-->
ಲೋಕ ಅದಾಲತ್‌ನಲ್ಲಿ ನೀಡಿದ ಚೆಕ್ ಅಮಾನ್ಯ: ಚೆಕ್‌ನ ದ್ವಿಗುಣ ಮೊತ್ತದ ದಂಡ ವಿಧಿಸಿದ ನ್ಯಾಯಾಲಯ

ಲೋಕ ಅದಾಲತ್‌ನಲ್ಲಿ ನೀಡಿದ ಚೆಕ್ ಅಮಾನ್ಯ: ಚೆಕ್‌ನ ದ್ವಿಗುಣ ಮೊತ್ತದ ದಂಡ ವಿಧಿಸಿದ ನ್ಯಾಯಾಲಯ

ಲೋಕ ಅದಾಲತ್‌ನಲ್ಲಿ ನೀಡಿದ ಚೆಕ್ ಅಮಾನ್ಯ: ಚೆಕ್‌ನ ದ್ವಿಗುಣ ಮೊತ್ತದ ದಂಡ ವಿಧಿಸಿದ ನ್ಯಾಯಾಲಯ





ಲೋಕ ಅದಾಲತ್‌ನಲ್ಲಿ ಪರಿಹಾರವಾಗಿ ಆರೋಪಿ ದೂರುದಾರರಿಗೆ ನೀಡಿದ್ದ ಚೆಕ್ ಅಮಾನ್ಯಗೊಂಡ ಪ್ರಕರಣದಲ್ಲಿ ಬೆಳಗಾವಿ 5ನೇ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿ ಮಹಿಳೆಗೆ 80 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.



ಬೆಳಗಾವಿ ಶಹಪುರದ ನಿವಾಸಿ ಹುಕ್ಕೇರಿಯ ಸಂಕೇಶ್ವರ ಶ್ರೀ ಬಸವೇಶ್ವರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್‌ನಿಂದ 2012ರಲ್ಲಿ 35 ಲಕ್ಷ ರೂ. ಸಾಲ ಪಡೆದಿದ್ದರು. ಆದರೆ, ಅವರು ಸರಿಯಾದ ಸಮಯದಲ್ಲಿ ಸಾಲ ಮರುಪಾವತಿ ಮಾಡದ ಕಾರಣ ಸಹಕಾರಿ ಬ್ಯಾಂಕ್ ನ್ಯಾಯಾಲಯಲ್ಲಿ ಆರೋಪಿ ವಿರುದ್ಧ ಚೆಕ್ ಅಮಾನ್ಯ ಪ್ರಕರಣ ದಾಖಲಿಸಿತ್ತು.



ಪ್ರಕರಣ ವಿಚಾರಣೆಯ ಹಂತದಲ್ಲಿ ಆರೋಪಿ ಮಹಿಳೆ ಲೋಕ ಅದಾಲತ್‌ನಲ್ಲಿ ಭಾಗಿಯಾಗಿ ಸದ್ರಿ ಪ್ರಕರಣದ ಬಾಬ್ತು 40.15 ಲಕ್ಷ ರೂ. ಮೌಲ್ಯದ ಚೆಕ್ ನೀಡಿದ್ದರು. ಚೆಕ್ ನಗದಿಗಾಗಿ ಸಂಬಂಧಿತ ಬ್ಯಾಂಕ್‌ಗೆ ಸಲ್ಲಿಸಿದಾಗ ಖಾತೆಯಲ್ಲಿ ಚೆಕ್ ಮೌಲ್ಯದಷ್ಟು ಹಣ ಇಲ್ಲದ ಕಾರಣ ಚೆಕ್ ಅಮಾನ್ಯಗೊಂಡಿತ್ತು.


ಈ ಬಗ್ಗೆ ಮಹಿಳೆಗೆ ವಿಚಾರ ತಿಳಿಸಿದಾಗ, ಅವರು ಮರಳಿ ನಗದೀಕರಣಕ್ಕೆ ಈ ಚೆಕ್‌ನ್ನು ಪುನಃ ನೀಡುವಂತೆ ಆರೋಪಿ ಮಹಿಳೆ ದೂರುದಾರರಿಗೆ ಸೂಚನೆ ನೀಡಿದ್ದರು. ಆದರೆ, ಎರಡನೇ ಬಾರಿಯೂ ಚೆಕ್ ಅಮಾನ್ಯಗೊಂಡಿತು.



ಈ ಬಗ್ಗೆ ಮಹಿಳೆಗೆ ನೋಟೀಸ್ ನೀಡಿದರೂ, ಚೆಕ್ ಮೊತ್ತದ ಹಣ ಪಾವತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಸದ್ರಿ ಸಂತ್ರಸ್ತ ಬ್ಯಾಂಕ್, ಸಹಕಾರಿ ಬ್ಯಾಂಕ್‌ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು.



2015ರಲ್ಲಿ ಪುನಃ ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನಕ್ಕೆ ಒಪ್ಪಿಕೊಂಡಿದ್ದ ಮಹಿಳೆ 49 ಲಕ್ಷ ರೂ. ಪಾವತಿಸುವುದಾಗಿ ಒಪ್ಪಿಕೊಂಡಿದ್ದರು. ಆದರೆ, ಹಣ ಪಾವತಿಸಿರಲಿಲ್ಲ. ಹಾಗಾಗಿ, ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್‌ ಆರೋಪಿಗೆ ದ್ವಿಗುಣ ಮೊತ್ತದ ಪರಿಹಾರ ನೀಡುವಂತೆ ಆದೇಶಿಸಿದೆ.


Read This Also

ಪೆಟ್ರೋಲ್ ಬಂಕ್ ಮಾಲಕರಿಗೆ 6 ವರ್ಷವಾದರೂ ಇಂಧನದ ಹಣ ಬಾಕಿ: ಬಸ್‌ ಸಂಸ್ಥೆ ಮಾಲಕಿಗೆ ವಾರೆಂಟ್ ಜಾರಿಗೊಳಿಸಿದ ಮಂಗಳೂರು ನ್ಯಾಯಾಲಯ

Ads on article

Advertise in articles 1

advertising articles 2

Advertise under the article