ಹಿಂಜರಿದ ದೂರುದಾರ, ಪ್ರತಿಕೂಲ ಸಾಕ್ಷಿ ಇದ್ದಾಗ ಪೋಕ್ಸೊ ಪ್ರಕರಣದಲ್ಲಿ ಖುಲಾಸೆ ಕಳಂಕರಹಿವಲ್ಲ- ಸುಪ್ರೀಂ ಕೋರ್ಟ್
ಹಿಂಜರಿದ ದೂರುದಾರ, ಪ್ರತಿಕೂಲ ಸಾಕ್ಷಿ ಇದ್ದಾಗ ಪೋಕ್ಸೊ ಪ್ರಕರಣದಲ್ಲಿ ಖುಲಾಸೆ ಕಳಂಕರಹಿವಲ್ಲ- ಸುಪ್ರೀಂ ಕೋರ್ಟ್
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆಯ ಸಮಯದಲ್ಲಿ ಪ್ರತಿಕೂಲ ಸಾಕ್ಷಿ ಮತ್ತು ದೂರುದಾರರು ಹಿಂಜರಿದು ಸಾಕ್ಷಿ ನುಡಿದಾಗ ಆರೋಪಿಯ ಖುಲಾಸೆಯನ್ನು ಕಳಂಕರಹಿತ ಎಂದು ಹೇಳಲಾಗದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಮಧ್ಯಪ್ರದೇಶ ಸರ್ಕಾರ Vs ಭೂಪೇಂದ್ರ ಯಾದವ್ ಪ್ರಕರಣದಲ್ಲಿ ನ್ಯಾ. ಹಿಮಾ ಕೊಹ್ಲಿ ಮತ್ತು ನ್ಯಾ. ರಾಜೇಶ್ ಬಿಂದಾಲ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ಪೋಕ್ಸೋ ಕಾಯ್ದೆ ಪ್ರಕರಣದಲ್ಲಿ ಖುಲಾಸೆ ಮಾಡುವಾಗ ಪ್ರಕರಣದ ಸಂತ್ರಸ್ತರು ಅಭಿಯೋಜನೆಯ ವಾದದ ಪರವಾಗಿ ನಿಲ್ಲುವಲ್ಲಿ ವಿಫಲರಾಗಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.
ಮೇಲ್ನೋಟಕ್ಕೆ ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ. ಆದರೆ, ಅಭಿಯೋಜನೆಯ ವಾದವನ್ನು ದೂರುದಾರರು ಬೆಂಬಲಿಸಲಿಲ್ಲ. ಇತರ ಸಾಕ್ಷಿಗಳು ಪ್ರತಿಕೂಲವಾಗಿ ಬದಲಾದರು. ಇಂತಹ ಸಂದರ್ಭದಲ್ಲಿ ಆರೋಪಿ ಕ್ರಿಮಿನಲ್ ಪ್ರಕರಣದಿಂದ ತನ್ನನ್ನು ಕಳಂಕರಹಿತವಾಗಿ ಖುಲಾಸೆ ಮಾಡಲಾಗಿದೆ ಎಂದು ಭಾವಿಸುವಂತಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಆರೋಪಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯ ಆತನನ್ನು ಖುಲಾಸೆಗೊಳಿಸಿತ್ತು. ಆದರೂ ಆತನನ್ನು ಪೊಲೀಸ್ ಇಲಾಖೆಗೆ ನೇಮಕ ಮಾಡಿಕೊಳ್ಳಲು ಆತ ಅನರ್ಹ ಎಂದು ಪೊಲೀಸ್ ಇಲಾಖೆ ಪರಿಗಣಿಸಿತ್ತು.