-->
ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸ್: ಕರ್ನಾಟಕದ ವಕೀಲರಿಗೆ ಮಹತ್ವದ ಸೂಚನೆ

ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸ್: ಕರ್ನಾಟಕದ ವಕೀಲರಿಗೆ ಮಹತ್ವದ ಸೂಚನೆ

ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸ್: ಕರ್ನಾಟಕದ ವಕೀಲರಿಗೆ ಮಹತ್ವದ ಸೂಚನೆ





ಕರ್ನಾಟಕ ರಾಜ್ಯ ವಕೀಲರ ಪರಿಷತ್ ತನ್ನ ಸದಸ್ಯರಿಗೆ ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸ್‌ (Certificate of Practice- COP) ನೀಡಲು ಪ್ರಕ್ರಿಯೆ ಆರಂಭಿಸಿದ್ದು, ಸಿಓಪಿ ಕೋರಿ ಅರ್ಜಿ ಸಲ್ಲಿಸದ ವಕೀಲರು ಅಗತ್ಯ ದಾಖಲೆಗಳು ಹಾಗೂ ನಿಗದಿತ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬೇಕು. ಈ ಅರ್ಜಿ ಸಲ್ಲಿಸಲು ಅಕ್ಟೋಬರ್ 31ರಂದು ಕೊನೆಯ ದಿನವಾಗಿರುತ್ತದೆ.


ಅರ್ಜಿ ಸಲ್ಲಿಸದ ವಕೀಲರು ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸ್‌ ಕೋರಿ ಅರ್ಜಿ ಸಲ್ಲಿಸದೇ ಇದ್ದರೆ, ಅಂತಹ ಸದಸ್ಯ ವಕೀಲರನ್ನು ನಾನ್ ಪ್ರ್ಯಾಕ್ಟೀಸಿಂಗ್ ಅಡ್ವಕೇಟ್ ಎಂದು ಪರಿಗಣಿಸಿ ಆ ಪಟ್ಟಿಗೆ ಸೇರಿಸಲಾಗುವುದು ಎಂದು ಪರಿಷತ್ ಪ್ರಕಟಣೆ ತಿಳಿಸಿದೆ.


ಅರ್ಜಿ ಸಲ್ಲಿಸಬೇಕಾಗಿರುವ ವಕೀಲರು:

2010ರ ಜುಲೈ 14ರಂದು ಅಥವಾ ಅದಕ್ಕಿಂತ ಮೊದಲು ಎಲ್‌ಎಲ್‌ಬಿ ಪಡೆದು ವಕೀಲರಾಗಿ ನೋಂದಾಯಿಸಿಕೊಂಡಿರುವವರು ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸ್‌ ಗೆ ಅರ್ಜಿ ಸಲ್ಲಿಸದೇ ಇದ್ದರೆ ಅಂತಹ ವಕೀಲರು ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸ್‌ ಗೆ ಅರ್ಜಿ ಸಲ್ಲಿಸಬೇಕು.


2010ರ ಜುಲೈ 14ರಂದು ಅಥವಾ ಅದಕ್ಕಿಂತ ಮೊದಲು ಎಲ್‌ಎಲ್‌ಬಿ ಪಡೆದು ವಕೀಲರಾಗಿ ನೋಂದಾಯಿಸಿಕೊಂಡಿರುವವರು ತಮ್ಮ ಅಗತ್ಯ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿ ರೂ. 1300/- ರೂ. ಶುಲ್ಕ (ದಂಡ ಸಹಿತ) ಪಾವತಿಸಬೇಕಾಗುತ್ತದೆ.


2010ರ ಜುಲೈ 14ರ ನಂತರ ಎಲ್‌ಎಲ್‌ಬಿ ಪಡೆದು ನೋಂದಾಯಿಸಿಕೊಂಡ ವಕೀಲರು ಆಲ್‌ ಇಂಡಿಯಾ ಬಾರ್ ಎಕ್ಸಾಮಿನೇಷನ್ (AIBE) ತೇರ್ಗಡೆ ಮಾಡಿದ್ದಲ್ಲಿ ನಿಗದಿತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕಾಗಿದೆ.

ಆಲ್‌ ಇಂಡಿಯಾ ಬಾರ್ ಎಕ್ಸಾಮಿನೇಷನ್ ಪರೀಕ್ಷೆ ಪಾಸ್ ಮಾಡಿರುವ ವಕೀಲರಿಗೆ ಶುಲ್ಕ ಪಾವತಿ ಮಾಡುವುದಕ್ಕೆ ವಿನಾಯಿತಿ ನೀಡಲಾಗಿದೆ.


ಅಗತ್ಯ ದಾಖಲೆಗಳು:

2010ರ ಜುಲೈ 14ರಂದು ಅಥವಾ ಅದಕ್ಕಿಂತ ಮೊದಲು ಎಲ್‌ಎಲ್‌ಬಿ ಪಡೆದು ವಕೀಲರಾಗಿ ನೋಂದಾಯಿಸಿಕೊಂಡಿರುವವರು ತಾವು ವಕೀಲರು ತಾವು ವೃತ್ತಿ ನಿರತ ವಕೀಲರು ಎಂದು ಸ್ಪಷ್ಟಪಡಿಸುವ ಐದು ವರ್ಷದ ವಕಾಲತು ಅಥವಾ ತತ್ಸಮಾನ ದಾಖಲೆಗಳನ್ನು ತಮ್ಮ ನೋಂದಾವಣಿ ದಾಖಲೆಗಳ ಜೊತೆಗೆ ಶುಲ್ಕ ಸಹಿತ ಅಪ್‌ಲೋಡ್ ಮಾಡಬೇಕಿದೆ.

2010ರ ಜುಲೈ 14ರ ನಂತರ ಎಲ್‌ಎಲ್‌ಬಿ ಪಡೆದು ನೋಂದಾಯಿಸಿಕೊಂಡ ವಕೀಲರು ಎಐಬಿಇ ಪಾಸ್ ಆಗಿರುವ ಸರ್ಟಿಫಿಕೇಟ್‌, ಶೈಕ್ಷಣಿಕ ದಾಖಲೆಗಳ ಜೊತೆಗೆ ಡಿಕ್ಲರೇಷನ್ ಅರ್ಜಿಯನ್ನು ಶುಲ್ಕ ಸಹಿತ ಅಪ್‌ಲೋಡ್ ಮಾಡಬೇಕಿದೆ.


ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸ್‌ (Certificate of Practice- COP)ಗೆ ಅರ್ಜಿ ಸಲ್ಲಿಸಬೇಕಾಗಿರುವ ವಕೀಲರು ತಮ್ಮ ಹೆಸರು ಈ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಈ ಲಿಂಕ್ ಮೂಲಕ ಭೇಟಿ ನೀಡಿ ಪರಿಶೀಲನೆ ಮಾಡಬಹುದು.

https://ksbc.org.in/coplist.php


ಸುತ್ತೋಲೆಗಾಗಿ ಈ ಲಿಂಕ್ ಕ್ಲಿಕ್ ಮಾಡಿ

http://cop.ksbc.org.in/images/COP-CIRCULAR.pdf



ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸ್‌ (Certificate of Practice- COP)ಗೆ ಹೆಸರು ನೋಂದಾಯಿಸಿಕೊಂಡಿರದ ವಕೀಲರ ಪಟ್ಟಿ

https://ksbc.org.in/registration/images/list%20of%20unregistered%20bar%20associations.pdf

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200