6-09-2023: ರಾಜ್ಯದ ನ್ಯಾಯಾಲಯಗಳಿಗೆ ಕೃಷ್ಣಾಷ್ಟಮಿ ಪ್ರಯುಕ್ತ ರಜೆ
Tuesday, September 5, 2023
6-09-2023: ರಾಜ್ಯದ ನ್ಯಾಯಾಲಯಗಳಿಗೆ ಕೃಷ್ಣಾಷ್ಟಮಿ ಪ್ರಯುಕ್ತ ರಜೆ
ಕೃಷ್ಣಾಷ್ಟಮಿ ಪ್ರಯುಕ್ತ ಕರ್ನಾಟಕ ರಾಜ್ಯದ ನ್ಯಾಯಾಲಯಗಳಿಗೆ 6-09-2023ರಂದು ರಜೆ ಘೋಷಿಸಲಾಗಿದೆ.
ಹೈಕೋರ್ಟ್ ಹೊರಡಿಸಿದ ಅಧಿಸೂಚನೆಯ ಪ್ರಕಾರ ಈ ರಜೆಯನ್ನು ಘೋಷಿಸಲಾಗಿದೆ. ಆದರೆ, ಇದಕ್ಕೆ ಬದಲಾಗಿ ಈ ತಿಂಗಳ ನಾಲ್ಕನೇ ಶನಿವಾರ (ಅಂದರೆ 23-09-2023)ರಂದು ರಾಜ್ಯದ ಎಲ್ಲ ನ್ಯಾಯಾಲಯಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಕಳೆದ ತಿಂಗಳು ಇದೇ ರೀತಿ ವರಮಹಾಲಕ್ಷ್ಮಿ ಪೂಜೆಯ ಅಂಗವಾಗಿ 25-08-2023ರಂದು ರಜೆ ನೀಡಲಾಗಿತ್ತು.
ಈ ರಜೆಯನ್ನು ಆ ತಿಂಗಳ ನಾಲ್ಕನೇ ಶನಿವಾರ 26-08-2023ದಂದು ಕರ್ತವ್ಯದ ದಿನ ಎಂದು ಪರಿಗಣಿಸಲಾಗಿತ್ತು.