ನ್ಯಾಯಾಂಗಣಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ- ಅರ್ಹ ವಕೀಲರಿಗೆ ಅವಕಾಶ
ನ್ಯಾಯಾಂಗಣಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ- ಅರ್ಹ ವಕೀಲರಿಗೆ ಅವಕಾಶ
ಬೆಂಗಳೂರಿನ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಲ್ಲಿ ನ್ಯಾಯಾಂಗಣಾಧಿಕಾರಿ ಹುದ್ದೆಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಲಾಗಿದೆ.
ಅರ್ಜಿ ಸಲ್ಲಿಸಲು 5-10-2023 ಕೊನೆಯ ದಿನವಾಗಿದೆ. ನೇಮಕಾತಿ ನಿಯಮಗಳ ಪ್ರಕಾರ ಹುದ್ದೆಗೆ ನಿಯೋಜನೆ ಪ್ರಕ್ರಿಯೆ ನಡೆಯಲಿದೆ. ಅರ್ಹ ವಕೀಲ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕಾಲಕ್ಕೆ ತಕ್ಕಂತೆ ತಿದ್ದುಪಡಿ ಆಗಿರುವ ಕರ್ನಾಟಕ ಆಡಳಿತ ನ್ಯಾಯಮಂಡಳಿ ನಿಯಮಗಳು 1993 ಪ್ರಕಾರ ನೇಂಕಾತಿ ಪ್ರಕ್ರಿಯೆ ನಡೆಲಿದೆ.
ಅಭ್ಯರ್ಥಿಗಳು ಕಡ್ಡಾಯವಾಗಿ ಕಾನೂನು ಪದವೀಧರರಾಗಿಬೇಕು. ಮೂರು ವರ್ಷದ ಅನುಭವ ಹೊಂದಿರಬೇಕು.
ಹೈಕೋರ್ಟ್, ಜಿಲ್ಲಾ ನ್ಯಾಯಾಲಯ ಅಥವಾ ಆಡಳಿತ ನ್ಯಾಯಮಂಡಳಿಗಳಲ್ಲಿ ವಕೀಲ ವೃತ್ತಿ ನಡೆಸುತ್ತಿರಬೇಕು. ಅರ್ಜಿ ಸಲ್ಲಿಸಲು ಕನಿಷ್ಟ ಮೂರು ವರ್ಷಗಳ ವಕೀಲ ವೃತ್ತಿಯ ಅನುಭವ ಹೊಂದಿರಬೇಕು.
ವಯೋಮಿತಿ: ಕನಿಷ್ಟ 25 ಗರಿಷ್ಟ 37 ವರ್ಷ ವಯಸ್ಸಾಗಿರಬೇಕು. ವಯೋಮಿತಿ ನಿಯಮಾನುಸಾರ ವೇತನದಲ್ಲಿ ಸಡಿಲಿಕೆ ಇರುತ್ತದೆ.
ಅರ್ಜಿ ನಮೂನೆಗಳು ಮತ್ತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್‌ಸೈಟ್ ಲಿಂಕ್‌ಗೆ ಭೇಟಿನೀಡಬಹುದು.
www.ksat.karnataka.gov.in