-->
ನಾಲ್ಕು ವರ್ಷದಿಂದ ಡೀಸಲ್ ಬಿಲ್ ಬಾಕಿ: ಬಸ್ ಮಾಲಕಿ ಸುಕನ್ಯಾ ಶೆಟ್ಟಿ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿ

ನಾಲ್ಕು ವರ್ಷದಿಂದ ಡೀಸಲ್ ಬಿಲ್ ಬಾಕಿ: ಬಸ್ ಮಾಲಕಿ ಸುಕನ್ಯಾ ಶೆಟ್ಟಿ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿ

ನಾಲ್ಕು ವರ್ಷದಿಂದ ಡೀಸಲ್ ಬಿಲ್ ಬಾಕಿ: ಬಸ್ ಮಾಲಕಿ ಸುಕನ್ಯಾ ಶೆಟ್ಟಿ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿಮಂಗಳೂರಿನಲ್ಲಿ ಟೂರ್ ಆಂಡ್ ಟ್ರಾವೆಲ್ಸ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಲೋಕೇಶ್ ಶೆಟ್ಟಿ ಅವರ ಪತ್ನಿ ಸುಕನ್ಯಾ ಎಲ್ ಶೆಟ್ಟಿ ವಿರುದ್ಧ ಮಂಗಳೂರಿನ ಐದನೇ ಜೆಎಂಎಫ್ ಸಿ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ.


ಇವರು ನಗರದ ಶೇಡಿಗುಡ್ಡೆ (ಪಿವಿಎಸ್ ಜಂಕ್ಷನ್) ಬಳಿ ಓರೆಂಜ್ ಟೂರ್ಸ್ ಆಂಡ್ ಟ್ರಾವೆಲ್ಸ್  ಮತ್ತು ಲಕ್ಷ್ಮಿ ಟೂರ್ಸ್ ಆಂಡ್ ಟ್ರಾವೆಲ್ಸ್ ಹೆಸರಿನಲ್ಲಿ ಉದ್ಯಮ ನಡೆಸುತ್ತಿದ್ದಾರೆ. ಆರೋಪಿ ಕೆನರಾ ಬಸ್ ಮತ್ತು ಇತರ ವಾಹನಗಳಿಗೆ ಡೀಸೆಲ್ ಮತ್ತು ಪೆಟ್ರೋಲ್ ನ್ನು ತುಂಬಿಸಿ ಬಿಲ್ ನೀಡದೆ ಬಾಕಿ ಇರಿಸಿದ್ದರು.


ಸುಕನ್ಯಾ ಅವರು ನೀಡಿದ್ದ ಎರಡು ಚೆಕ್ ಬೌನ್ಸ್ ಆಗಿದ್ದು, ಪೆಟ್ರೋಲ್ ಬಂಕ್ ಮಾಲೀಕರು ಬಸ್ ಮಾಲಕಿ ಸುಕನ್ಯಾ ಶೆಟ್ಟಿ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಆರೋಪಿ ಸುಕನ್ಯಾ ನ್ಯಾಯಾಲಯದ ಮುಂದೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದರು.


ಬಳಿಕ, ಮೂರು ತಿಂಗಳಿನ ಒಳಗೆ ಚೆಕ್ ಮೌಲ್ಯದ ಸಂಪೂರ್ಣ ಮೊತ್ತವನ್ನು ಪಾವತಿಸುವುದಾಗಿ ನ್ಯಾಯಾಲಯಕ್ಕೆ ಒಪ್ಪಿಗೆ ಪತ್ರವನ್ನೂ ಬರೆದುಕೊಟ್ಟಿದ್ದರು. ಆದರೆ, ಆ ಬಳಿಕ ಒಂದು ರೂಪಾಯಿಯೂ ನೀಡಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಮಾನ್ಯ ನ್ಯಾಯಾಲಯ ಆರೋಪಿ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಿದೆ.


ನ್ಯಾಯಾಲಯದಿಂದ ವಾರೆಂಟ್ ಪಡೆದುಕೊಂಡಿರುವ ಕದ್ರಿ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200