ಬೀದಿಬದಿ ಆಹಾರ ಮಾರಾಟಗಾರನ ಮಗ ಈಗ ನ್ಯಾಯಾಧೀಶ: ಟ್ರೆಂಡಿಂಗ್ ಆಗಿದ್ದ ಈ ಜಡ್ಜ್!
ಬೀದಿಬದಿ ಆಹಾರ ಮಾರಾಟಗಾರನ ಮಗ ಈಗ ನ್ಯಾಯಾಧೀಶ: ಟ್ರೆಂಡಿಂಗ್ ಆಗಿದ್ದ ಈ ಜಡ್ಜ್!
ಬೀದಿ ಬದಿ ವ್ಯಾಪಾರಿಯ ಮಗ ಈಗ ನ್ಯಾಯಾಧೀಶರ ಹುದ್ದೆಗೇರಿದ್ದಾರೆ. ಆಗಸ್ಟ್‌ನಲ್ಲಿ ಪ್ರಕಟವಾದ ಜಡ್ಜ್ ಪರೀಕ್ಷೆಯ ಫಲಿತಾಂಶದಲ್ಲಿ ಈ ಜಡ್ಜ್ 135ನೇ Rank ಗಳಿಸಿ ಹೆತ್ತವರಿಗೆ ಹೆಮ್ಮೆಯ ಮಗನಾಗಿದ್ದಾರೆ.
ಉತ್ತರ ಪ್ರದೇಶದ ಸಂಬಾಲ್ ಪ್ರದೇಶದಲ್ಲಿ ಬೀದಿ ಬದಿಯ ಅಂಗಡಿ ಹೊಂದಿರುವ ಹಲೀಮ್ ಅವರ ಮಗನಾಗಿರುವ ಮೊಹಮ್ಮದ್ ಕಾಸಿಂ ನ್ಯಾಯಾಂಗ ಸೇವೆಯ ಪರೀಕ್ಷೆಯನ್ನು ಪಾಸ್ ಮಾಡಿ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
ಅವರ ಈ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಮೊಮ್ಮದ್ ಕಾಸಿಂ ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ತಮ್ಮ ಬಿಎ, ಎಲ್ಎಲ್‍ಬಿಯನ್ನು ಪೂರೈಸಿದ್ದಾರೆ.
ಬಳಿಕ ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಕಾಸಿಂ ತಮ್ಮ ಸ್ನಾತಕೋತ್ತರ ಎಲ್ಎಲ್ಎಂ ಪದವಿಯನ್ನು ಪೂರೈಸಿದ್ದಾರೆ.
ನ್ಯಾಯಾಧೀಶರಾದ ಬಳಿಕ ಪ್ರತಿಕ್ರಿಯೆ ನೀಡಿರುವ ಕಾಸಿಮ್, ತಮ್ಮ ಸಾಧನೆಯ ಯಶಸ್ಸನ್ನು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಶಿಕ್ಷಕರಿಗೆ ಸಲ್ಲಿಸಿದ್ದಾರೆ. “ನನ್ನ ತಾಯಿ ನನ್ನ ಹಿಂದಿನ ಪ್ರೇರಕ ಶಕ್ತಿ ಆಗಿದ್ದರು. ಅವರು ನನ್ನನ್ನು ಶಾಲೆ ತೊರೆಯಲು ಎಂದೂ ಅವಕಾಶ ನೀಡಲಿಲ್ಲ” ಎಂದು ಕಾಸಿಂ ಸ್ಮರಿಸಿಕೊಂಡಿದ್ದಾರೆ.