-->
ರಾಜ್ಯದಲ್ಲಿ ಆಸ್ತಿ ನೋಂದಣಿ ಭರಾಟೆ: ತಿಂಗಳಾಂತ್ಯದ ವರೆಗೆ ಕಚೇರಿ ಸಮಯದಲ್ಲಿ ಭಾರೀ ಬದಲಾವಣೆ

ರಾಜ್ಯದಲ್ಲಿ ಆಸ್ತಿ ನೋಂದಣಿ ಭರಾಟೆ: ತಿಂಗಳಾಂತ್ಯದ ವರೆಗೆ ಕಚೇರಿ ಸಮಯದಲ್ಲಿ ಭಾರೀ ಬದಲಾವಣೆ

ರಾಜ್ಯದಲ್ಲಿ ಆಸ್ತಿ ನೋಂದಣಿ ಭರಾಟೆ: ತಿಂಗಳಾಂತ್ಯದ ವರೆಗೆ ಕಚೇರಿ ಸಮಯದಲ್ಲಿ ಭಾರೀ ಬದಲಾವಣೆ

ರಾಜ್ಯದ ಎಲ್ಲ ಉಪ ನೋಂದಣಾಧಿಕಾರಿ ಕಚೇರಿಗಳು ಸೆಪ್ಟೆಂಬರ್ 23ರಿಂದ ಸೆಪ್ಟೆಂಬರ್ 30ರ ವರೆಗೆ 12 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿದೆ.ಅಕ್ಟೋಬರ್‌ನಿಂದ ನೂತನ ಮಾರ್ಗಸೂಚಿ ದರ ಜಾರಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಒತ್ತಡ ಹೆಚ್ಚಾಗಿದ್ದು, ಆಸ್ತಿ ನೋಂದಣಿ ಪ್ರಕ್ರಿಯೆ ಬಿರುಸು ಪಡೆದುಕೊಂಡಿದೆ.ಕಚೇರಿ ಒತ್ತಡವನ್ನು ನಿವಾರಿಸುವ ಹಿನ್ನೆಲೆಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಈ ಕ್ರಮ ಕೈಗೊಂಡಿದೆ. ಈ ಒಂದು ವಾರಗಳ ಕಾಲ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ನೋಂದಣಿ ಪ್ರಕ್ರಿಯೆ ನಡೆಯಲಿದ್ದು, ಹಳೆಯ ಮಾರ್ಗಸೂಚಿ ದರದಲ್ಲೇ ಆಸ್ತಿ ನೋಂದಣಿ, ಮಾರಾಟ ಕ್ರಯ ಪತ್ರವನ್ನು ನೋಂದಾಯಿಸಲಾಗುವುದು ಎಂದು ಇಲಾಖೆ ತಿಳಿಸಿದೆ.ನೋಂದಣಿ ಮತ್ತು ಮುದ್ರಾಂಕ ಇಲಾಖೆ ಎರಡು ಹಂತಗಳಲ್ಲಿ ಸ್ಥಿರಾಸ್ತಿ ದರವನ್ನು ಪರಿಷ್ಕರಣೆ ಮಾಡಿದೆ. ಈ ಹೊಸ ದರಗಳು ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ.

Ads on article

Advertise in articles 1

advertising articles 2

Advertise under the article