ಸರ್ಕಾರಿ ನೌಕರರಿಗೆ ಬಂಪರ್ ಸಿಹಿ ಸುದ್ದಿ!- ಪೂರ್ವಾನ್ವಯದಿಂದಲೇ ಬಂಪರ್ ಕೊಡುಗೆ
ಸರ್ಕಾರಿ ನೌಕರರಿಗೆ ಬಂಪರ್ ಸಿಹಿ ಸುದ್ದಿ!- ಪೂರ್ವಾನ್ವಯದಿಂದಲೇ ಬಂಪರ್ ಕೊಡುಗೆ
ತುಟ್ಟಿಭತ್ಯೆಯಲ್ಲಿ ಹೆಚ್ಚಳ ಮಾಡಿ ತನ್ನ ನೌಕರರಿಗೆ ಕೇಂದ್ರ ಸರ್ಕಾರ ಭರ್ಜರಿ ಕೊಡುಗೆಯನ್ನು ಘೋಷಣೆ ಮಾಡಲಿದೆ. ಜುಲೈನಿಂದ ಪೂರ್ವಾನ್ವಯ ಆಗುವಂತೆ ಈ ಘೋಷಣೆ ಮಾಡಲಿದ್ದು, ಶೇ. 3ರ ಹೆಚ್ಚಳ ಮಾಡುವ ನಿರೀಕ್ಷೆ ಇದೆ.
ಈಗ ಇರುವ ವರದಿಗಳ ಪ್ರಕಾರ, ತುಟ್ಟಿ ಭತ್ಯೆಯಲ್ಲಿ ಶೇ. 3 ಹೆಚ್ಚಳವಾಗಲಿದ್ದು, ಜುಲೈನಿಂದ ಪೂರ್ವಾನ್ವಯವಾಗಲಿ ಈ ಹೆಚ್ಚವರಿ ವೇತನ ಕೇಂದ್ರ ಸರ್ಕಾರಿ ನೌಕರರ ಕೈಗೆ ಸಿಗಲಿದೆ.
ಉದಾಹರಣೆಗೆ, ಈಗ ವ್ಯಕ್ತಿಯೊಬ್ಬರ ವೇತನ ತಿಂಗಳಿಗೆ ರೂ. 50,000/- ಆಗಿದ್ದರೆ, ಮೂಲವೇತನವಾಗಿ ರೂ. 15000/- ಪಡೆಯುತ್ತಾರೆ. ಈಗ ತುಟ್ಟಿಭತ್ಯೆ ಮೂಲವೇತನದ ಶೇ 42 ಇರುವ ಕಾರಣ ಡಿ.ಎ. ಪ್ರಮಾಣ 6300/- ರೂ. ಆಗುತ್ತದೆ. ಇನ್ನು ಶೇ. 3 ಹೆಚ್ಚಳವಾದರೆ ಆ ಉದ್ಯೋಗಿ ರೂ.6750/- ಡಿಎ ಪಡೆಯುತ್ತಾರೆ.
ಇದರಿಂದ ರೂ. 50,000/- ಆಗಿದ್ದರೆ, ಮೂಲವೇತನವಾಗಿ ರೂ. 15000/- ಪಡೆಯುವ ನೌಕರರಿಗೆ ಒಟ್ಟಾರೆಯಾಗಿ ರೂ. 450 ಹೆಚ್ಚುವರಿಯಾಗಿ ವೇತನ ಪಡೆಯಲಿದ್ದಾರೆ.
ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಕಾರ್ಮಿಕ ಬ್ಯೂರೋ ಪ್ರತಿ ತಿಂಗಳು ಹೊರತರುವ ಕೈಗಾರಿಕಾ ಕಾರ್ಮಿಕರ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದಲ್ಲಿ ನಿಗದಿ ಮಾಡಲಾಗುತ್ತದೆ.