ಕೋರ್ಟ್ ಟೈಮಿಂಗ್ ಬದಲಾವಣೆ?- ಹೈಕೋರ್ಟ್ ಸುತ್ತೋಲೆ ಮುಂದಿಟ್ಟ ಪ್ರಸ್ತಾವನೆ
ನ್ಯಾಯಾಲಯದ ಕಚೇರಿ ಕೆಲಸದ ಅವಧಿಯಲ್ಲಿ ಬದಲಾವಣೆ ಕುರಿತು ಕೇರಳ ಹೈಕೋರ್ಟ್ ಪ್ರಸ್ತಾವನೆ
ಕೇರಳ ರಾಜ್ಯ ಹೈಕೋರ್ಟ್ ಆ ರಾಜ್ಯದ ಜಿಲ್ಲಾ ಹಾಗೂ ವಿಚಾರಣಾ ನ್ಯಾಯಾಲಯಗಳ ಕಲಾಪ ಹಾಗೂ ನ್ಯಾಯಾಲಯದ ಕಚೇರಿ ಕೆಲಸದ ಸಮಯವನ್ನು ಬದಲಾವಣೆ ಮಾಡುವ ಪ್ರಸ್ತಾವನೆ ಕುರಿತು ಸುತ್ತೋಲೆ ಹೊರಡಿಸಿದೆ.
ಪ್ರಸ್ತಾವನೆಯಲ್ಲಿ ನ್ಯಾಯಾಲಯದ ಕಚೇರಿ ಕೆಲಸದ ಸಮಯ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5:00 ಗಂಟೆ ವರೆಗೆ ನಿಗದಿಪಡಿಸುವಂತೆ ಮತ್ತು ನ್ಯಾಯಾಂಗಣದಲ್ಲಿ ಕಲಾಪ ಆರಂಭವಾಗುವ ಸಮಯ ಬೆಳಿಗ್ಗೆ 11 ಗಂಟೆ ಕಲಾಪದ ಮುಕ್ತಾಯ ಸಮಯ ಸಂಜೆ 5:00 ಗಂಟೆಗೆ ನಿಗದಿಪಡಿಸುವಂತೆ ಪ್ರಸ್ತಾಪಿಸಲಾಗಿದೆ. ಮಧ್ಯಾಹ್ನ 1.15 ರಿಂದ 2 ಗಂಟೆ ವರೆಗೆ ವಿರಾಮದ ಸಮಯ ಆಗಿರುತ್ತದೆ.
ನಮ್ಮ ಕರ್ನಾಟಕ ರಾಜ್ಯದಲ್ಲಿ ನ್ಯಾಯಾಲಯಗಳ ಕಚೇರಿ ಕೆಲಸದ ಸಮಯ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ನಿಗದಿ ಆಗಿದೆ.
ನ್ಯಾಯಾಂಗಣದ ಕಲಾಪದ ಸಮಯ ಬೆಳಿಗ್ಗೆ 11 ರಿಂದ ಸಂಜೆ 5:30 ವರೆಗೆ ನಿಗದಿಪಡಿಸಲಾಗಿದೆ. ಮಧ್ಯಾಹ್ನ 2 ಗಂಟೆಯಿಂದ 2:45 ರ ವರೆಗೆ ವಿರಾಮದ ಸಮಯವಾಗಿದೆ.
ಕೇರಳ ರಾಜ್ಯದ ಹೈಕೋರ್ಟ್ ಪ್ರಸ್ತಾಪಿಸಿದ ಸಮಯವನ್ನೇ ನಮ್ಮ ರಾಜ್ಯದಲ್ಲೂ ಅಳವಡಿಸಿಕೊಳ್ಳುವ ಕುರಿತು ನಮ್ಮ ರಾಜ್ಯದ ಹೈಕೋರ್ಟಿಗೆ ಮನವಿ ಸಲ್ಲಿಸಲು ಕರ್ನಾಟಕ ರಾಜ್ಯದ ವಕೀಲರ ಸಂಘ ಕ್ರಮ ಕೈಗೊಳ್ಳಲಿ ಎಂದು ಆಶಿಸೋಣವೇ.
✍️ ಪ್ರಕಾಶ್ ನಾಯಕ್, ಮಂಗಳೂರು