-->
ಪತ್ರಕರ್ತರ ಅಂಕಣದಲ್ಲಿ ಬರೆದ ಸುಳ್ಳು ಮಾಹಿತಿ ಅಪರಾಧಕ್ಕೆ ಸಮವಲ್ಲ, ಅದೊಂದು ತಪ್ಪಾದ ವರದಿ- ಸುಪ್ರೀಂ ಕೋರ್ಟ್

ಪತ್ರಕರ್ತರ ಅಂಕಣದಲ್ಲಿ ಬರೆದ ಸುಳ್ಳು ಮಾಹಿತಿ ಅಪರಾಧಕ್ಕೆ ಸಮವಲ್ಲ, ಅದೊಂದು ತಪ್ಪಾದ ವರದಿ- ಸುಪ್ರೀಂ ಕೋರ್ಟ್

ಪತ್ರಕರ್ತರ ಅಂಕಣದಲ್ಲಿ ಬರೆದ ಸುಳ್ಳು ಮಾಹಿತಿ ಅಪರಾಧಕ್ಕೆ ಸಮವಲ್ಲ, ಅದೊಂದು ತಪ್ಪಾದ ವರದಿ- ಸುಪ್ರೀಂ ಕೋರ್ಟ್

ಪತ್ರಕರ್ತರು ತಮ್ಮ ಅಂಕಣದಲ್ಲಿ ಸುಳ್ಳು ಮಾಹಿತಿ ಬರೆದಿದ್ದರೆ ಅದು ಅಪರಾಧವಲ್ಲ. ಅದೊಂದು ತಪ್ಪಾದ ವರದಿ. ಅಷ್ಟೇ..

ಇದು ಸುಪ್ರೀಂ ಕೋರ್ಟ್ ಮಾಡಿದ ವ್ಯಾಖ್ಯಾನ.

ಮಣಿಪುರ ಹಿಂಸಾಚಾರ ಕುರಿತು ಪತ್ರಕರ್ತರ ಅಂಕಣದಲ್ಲಿ ತಪ್ಪು ಮಾಹಿತಿ ಕುರಿತಂತೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ನಾಲ್ಕು ಮಂದಿ ಸದಸ್ಯರ ಬಂಧನಕ್ಕೆ ಮಧ್ಯಂತರ ತಡೆ ನೀಡಿದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾ. ಪರ್ದಿವಾಲಾ ಮತ್ತು ನ್ಯಾ. ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠ ಈ ತೀರ್ಪು ನೀಡಿದೆ.

ಐಪಿಸಿ ಸೆಕ್ಷನ್ 153ಎ ಅಡಿಯಲ್ಲಿ ಯಾವುದೇ ಘಟನೆಯ ಬಗ್ಗೆ ಪತ್ರಕರ್ತರು ಬರೆಯುವ ಅಂಕಣದಲ್ಲಿ ತಪ್ಪಾದ ಮಾಹಿತಿ ಬರೆದಿದ್ದರೆ ಅದು ಅಪರಾಧಕ್ಕೆ ಸಮಾನವಲ್ಲ. ಅದನ್ನು ತಪ್ಪಾದ ವರದಿ ಎಂದು ಪರಿಗಣಿಸಬಹುದು. ತಪ್ಪು ಮಾಹಿತಿ ವರದಿ ಮಾಡಿದ ಎಲ್ಲ ಪತ್ರಕರ್ತರನ್ನು ವಿಚಾರಣೆ ಮಾಡುತ್ತೀರಾ ಎಂದು ನ್ಯಾಯಪೀಠ ಸರ್ಕಾರವನ್ನು ಪ್ರಶ್ನಿಸಿದೆ.ಮಣಿಪುರ ಸರ್ಕಾರ ಸಲ್ಲಿಸಿದ್ದ ಎಫ್‌ಐಆರ್‌ನಲ್ಲಿ ಪತ್ರಕರ್ತರ ವಿರುದ್ಧ ಯಾವುದೇ ಗುರುತರವಾದ ಆರೋಪ ಮಾಡಿಲ್ಲ. ಹೀಗಿರುವಾಗ ಎಫ್‌ಐಆರ್‌ನ್ನು ಯಾಕೆ ರದ್ದು ಮಾಡಬಾರದು ಎಂದು ನ್ಯಾಯಪೀಠ ಸರ್ಕಾರವನ್ನು ಪ್ರಶ್ನೆ ಮಾಡಿತು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

Advertise under the article

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

Pay Rs 200