-->
"ಒಂದು ದೇಶ - ಒಂದು ಚುನಾವಣೆ": ಕೇಂದ್ರದ ಉನ್ನತ ಸಮಿತಿಯ ಸದಸ್ಯರಿವರು....

"ಒಂದು ದೇಶ - ಒಂದು ಚುನಾವಣೆ": ಕೇಂದ್ರದ ಉನ್ನತ ಸಮಿತಿಯ ಸದಸ್ಯರಿವರು....

"ಒಂದು ದೇಶ - ಒಂದು ಚುನಾವಣೆ": ಕೇಂದ್ರದ ಉನ್ನತ ಸಮಿತಿಯ ಸದಸ್ಯರಿವರು.. ..





ಲೋಕಸಭೆ ಮತ್ತು ದೇಶದ ಎಲ್ಲ ರಾಜ್ಯಗಳ ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಮಹತ್ವಾಕಾಂಕ್ಷೆಯ "One Nation One Election" ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.


ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಈ ಸಮಿತಿಯನ್ನು ರಚಿಸಿದ್ದು, ಕೇಂದ್ರದ ಕಾನೂನು ಸಚಿವಾಲಯ ಈ ಸಮಿತಿಯ ಮೇಲುಸ್ತುವಾರಿ ನಡೆಸಲಿದೆ.

ಹಿರಿಯ ವಕೀಲ ಹಾಗೂ ಅಂತಾರಾಷ್ಟ್ರೀಯ ಕಾನೂನಿನ ತಜ್ಞರಾಗಿರುವ ಹರೀಶ್ ಸಾಳ್ವೆ ಈ ಸಮಿತಿಯ ಸದಸ್ಯರಾಗಿದ್ದಾರೆ.


ಉಳಿದಂತೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರತಿಪಕ್ಷ ನಾಯಕ, ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ, ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್, 15ನೇ ಹಣಕಾಸು ಆಯೋಗದ ಅಧ್ಯಕ್ಷ ಎನ್.ಕೆ. ಸಿಂಗ್, ನಿವೃತ್ತ ವಿಚಕ್ಷಣಾ ಆಯುಕ್ತ ಸಂಜಯ್ ಕೊಥಾರಿ, ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಡಾ. ಸುಭಾಷ್ ಸಿ. ಕಶ್ಯಪ್ ಇತರ ಸದಸ್ಯರಾಗಿದ್ದಾರೆ.


ಸಮಿತಿಗೆ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ವಿಶೇಷ ಆಹ್ವಾನಿತರಾಗಿದ್ದಾರೆ. ಕಾನೂನು ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ನಿತೇನ್ ಚಂದ್ರ ಈ ಸಮಿತಿಯ ಕಾರ್ಯದರ್ಶಿಯ ಜವಾಬ್ದಾರಿ ಹೊರಲಿದ್ದಾರೆ.


"One Nation One Election" ಕುರಿತ ಸಾಧಕ-ಬಾಧಕಗಳ ಪರಿಶೀಲನೆಗೆ ಈ ಸಮಿತಿಯನ್ನು ರಚಿಸಲಾಗಿದೆ. ಏಕಕಾಲಕ್ಕೆ ಚುನಾವಣೆ ನಡೆಸಲಾಗದಿದ್ದರೆ ಹಾಗೆ ಚುನಾವಣೆ ನಡೆಸಬಹುದಾದ ಹಂತಗಳು ಮತ್ತು ಕಾಲಮಿತಿಗಳ ಬಗ್ಗೆ ಈ ಸಮಿತಿ ಚರ್ಚೆ ನಡೆಸಿ ವರದಿ ನೀಡಲಿದೆ.


ತಕ್ಷಣದಿಂದಲೇ ಈ ಸಮಿತಿ ತನ್ನ ಕಾರ್ಯಚಟುವಟಿಕೆಗಳನ್ನು ನಡೆಸಲಿದೆ. ಈ ಸಮಿತಿಯ ಪ್ರಧಾನ ಕಚೇರಿ ನವದೆಹಲಿಯಲ್ಲಿ ಆರಂಭಿಸಲಾಗುವುದು ಎಂದು ನಿರ್ಣಯದಲ್ಲಿ ಹೇಳಲಾಗಿದೆ.


ದೇಶದ ಸಂವಿಧಾನ, ಜನಪ್ರತಿನಿಧಿಗಳ ಕಾಯ್ದೆ1950, ಪ್ರಜಾಪ್ರತಿನಿಧಿ ಕಾಯ್ದೆ 1951 ಮೊದಲಾದ ಪೂರಕ ಕಾಯ್ದೆಗಳಿಗೆ ನಿರ್ದಿಷ್ಟ ತಿದ್ದುಪಡಿ ತರುವ ಬಗ್ಗೆ ಈ ಸಮಿತಿ ಪರಿಶೀಲನೆ ನಡೆಸಿ ವರದಿ ನೀಡಲಿದೆ.


Ads on article

Advertise in articles 1

advertising articles 2

Advertise under the article