-->
ವೇಶ್ಯೆ, ಸೂಳೆ ಪದಬಳಕೆ ನಿಷಿದ್ಧ: ಪರ್ಯಾಯ ಪದಕ್ಕೆ ಸುಪ್ರೀಂ ಕೋರ್ಟ್‌ ಹೊಸ ಭಾಷ್ಯ !

ವೇಶ್ಯೆ, ಸೂಳೆ ಪದಬಳಕೆ ನಿಷಿದ್ಧ: ಪರ್ಯಾಯ ಪದಕ್ಕೆ ಸುಪ್ರೀಂ ಕೋರ್ಟ್‌ ಹೊಸ ಭಾಷ್ಯ !

ವೇಶ್ಯೆ, ಸೂಳೆ ಪದಬಳಕೆ ನಿಷಿದ್ಧ: ಪರ್ಯಾಯ ಪದಕ್ಕೆ ಸುಪ್ರೀಂ ಕೋರ್ಟ್‌ ಹೊಸ ಭಾಷ್ಯ !





ಇನ್ನು ಮುಂದೆ ವೇಶ್ಯೆ, ಸೂಳೆ ಬಳಸುವಂತಿಲ್ಲ. ಇದಕ್ಕೆ ಬದಲಾಗಿ ಪರ್ಯಾಯ ಪದ ಬಳಸುವಂತೆ ಸುಪ್ರೀಂ ಕೋರ್ಟ್ ನೂತನ ಕೈಪಿಡಿ (Hand Book) ಹೊರತಂದಿದೆ.



ಈ ಕೈಪಿಡಿಯನ್ನು ಬಿಡುಗಡೆ ಮಾಡಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಈ ಕೈಪಿಡಿ ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲೂ ಲಭ್ಯವಿದೆ. ಹೊಸ ಪದಗಳ ಬಗ್ಗೆ ವ್ಯಾಪಕ ಅರಿವು ಮೂಡಿಸಲಿದ್ದು, ಪರ್ಯಾಯ ಪದಗಳ ಕೈಪಿಡಿ ನ್ಯಾಯಾಧೀಶರು, ವಕೀಲರಿಗೆ ಸಹಕಾರಿ ಎಂದು ಹೇಳಿದರು.



ವಾದ ಪತ್ರ, ವಾದ ಮತ್ತು ತೀರ್ಪು ಬರೆಯುವ ಸಂದರ್ಭದಲ್ಲಿ ಈ ಪದಗಳನ್ನು ಬಳಸುವಂತಿಲ್ಲ. ಅದಕ್ಕೆ ಸೂಚಿಸಲಾದ ಪರ್ಯಾಯ ಪದಗಳನ್ನು ಬಳಸಬೇಕು. ಈ ಕೈಪಿಡಿಯಲ್ಲಿ ಎಲ್ಲ ಮಾಹಿತಿಯನ್ನೂ ನೀಡಲಾಗಿದೆ.



ಕರ್ತವ್ಯ ನಿಷ್ಟ ಪತ್ನಿ, ವಿಧೇಯ ಪತ್ನಿ, ಉಪ ಪತ್ನಿ, ವ್ಯಭಿಚಾರಿಣಿ, ವೇಶ್ಯೆ, ಸೂಳೆ, ಪ್ರೇಯಸಿ, ಅವಿವಾಹಿತೆ ಮೊದಲಾದ ಪದಗಳನ್ನು ಬಳಸುವಂತಿಲ್ಲ.



ಸೂಳೆ ಮತ್ತು ವ್ಯಭಿಚಾರಿಣಿ ಪದಕ್ಕೆ ಬದಲಾಗಿ ಲೈಂಗಿಕ ಕಾರ್ಯಕರ್ತೆ ಪದವನ್ನು ಬಳಸಲು ಸೂಚಿಸಲಾಗಿದೆ. ಪ್ರತಿ ಪ್ರಕರಣದ ಅರ್ಹತೆಯ ಮೇಲೆ ನ್ಯಾಯಾಲಯಗಳು ತೀರ್ಪುಗಳು ನಿರ್ಧಾರವಾಗುತ್ತದೆ. 


ಎಂದಿಗೂ ಲಿಂಗತ್ವ ಸಿದ್ಧ ಮಾದರಿಯನ್ನು ಅವಲಂಬಿಸಿರುವುದಿಲ್ಲ. ಹಾಗಾಗಿ, ಮಹಿಳೆಯರ ಬಗ್ಗೆ ಬಳಸುವ ಸಿದ್ಧ ಮಾದರಿಯ ಪದಗಳ ಬಳಕೆಯ ಪ್ರಮಾಣವನ್ನು ಕಡಿಮೆಗೊಳಿಸುವುದೇ ಈ ಪದಕೋಶದ ಮೂಲ ಆಶಯವಾಗಿದೆ ಎಂದು ಚಂದ್ರಚೂಡ್ ಹೇಳಿದ್ದಾರೆ.


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200