-->
ಅಶ್ಲೀಲ ಪೋಸ್ಟ್ ಲೈಕ್ ಮಾಡುವುದು ಅಪರಾಧವಲ್ಲ; ಶೇರ್, ರಿಟ್ವೀಟ್ ಅಪರಾಧ- ಹೈಕೋರ್ಟ್

ಅಶ್ಲೀಲ ಪೋಸ್ಟ್ ಲೈಕ್ ಮಾಡುವುದು ಅಪರಾಧವಲ್ಲ; ಶೇರ್, ರಿಟ್ವೀಟ್ ಅಪರಾಧ- ಹೈಕೋರ್ಟ್

ಅಶ್ಲೀಲ ಪೋಸ್ಟ್ ಲೈಕ್ ಮಾಡುವುದು ಅಪರಾಧವಲ್ಲ; ಶೇರ್, ರಿಟ್ವೀಟ್ ಅಪರಾಧ- ಹೈಕೋರ್ಟ್





ಫೇಸ್‌ಬುಕ್ ಅಥವಾ ಟ್ವಿಟ್ಟರ್‌ ಸಹಿತ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾದ ಅಸಭ್ಯ ಯಾ ಅಶ್ಲೀಲ ಪೋಸ್ಟ್‌ಗಳನ್ನು ಲೈಕ್ ಮಾಡುವುದು ಅಪರಾಧವಲ್ಲ. ಆದರೆ, ಅಂತಹ ಪೋಸ್ಟ್‌ಗಳನ್ನು ರಿಟ್ವೀಟ್ ಮಾಡುವುದು, ಫಾರ್ವರ್ಡ್ ಮಾಡುವುದು, ಶೇರ್ ಮಾಡುವುದು ಮಾಹಿತಿ ತಂತ್ರಜ್ಞಾ ಕಾಯ್ದೆಯ ಸೆಕ್ಷನ್ 67ರಡಿ ಅಪರಾಧವಾಗಿದೆ ಎಂದು ಅಲಹಾಬಾದ್ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.



ಸಾಮಾಜಿಕ ಜಾಲದಲ್ಲಿ ಪ್ರಚೋದನಾಕಾರಿ ಎಂದು ಹೇಳಲಾದ ಸಂದೇಶವನ್ನು ಪೋಸ್ಟ್ ಮಾಡಿದ್ದ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿ ಮೊಹಮ್ಮದ್ ಇಮ್ರಾನ್ ಖಾಜಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾ. ಅರುಣ್ ಕುಮಾರ್ ಸಿಂಗ್ ದೇಶ್ವಾಲ್ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.



ಪೋಸ್ಟ್‌ ಹಂಚಿಕೊಳ್ಳುವುದು ಅಥವಾ ರೀ ಟ್ವೀಟ್ ಮಾಡುವುದು ಮಾಹಿತಿ ತಂತ್ರಜ್ಙಾನ ಕಾಯ್ದೆಯ ಪ್ರಕಾರ ಅಂತಹ ವಸ್ತು ವಿಷಯವನ್ನು ಪ್ರಕಟಿಸುವುದು ಮತ್ತು ಪ್ರಸಾರ (Publish) ಮಾಡುವುದಕ್ಕೆ ಸಮನಾಗಿದೆ ಎಂದು ನ್ಯಾಯಪೀಠ ಹೇಳಿದೆ.



ಆದರೆ, ಆಕ್ಷೇಪಾರ್ಹ ಪೋಸ್ಟ್‌ನ್ನು ಲೈಕ್ ಮಾಡುವುದು ಅಥವಾ ಇಷ್ಟಪಡುವುದು ಮರು ಪ್ರಸಾರಕ್ಕೆ ಸಮನಾಗುವುದಿಲ್ಲ ಎಂದು ತೀರ್ಪಿನಲ್ಲಿ ಹೇಳಲಾಗಿದೆ.


ಒಂದು ಪೋಸ್ಟ್ ಅಥವಾ ಸಂದೇಶವನ್ನು ಪೋಸ್ಟ್ ಮಾಡಿದಾಗ ಅದನ್ನು ಪ್ರಸಾರ ಮಾಡಲಾಗಿದೆ ಅಥವಾ ಪ್ರಕಟಿಸಲಾಗಿದೆ ಎಂದು ವ್ಯಾಖ್ಯಾನಿಸಬಹುದು. ಅದೇ ಪೋಸ್ಟನ್ನು ಹಂಚಿಕೊಂಡಾಗ, ರಿಟ್ವೀಟ್ ಮಾಡಿದಾಗ ಅದನ್ನು ರವಾನೆ ಮಾಡಲಾಗಿದೆ ಎಂದು ಅರ್ಥೈಸಬಹುದು. ಪೋಸ್ಟನ್ನು ಇಷ್ಟಪಡುವುದು ರವಾನೆ ಮಾಡಿದ್ದಕ್ಕೆ ಸಮನಲ್ಲ. ಆದುದರಿಂದ ಲೈಕ್ ಮಾಡುವುದು ಐಟಿ ಕಾಯ್ದೆಯ ಸೆಕ್ಷನ್ 67ರ ವ್ಯಾಪ್ತಿಗೆ ಬರುವುದಿಲ್ಲ ಎಂದು ತೀರ್ಪು ಹೇಳಿದೆ.


ಪ್ರಕರಣ: ಮೊಹಮ್ಮದ್ ಇಮ್ರಾನ್ ಖಾಜಿ Vs ಉತ್ತರ ಪ್ರದೇಶ (ಅಲಹಾಬಾದ್ ಹೈಕೋರ್ಟ್‌)


Ads on article

Advertise in articles 1

advertising articles 2

Advertise under the article