-->
ಹೈಕೋರ್ಟ್ 6 ಜಡ್ಜ್ ಗಳಿಗೆ ಕೊಲೆ ಬೆದರಿಕೆ: ದುಬೈ ಗ್ಯಾಂಗ್ ಹೆಸರಲ್ಲಿ ಅನಾಮಧೇಯನ ಕೃತ್ಯ

ಹೈಕೋರ್ಟ್ 6 ಜಡ್ಜ್ ಗಳಿಗೆ ಕೊಲೆ ಬೆದರಿಕೆ: ದುಬೈ ಗ್ಯಾಂಗ್ ಹೆಸರಲ್ಲಿ ಅನಾಮಧೇಯನ ಕೃತ್ಯ

ಹೈಕೋರ್ಟ್ 6 ಜಡ್ಜ್ ಗಳಿಗೆ ಕೊಲೆ ಬೆದರಿಕೆ: ದುಬೈ ಗ್ಯಾಂಗ್ ಹೆಸರಲ್ಲಿ ಅನಾಮಧೇಯನ ಕೃತ್ಯಕರ್ನಾಟಕ ಹೈಕೋರ್ಟ್ ನ ಆರು ಮಂದಿ ನ್ಯಾಯಾಧೀಶರಿಗೆ ದುಬೈ ಗ್ಯಾಂಗ್ ಎಂಬ ತಂಡದ ಸದಸ್ಯನೆನ್ನಲಾದ ಅನಾಮಧೇಯ ವ್ಯಕ್ತಿಯಿಂದ ಕೊಲೆ ಬೆದರಿಕೆ ಎದುರಾಗಿದೆ.

ತಾನು ದುಬೈ ಗ್ಯಾಂಗ್ ನ ಸದಸ್ಯನಾಗಿದ್ದು, ಆರು ಮಂದಿ ನ್ಯಾಯಾಧೀಶರನ್ನು ಕೊಲೆ ಮಾಡುವುದಾಗಿ ವಾಟ್ಸ್ಯಾಪ್ ಸಂದೇಶದ ಮೂಲಕ ಅಪರಿಚಿತ ವ್ಯಕ್ತಿಯೊಬ್ಬ ಕೊಲೆ ಬೆದರಿಕೆ  ಹಾಕಿದ್ದಾನೆ.

ಅಷ್ಟೇ ಅಲ್ಲ, ಆ ವ್ಯಕ್ತಿ ನ್ಯಾಯಮೂರ್ತಿಗಳಿಗೆ 50 ಲಕ್ಷ ರೂ.ಗಳ ಬೇಡಿಕೆಯನ್ನೂ ಇಟ್ಟಿದ್ದಾನೆ.  ಹೈಕೋರ್ಟ್ ನ ಸಾರ್ವಜನಿಕ ಸಂಪರ್ಕಾಧಿಕಾರಿ(ಪಿ.ಆರ್.ಒ.) ಕೆ. ಮುರಳೀಧರ್ ಅವರ ಅಧಿಕೃತ  ಮೊಬೈಲ್ ವಾಟ್ಸ್ಯಾಪ್ ಗೆ ಈ ಸಂದೇಶ ಕಳುಹಿಸಿದ್ಧಾನೆ. ಈ ಹಣವನ್ನು ಪಾಕಿಸ್ತಾನದ ಅಲೈಡ್ ಬ್ಯಾಂಕ್ ಲಿ.ನಲ್ಲಿ ಇರುವ ಬ್ಯಾಂಕ್ ಖಾತೆಗೆ ಈ ಹಣವನ್ನು ಜಮಾ ಮಾಡುವಂತೆ ಕೋರಿಕೆ ಇಟ್ಟಿದ್ದಾನೆ.

ದುಬೈ ಗ್ಯಾಂಗ್ ಮೂಲಕ ತಮಗೆ ಸೇರಿದಂತೆ ಒಟ್ಟು ಆರು ಮಂದಿ ನ್ಯಾಯಾಧೀಶರಿಗೆ ಈ ಬೆದರಿಕೆ ಬಂದಿರುವುದಾಗಿ ದೂರುದಾರರಾದ ಮುರಳೀಧರ್ ಅವರು ಹೇಳಿದ್ದಾರೆ.

ಬೆದರಿಕೆ ಸಂದೇಶದಲ್ಲಿ ಉಲ್ಲೇಖಿಸಲಾದ ನ್ಯಾಯಮೂರ್ತಿಗಳ ಹೆಸರು ಹೀಗಿದೆ; ಮೊಹಮ್ಮದ್ ನವಾಜ್, ಎಚ್.ಟಿ. ನರೇಂದ್ರ, ಅಶೋಕ್ ಜಿ. ನಿಜಗನ್ನನವರ್, ಎಚ್.ಪಿ. ಸಂದೇಶ್, ಕೆ. ನಟರಾಜನ್, ಬಿ. ವೀರಪ್ಪ.

ಈ ಘಟನೆಗೆ ಸಂಬಂಧಿಸಿದಂತೆ ಸೆಂಟ್ರಲ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಜುಲೈ 12ಕ್ಕೆ ಈ ಮೊಬೈಲ್ ಸಂದೇಶ ಬಂದಿದ್ದು, ಜುಲೈ 14ರಂದು ಪ್ರಕರಣದ ದಾಖಲಾಗಿದೆ.


Ads on article

Advertise in articles 1

advertising articles 2

Advertise under the article