-->
ವರ್ಚುವಲ್ ಕಲಾಪ ಪ್ರೋತ್ಸಾಹಿಸಿ: ನ್ಯಾಯಾಧೀಶರಿಗೆ ನ್ಯಾ. ನಾಗರತ್ನ ಕಿವಿಮಾತು

ವರ್ಚುವಲ್ ಕಲಾಪ ಪ್ರೋತ್ಸಾಹಿಸಿ: ನ್ಯಾಯಾಧೀಶರಿಗೆ ನ್ಯಾ. ನಾಗರತ್ನ ಕಿವಿಮಾತು

ವರ್ಚುವಲ್ ಕಲಾಪ ಪ್ರೋತ್ಸಾಹಿಸಿ: ನ್ಯಾಯಾಧೀಶರಿಗೆ ನ್ಯಾ. ನಾಗರತ್ನ ಕಿವಿಮಾತು

ನ್ಯಾಯಾಲಯದ ಕಲಾಪಕ್ಕೆ ವೀಡಿಯೋ ಕಾನ್ಫರೆನ್ಸ್ ಮೂಲಕ ವಕೀಲರು ಮತ್ತು ದಾವೆದಾರರು ಹಾಜರಾಗಲು ಬಯಸಿದರೆ ಅವರನ್ನು ಪ್ರೋತ್ಸಾಹಿಸಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅಭಿಪ್ರಾಯಪಟ್ಟಿದ್ದಾರೆ.


ಬೆಂಗಳೂರಿನ ರಾಮಯ್ಯ ಕಾನೂನು ಕಾಲೇಜಿನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.


ಭೌತಿಕ ಹಾಜರಾತಿಯಂತೆಯೇ ಆನ್‌ಲೈನ್ ಮೂಲಕ ವಿಚಾರಣೆಗೆ ಹಾಜರಾಗುವವರನ್ನು ಪರಿಗಣಿಸಬೇಕು ಎಂದು ನಾಗರತ್ನ ತಿಳಿಸಿದರು. ಈ ವಿಚಾರದಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ಅಭಿಪ್ರಾಯಗಳು, ನಿಲುವುಗಳನ್ನು ಪ್ರಸ್ತಾಪಿಸಿ ಅವರೂ ಹೈಬ್ರಿಡ್ ವಿಚಾರಣೆಯ ಪರವಾಗಿಯೇ ಇದ್ದಾರೆ ಎಂದು ತಿಳಿಸಿದರು.


ಹೈಬ್ರಿಡ್ ಕಲಾಪ, ವರ್ಚುವಲ್ ಕೋರ್ಟ್‌ಗಳು ಬಹಿರಂಗ ನ್ಯಾಯಾಲಯದಂತೆಯೇ ಇರಬೇಕು. ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗುವವರನ್ನು ನ್ಯಾಯಾಂಗ ನಿರ್ಲಕ್ಷಿಸಬಾರದು. ಇದನ್ನು ಒಪ್ಪದ ನ್ಯಾಯಾಧೀಶರೂ ಇದ್ದಾರೆ. ಅಂತಹವರು ವರ್ಚುವಲ್ ವಿಚಾರಣೆಗೆ ಅಡ್ಡಿಪಡಿಸಬಾರದು ಎಂದು ಹೇಳಿದರು.


ಬಡವರಿಗೂ ಕಾನೂನು ನೆರವು

ಬಡವರಿಗೆ ಕಾನೂನು ನೆರವು ನೀಡಿವುದು ಎಂದರೆ ಕಳಪೆ ಕಾನೂನು ನೆರವು ಒದಗಿಸುವುದು ಎಂದಲ್ಲ. ಅದು ಗುಣಾತ್ಮಕವಾಗಿ ಇರಬೇಕು. ಈ ಕಾರಣಕ್ಕಾಗಿಯೇ ಜನರು ಕಾನೂನು ನೆರವು ಪಡೆಯಲು ಹಿಂದೇಟು ಹಾಕುತ್ತಾರೆ. ಜನರಿಗೆ ತಮ್ಮ ಕಾನೂನು ಮತ್ತು ಸಂವಿಧಾನಾತ್ಮಕ ಹಕ್ಕುಗಳ ಬಗ್ಗೆ ಹೆಚ್ಚಾಗಿ ಮಾಹಿತಿ ಇರುವುದಿಲ್ಲ. ಇದೇ ವೇಳೆ, ತಮಗೆ ಗುಣಮಟ್ಟದ ಕಾನೂನು ನೆರವು ಸಿಗುತ್ತದೆ ಎಂಬ ಬಗ್ಗೆ ಅವರಿಗೆ ವಿಶ್ವಾಸ ಇರುವುದಿಲ್ಲ ಎಂದು ಅವರು ಹೇಳಿದರು.


ವಕೀಲರು ತಮ್ಮ ವೃತ್ತಿ ಜೀವನದಲ್ಲಿ ತಾವೇ ಸ್ವತಃ ಕಾನೂನು ನೆರವು ನೀಡಲು ಮುಂದಾಗಬೇಕು. ವರ್ಷದಲ್ಲಿ ಒಂದೋ ಎರಡೋ ಪ್ರಕರಣಗಳಲ್ಲಿ ಕಾನೂನು ನೆರವು ನೀಡಿದರೆ ಅದು ಸಮಾಜಕ್ಕೆ ಖಂಡಿತವಾಗಿ ಎಷ್ಟೋ ಸಹಾಯ ಆಗುತ್ತದೆ ಎಂದು ನಾಗರತ್ನ ಪ್ರತಿಪಾದಿಸಿದರು.


Ads on article

Advertise in articles 1

advertising articles 2

Advertise under the article