-->
ಸ್ವಂತದ ಖಾಸಗಿ ಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸಲು ಯಾವುದೇ ನಿರ್ಬಂಧವಿಲ್ಲ: ಹೈಕೋರ್ಟ್

ಸ್ವಂತದ ಖಾಸಗಿ ಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸಲು ಯಾವುದೇ ನಿರ್ಬಂಧವಿಲ್ಲ: ಹೈಕೋರ್ಟ್

ಸ್ವಂತದ ಖಾಸಗಿ ಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸಲು ಯಾವುದೇ ನಿರ್ಬಂಧವಿಲ್ಲ: ಹೈಕೋರ್ಟ್

ಸ್ವಂತದ ಖಾಸಗಿ ಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸಲು ಯಾವುದೇ ಕಾನೂನು ಯಾ ನಿಯಮದಲ್ಲಿ ನಿರ್ಬಂಧ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.


ಬೆಂಗಳೂರಿನ ಎಚ್‌ಬಿಆರ್ ಲೇ ಔಟ್‌ನ ಸ್ಯಾಮ್ ಪಿಲಿಪ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ನೇತೃತ್ವದ ನ್ಯಾ. ಎಂ.ಎಸ್.ಜಿ. ಕಮಲ್ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.


ಖಾಸಗಿ ವಸತಿ ಪ್ರದೇಶದಲ್ಲಿ ಕಟ್ಟಡ ಬೈ-ಲಾ ಮತ್ತು ವಲಯ ಬೈ-ಲಾ ಉಲ್ಲಂಘಿಸಿ ವಸತಿ ಪ್ರದೇಶವನ್ನು ಪ್ರಾರ್ಥನೆಗೆ ಬಳಸಿದ್ದರು ಎಂದು ಅರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆಕ್ಷೇಪಾರ್ಹ ಕಟ್ಟಡದ ಅನುಮತಿಯನ್ನು ರದ್ದುಡಪಸಲು ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸ್ಥಳೀಯ ನಿವಾಸಿಗಳಾದ ಫಿಲಿಪ್ ಮತ್ತು ಇತರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಪ್ರಾರ್ಥನೆ ಮಾಡಲು ಬಂದವರು ಯಾವಾಗಲಾದರೂ ಕೆಟ್ಟದ್ದಾಗಿ ನಡೆದುಕೊಂಡಿದ್ದಾರೆಯೇ..? ಎಂಬುದಕ್ಕೆ ಅರ್ಜಿದಾರರು ಇಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಅರ್ಜಿಯನ್ನು ಪೂರ್ವಗ್ರಹ ಪೀಡಿತರಾಗಿ ಸಲ್ಲಿಸಿದ್ದಾರೆ ಎಂದು ಭಾವಿಸಬೇಕಾಗುತ್ತದೆ. ಅರ್ಜಿದಾರರ ವಾದದಲ್ಲಿ ಯಾವುದೇ ತರ್ಕ ಮತ್ತು ಕಾರಣ ಕಾಣುತ್ತಿಲ್ಲ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿದೆ.

Ads on article

Advertise in articles 1

advertising articles 2

Advertise under the article