-->
ದಂಪತಿ ಸಪ್ತಪದಿ ತುಳಿದರೆ ಮಾತ್ರ 'ಹಿಂದೂ' ವಿವಾಹ ಸಂಪನ್ನ- ಅಲಹಾಬಾದ್ ಹೈಕೋರ್ಟ್‌

ದಂಪತಿ ಸಪ್ತಪದಿ ತುಳಿದರೆ ಮಾತ್ರ 'ಹಿಂದೂ' ವಿವಾಹ ಸಂಪನ್ನ- ಅಲಹಾಬಾದ್ ಹೈಕೋರ್ಟ್‌

ದಂಪತಿ ಸಪ್ತಪದಿ ತುಳಿದರೆ ಮಾತ್ರ 'ಹಿಂದೂ' ವಿವಾಹ ಸಂಪನ್ನ- ಅಲಹಾಬಾದ್ ಹೈಕೋರ್ಟ್‌





ಹಿಂದೂ ಕಾನೂನಿನ ಪ್ರಕಾರ ಸಪ್ತಪದಿ ಎಂಬ ಸಾಂಪ್ರದಾಯಿಕ ಪ್ರಕ್ರಿಯೆ ಹಿಂದೂ ದಂಪತಿಯ ವಿವಾಹ ಸಂಪನ್ನತೆಗೆ ಬೇಕಾದ ಅಗತ್ಯದ ಅಂಶವಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.



ಎರಡನೇ ಮದುವೆಯಾಗಿದ್ದಾರೆ ಎಂದು ಆರೋಪಿಸಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 494ರ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸಂಜಯ್ ಕುಮಾರ್ ಸಿಂಗ್ ಅವರಿದ್ದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.



ಹಿಂದೂ ವಿವಾಹ ಕಾಯ್ದೆ 1955ರ ಅಡಿಯಲ್ಲಿ ಸಪ್ತಪದಿ ತುಳಿದು ಸಾಂಪ್ರದಾಯಿಕವಾಗಿ ಮದುವೆಯಾದರೆ ಮಾತ್ರ ವಿವಾಹ ಸಂಪನ್ನವಾಗಿದೆ ಎಂದು ಪರಿಗಣಿಸಬಹುದು ಮತ್ತು ಅಂತಹ ವಿವಾಹಕ್ಕೆ ಮಾತ್ರ ಮಾನ್ಯತೆ ನೀಡಬಹುದು ಎಂದು ನ್ಯಾಯಪೀಠ ಹೇಳಿದೆ



ಹಿಂದೂ ವಿವಾಹ ಪದ್ಧತಿಯಲ್ಲಿ ಸಪ್ತಪದಿಗೆ ಮಹತ್ವದ ಸ್ಥಾನವಿದೆ. ವಧೂ-ವರರು ದಾಂಪತ್ನದ ಗಂಟಿನ ಜೊತೆಗೆ ಪವಿತ್ರ ಆಗ್ನಿಕುಂಡದ ಸುತ್ತ ಏಳು ಹೆಜ್ಜೆಗಳನ್ನು ಇಡುವ ವೈವಾಹಿಕ ಆಚರಣೆಯಾಗಿದೆ. ಇದು ವಿವಾಹ ಸಂಪನ್ನವಾಗಲು ಅಗತ್ಯವಾಗಿ ಬೇಕಾದ ಆಚರಣೆಯಾಗಿದೆ ಎಂದು ತೀರ್ಪು ವಿವರಿಸಿದೆ.



ಘಟನೆಯ ವಿವರ:

2017ರಲ್ಲಿ ಮದುವೆಯಾಗಿದ್ದ ಹಿಂದೂ ಜೋಡಿಯ ದಾಂಪತ್ಯ ಜೀವನದಲ್ಲಿ ಕೆಲವೇ ಸಮಯಗಳಲ್ಲಿ ಬಿರುಕು ಮೂಡಿತು. ಪತ್ನಿಯು ತನ್ನ ಗಂಡ ಮತ್ತು ಆತನ ಮನೆಯವರ ಮೇಲೆ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ದಾಖಲಿಸಿದರು. ಕೆಲವು ಸಮಯದ ನಂತರ, ಪತಿಯು ತನ್ನ ಪತ್ನಿ ತನಗೆ ವಿಚ್ಚೇದನ ನೀಡದೆ ಅನ್ಯ ವ್ಯಕ್ತಿ ಜೊತೆಗೆ ಮದುವೆಯಾಗಿದ್ದಾರೆ ಎಂದು ಪ್ರತಿ ದೂರು ಸಲ್ಲಿಸಿದರು.


ಆದರೆ, ಪತ್ನಿಯು ತನ್ನ ಪತಿಯ ಆರೋಪಗಳು ನಿರಾಧಾರ ಎಂದು ಆಕ್ಷೇಪಿಸಿದರು. ಆದರೆ, ಆಕೆಯು ಅನ್ಯ ವ್ಯಕ್ತಿ ಜೊತೆಗೆ ಮದುವೆಯಾಗಿರುವುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿವೆ ಎಂದು ವಾದಿಸಿದ್ದರು.


ಆ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನಂತರ ಆಕೆಯ ಎರಡನೇ ಮದುವೆ ಎಂದು ಹೇಳಲಾದ ಸಮಾರಂಭದಲ್ಲಿ ಮದುವೆಯ ಕಾರ್ಯಕ್ರಮ ನಡೆದ ಪುರಾವೆಗಳಿಲ್ಲ ಎಂದು ನ್ಯಾಯಪೀಠ ಹೇಳಿತು.


ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 7ರ ಪ್ರಕಾರ ಸಂಪ್ರದಾಯಬದ್ಧ ಕಾನೂನಾತ್ಮಕ ವಿವಾಹವನ್ನು ಸಾಬೀತುಪಡಿಸಲು ಅಗತ್ಯವಾದ ಆಚರಣೆಗಳು ನಡೆಯಬೇಕಾಗಿದೆ. ಈ ಅಗತ್ಯ ಆಚರಣೆಗಳ ಪೈಕಿ ಸಪ್ತಪದಿಯೂ ಒಂದು. ಆದರೆ, ಸದ್ರಿ ಈ ಪ್ರಕರಣದಲ್ಲಿ ಅಂತಹ ಸಂಪ್ರದಾಯಕ ನಡೆದಿದೆ ಎಂದು ಹೇಳಲು ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ನ್ಯಾಯಪೀಠ ವಿವರಿಸಿತು.


Ads on article

Advertise in articles 1

advertising articles 2

Advertise under the article