದಾರರು ಯಾ ಉತ್ತರಾಧಿಕಾರಿಗಳು ಸರ್ಕಾರದ ಮುಂದೆ ಅರ್ಜಿ ಹಾಕಿಕೊಂಡು ಹಕ್ಕು ಮರುಸ್ಥಾಪನೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲು ಕಾಯ್ದೆಗೆ ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿದೆ.Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200