-->
ಮೃತ ಪುತ್ರನ ಪಿತ್ರಾರ್ಜಿತ ಆಸ್ತಿಯಲ್ಲಿ ತಾಯಿಗೆ ಪಾಲಿದೆ- ಕರ್ನಾಟಕ ಹೈಕೋರ್ಟ್‌

ಮೃತ ಪುತ್ರನ ಪಿತ್ರಾರ್ಜಿತ ಆಸ್ತಿಯಲ್ಲಿ ತಾಯಿಗೆ ಪಾಲಿದೆ- ಕರ್ನಾಟಕ ಹೈಕೋರ್ಟ್‌

ಮೃತ ಪುತ್ರನ ಪಿತ್ರಾರ್ಜಿತ ಆಸ್ತಿಯಲ್ಲಿ ತಾಯಿಗೆ ಪಾಲಿದೆ- ಕರ್ನಾಟಕ ಹೈಕೋರ್ಟ್‌

ಹಿಂದೂ ಉತ್ತರಾಧಿಕಾರ ಕಾಯ್ದೆಯಡಿ ಮೃತ ಪುತ್ರನ ಪಿತ್ರಾರ್ಜಿತ ಆಸ್ತಿಯಲ್ಲಿ ತಾಯಿಯು ಮೊದಲನೇ ವರ್ಗದ ವಾರೀಸುದಾರರು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.


ಆಕೆಯ ಪತಿ ಜೀವಂತವಾಗಿದ್ದರೂ ಪುತ್ರನಿಗೆ ಸೇರಬೇಕಿರುವ ಆಸ್ತಿಯಲ್ಲಿ ತಾಯಿ ತನ್ನ ಪಾಲು ಪಡೆಯಬಹುದು ಎಂದು ನ್ಯಾ. ಎಚ್.ಪಿ. ಸಂದೇಶ್ ಅವರಿದ್ದ ನ್ಯಾಯಪೀಠ ಹೇಳಿದೆ.


ಮೃತ ಪುತ್ರನ ತಾಯಿಯಾದ ಸುಶೀಲಮ್ಮ ಅವರನ್ನು ಅರ್ಜಿಯಲ್ಲಿ ಪಕ್ಷಕಾರರನ್ನಾಗಿ ಮಾಡಿದ ಮೇಲೆ ಅವರೂ ಮೊದಲನೇ ವರ್ಗದ ವಾರಿಸುದಾರರಾಗುತ್ತಾರೆ. ಸಂತೋಷ್ ಅವರು ತಾಯಿ, ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ. ತಾಯಿ ಸುಶೀಲಮ್ಮ ಅವರು ಹಿಂದೂ ಅವಿಭಾಜ್ಯ ಕುಟುಂಬದಲ್ಲಿ ಮೊದಲನೇ ವರ್ಗದ ವಾರೀಸುದಾರರಾಗಲಿದ್ದಾರೆ. ಹೀಗಾಗಿ ಪುತ್ರ ಸಂತೋಷ್ ಅವರ ಆಸ್ತಿಯಲ್ಲಿ ಪಾಲು ಪಡೆಯಲು ಮೂಲ ಮೇಲ್ಮನವಿ ನ್ಯಾಯಾಲಯದ ತೀರ್ಪು ದೋಷಪೂರಿತವಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.


ಸುಶೀಲಮ್ಮ ಅವರು ದಾವೆ ದಾಖಲಿಸುವ ಮುನ್ನವೇ ಸಂತೋಷ್ ಅವರು ಮೃತರಾಗಿದ್ದಾರೆ. ಇದರಿಂದ ಸುಶೀಲಮ್ಮ ತನ್ನ ಮಗನ ಮೊದಲನೇ ವರ್ಗದ ವಾರಿಸುದಾರರಾಗುತ್ತಾರೆ ಎಂದು ಗುರುತಿಸುವಲ್ಲಿ ಮೊದಲನೇ ಮೇಲ್ಮನವಿ ನ್ಯಾಯಾಲಯ ವಿಫಲವಾಗಿದೆ ಎಂದು ನ್ಯಾಯಪೀಠ ಹೇಳಿದೆ. 


ಟಿ.ಎನ್. ಸುಶೀಲಮ್ಮ ಮತ್ತಿತರರು Vs ಚಿರಾಗ್ ರಾಘವೇಂದ್ರ

ಕರ್ನಾಟಕ ಹೈಕೋರ್ಟ್, RSA 1090/2020 Dated 6-10-2023


Ads on article

Advertise in articles 1

advertising articles 2

Advertise under the article