-->
ಕೇಸ್ ವಜಾ: ಕಿರಿಯ ವಕೀಲರ ತಲೆಗೆ ಕಟ್ಟಿದ ಹಿರಿಯ ವಕೀಲರಿಗೆ ಬಾಂಬೆ ಹೈಕೋರ್ಟ್ "ಸ್ಪೆಷಲ್ ದಂಡ"

ಕೇಸ್ ವಜಾ: ಕಿರಿಯ ವಕೀಲರ ತಲೆಗೆ ಕಟ್ಟಿದ ಹಿರಿಯ ವಕೀಲರಿಗೆ ಬಾಂಬೆ ಹೈಕೋರ್ಟ್ "ಸ್ಪೆಷಲ್ ದಂಡ"

ಕೇಸ್ ವಜಾ: ಕಿರಿಯ ವಕೀಲರ ತಲೆಗೆ ಕಟ್ಟಿದ ಹಿರಿಯ ವಕೀಲರಿಗೆ ಬಾಂಬೆ ಹೈಕೋರ್ಟ್ "ಸ್ಪೆಷಲ್ ದಂಡ"





ತಾನು ಪ್ರತಿನಿಧಿಸುವ ಪ್ರಕರಣ ನ್ಯಾಯಾಲಯದಿಂದ ವಜಾ(Dismiss)ಗೊಂಡಿದ್ದು, ಈ ಹಿನ್ನಡೆಯನ್ನು ಕಿರಿಯ ವಕೀಲರ ತಲೆಗೆ ಕಟ್ಟಲು ಮುಂದಾದ ಹಿರಿಯ ವಕೀಲರ ನಡೆಗೆ ಬಾಂಬೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.



ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಹಾಗೂ ನ್ಯಾ. ಆರೀಫ್ ಡಾಕ್ಟರ್ ಅವರಿದ್ದ ವಿಭಾಗೀಯ ಪೀಠ, ಹಿರಿಯ ವಕೀಲರ ವೃತ್ತಿಪರ ರಹಿತ ನಡವಳಿಕೆಗೆ ಬೇಸರ ವ್ಯಕ್ತಪಡಿಸಿದ್ದು, ಕಿರಿಯ ವಕೀಲರಿಗೆ ದಂಡವಾಗಿ ಗ್ರ್ಯಾನ್‌ವಿಲ್ ಆಸ್ಟಿನ್ ಅವರ 'The Indian Constitution: Corner Stone of A Nation" ಪುಸ್ತಕವನ್ನು ನೀಡುವಂತೆ ಸೂಚನೆ ನೀಡಿತು.


ನ್ಯಾಯಾಧೀಶರು ಹಿರಿಯ ವಕೀಲರ ನಡವಳಿಕೆ ಮತ್ತು ವರ್ತನೆಗೆ ಬೇಸರ ವ್ಯಕ್ತಪಡಿಸುತ್ತಿದ್ದಂತೆ ನ್ಯಾಯಪೀಠದ ಮುಂದೆ ಕ್ಷಮಾಪಣೆ ಕೇಳಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಪುಸ್ತಕದ ದಂಡ ಎಂಬ ಸಾಂಕೇತಿಕ ಶಿಕ್ಷೆಯನ್ನು ವಿಧಿಸಿತು.


ಘಟನೆಯ ವಿವರ:

ಹೈಕೋರ್ಟ್‌ನಲ್ಲಿ ಮೇಲ್ಮನವಿದಾರರಾಗಿರುವ ತಮ್ಮ ಕಕ್ಷಿದಾರ ಮೆಮನ್ ಕೋ-ಆಪರೇಟಿವ್ ಬ್ಯಾಂಕ್ ಅವರ ಪ್ರಕರಣವನ್ನು ವಕೀಲರು ಹಾಜರಾಗದ ಕಾರಣ ವಜಾಗೊಳಿಸಲಾಗಿತ್ತು. ಈ ಬಗ್ಗೆ ಮೇಲ್ಮನವಿಯನ್ನು ಮತ್ತೆ ಆಲಿಸುವಂತೆ ಕೋರಿ ಪಟೇಲ್ ಅವರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆಯ ಹೊಸ ವಿಷಯ ತಿಳಿಯಿತು.

ಪ್ರಕರಣದ ಬಗ್ಗೆ ತಮಗೆ ಮಾಹಿತಿ ಇರಲಿಲ್ಲ. ಕಿರಿಯ ವಕೀಲರು ಸಮರ್ಪಕ ಮಾಹಿತಿ ನೀಡದ ಹಿನ್ನಲೆಯಲ್ಲಿ ತಾವು ನ್ಯಾಯಾಲಯದ ಮುಂದೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಹಿರಿಯ ವಕೀಲರಾ ಪಟೇಲ್ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ತಮ್ಮ ಈ ವಾದಕ್ಕೆ ಪೂರಕವಾಗಿ ಕಿರಿಯ ವಕೀಲರಿಂದ ಪ್ರಮಾಣ ಪತ್ರ(ಅಫಿಡವಿಟ್)ವನ್ನೂ ಸಲ್ಲಿಸುವಂತೆ ನೋಡಿಕೊಂಡಿದ್ದರು.


ಇದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು.

Ads on article

Advertise in articles 1

advertising articles 2

Advertise under the article