-->
NI Act- Sec 141- ಚೆಕ್ ಅಮಾನ್ಯ ಪ್ರಕರಣ: ಕಂಪೆನಿ ವಿರುದ್ಧದ ದೂರಿನಲ್ಲಿ ವ್ಯಕ್ತಿಯನ್ನು ಆರೋಪಿ ಮಾಡಬಹುದೇ..?

NI Act- Sec 141- ಚೆಕ್ ಅಮಾನ್ಯ ಪ್ರಕರಣ: ಕಂಪೆನಿ ವಿರುದ್ಧದ ದೂರಿನಲ್ಲಿ ವ್ಯಕ್ತಿಯನ್ನು ಆರೋಪಿ ಮಾಡಬಹುದೇ..?

ಚೆಕ್ ಅಮಾನ್ಯ ಪ್ರಕರಣ: ಕಂಪೆನಿ ವಿರುದ್ಧದ ದೂರಿನಲ್ಲಿ ವ್ಯಕ್ತಿಯನ್ನು ಆರೋಪಿ ಮಾಡಬಹುದೇ..?

ಕಂಪೆನಿ ವಿರುದ್ಧದ ಚೆಕ್ ಅಮಾನ್ಯ ಪ್ರಕರಣದಲ್ಲಿ ದಾಖಲಿಸಲಾಗುವ ದೂರಿನಲ್ಲಿ ಕಂಪೆನಿಗೆ ಸಂಬಂಧಿಸಿದ ವ್ಯಕ್ತಿಯನ್ನು ವೈಯಕ್ತಿಕವಾಗಿ ಆರೋಪಿ ಮಾಡಬಹುದೇ.. ಎಂಬ ಪ್ರಶ್ನೆಗೆ ಸುಪ್ರೀಂ ಕೋರ್ಟ್ ಉತ್ತರ ನೀಡಿದೆ.


ಅಶೋಕ್ ಶೇವಕ್ರಮಣಿ Vs ಆಂಧ್ರ ಪ್ರದೇಶ ಪ್ರಕರಣದಲ್ಲಿ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ. ಅಭಯ ಶ್ರೀನಿವಾಸ್ ಓಕಾ ಮತ್ತು ನ್ಯಾ. ಸಂಜಯ್ ಕರೋಲ್ ಅವರಿದ್ದ ವಿಭಾಗೀಯ ಪೀಠ, ಕಂಪೆನಿ ಯಾ ಸಂಸ್ಥೆ ವಿರುದ್ಧದ ದೂರಿನಲ್ಲಿ ಕಂಪೆನಿಗೆ ಸಂಬಂಧಿಸಿದ ವ್ಯಕ್ತಿಯ ಮೇಲೆ ವೈಯಕ್ತಿಕವಾಗಿ ಆರೋಪ ಹೊರಿಸುವ ಹಾಗಿಲ್ಲ ಎಂದು ಸ್ಪಷ್ಟಪಡಿಸಿದೆ.


ಆ ವ್ಯಕ್ತಿ ವ್ಯಕ್ತಿಗತವಾಗಿ ಕಂಪೆನಿಯ ವ್ಯವಹಾರಗಳನ್ನು ನಿರ್ವಹಿಸುತ್ತಿಲ್ಲ ಎಂಬುದನ್ನು ಗಮನದಲ್ಲಿ ಇಡಬೇಕು ಎಂದು ಹೇಳಿರುವ ತೀರ್ಪು, ಆ ವ್ಯಕ್ತಿ ಕಂಪೆನಿಯ ಯಾ ಸಂಸ್ಥೆಯ ದೈನಂದಿನ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾನೆ ಎಂಬ ಕಾರಣಕ್ಕೆ ಅವರು ವರ್ಗಾವಣೀಯ ಪತ್ರಗಳ ಕಾಯ್ದೆಯ ಸೆಕ್ಷನ್ 141ರ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.


ಪ್ರಕರಣ: ಅಶೋಕ್ ಶೇವಕ್ರಮಣಿ Vs ಆಂಧ್ರ ಪ್ರದೇಶ

ಸುಪ್ರೀಂ ಕೋರ್ಟ್‌, CrlA 879/2023 Dated 03-08-2023


Ads on article

Advertise in articles 1

advertising articles 2

Advertise under the article