-->
ಕೋರ್ಟ್ ಕಟಕಟೆಯಲ್ಲಿ ಸುಳ್ಳು ಸಾಕ್ಷಿ: ಆರೋಪಿಗೆ ದಂಡ ಸಹಿತ ಎರಡು ವರ್ಷ ಜೈಲು ಶಿಕ್ಷೆ!

ಕೋರ್ಟ್ ಕಟಕಟೆಯಲ್ಲಿ ಸುಳ್ಳು ಸಾಕ್ಷಿ: ಆರೋಪಿಗೆ ದಂಡ ಸಹಿತ ಎರಡು ವರ್ಷ ಜೈಲು ಶಿಕ್ಷೆ!

ಕೋರ್ಟ್ ಕಟಕಟೆಯಲ್ಲಿ ಸುಳ್ಳು ಸಾಕ್ಷಿ: ಆರೋಪಿಗೆ ದಂಡ ಸಹಿತ ಎರಡು ವರ್ಷ ಜೈಲು ಶಿಕ್ಷೆ!

ನ್ಯಾಯಾಲಯದ ಕಟಕಟೆಯಲ್ಲಿ ಪ್ರಮಾಣ ಸ್ವೀಕರಿಸಿ ಸುಳ್ಳು ಸಾಕ್ಷಿ ನೀಡಿದ ಆರೋಪಿಗೆ ಎರಡು ವರ್ಷಗಳ ಸಾದಾ ಶಿಕ್ಷೆ ಹಾಗೂ 10 ಸಾವಿರ ರೂ.ಗಳ ದಂಡವನ್ನು ವಿಧಿಸಿದೆ.ಬಾಗಲಕೋಟೆ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಪಲ್ಲವಿ ಆರ್. ಅವರು ಆರೋಪಿ ಶಶಿಕಾಂತ್‌ ಎಂಬಾತನಿಗೆ ಈ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.ಪ್ರಕರಣದ ವಿವರ:

ದೂರುದಾರನಾಗಿದ್ದ ಶಶಿಕಾಂತ ಹಡಗಲಿ ಎಂಬಾತ ತನ್ನ ತಾಯಿಗೆ ಬರಬೇಕಾದ ಪರಿಹಾರದ ಹಣ ರೂ. 10 ಸಾವಿರ ಮಂಜೂರು ಮಾಡಲು ಹುನಗುಂದ CDPO ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ಗೋಪಾಲ ಹೆರಕಲ್ ಎಂಬವರು ಒಂದು ಸಾವಿರ ರೂ. ಲಂಚ ಕೇಳಿದ್ದರು. ಲಂಚ ಕೊಡಲು ಒಪ್ಪದ ಶಶಿಕಾಂತ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು.

ಈ ದೂರಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒಂದು ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಆರೋಪಿ ಅಧಿಕಾರಿ ಗೋಪಾಲನನ್ನು ಬಂಧಿಸಿದ್ದರು.


ಆದರೆ, ಪ್ರಕರಣದ ವಿಚಾರಣೆಯ ವೇಳೆ, ಪ್ರಮಾಣೀಕೃತ ಸಾಕ್ಷಿ ನುಡಿದ ಶಶಿಕಾಂತ, ಗೋಪಾಲ ಯಾವುದೇ ಲಂಚ ಕೇಳಿಲ್ಲ. ಲೋಕಾಯುಕ್ತ ಒಂದು ಬಿಳಿಯ ಹಾಳೆಯ ಮೇಲೆ ಸಹಿ ಪಡೆದಿದ್ದಾರೆ ಎಂದು ಸುಳ್ಳು ಸಾಕ್ಷಿ ನುಡಿದಿದ್ದ.ಮೇಲ್ನೋಟಕ್ಕೆ ಈ ಹೇಳಿಕೆ ಸುಳ್ಳು ಎಂದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಆರೋಪಿಯಾಗಿ ಬದಲಾದ "ಪ್ರಕರಣದ ಸಾಕ್ಷಿ" ಶಶಿಕಾಂತ್ ಹಡಗಲಿ ಅವರಿಗೆ ಎರಡು ವರ್ಷದ ಸಾದಾ ಶಿಕ್ಷೆ ಹಾಗೂ 10 ಸಾವಿರ ರೂ. ಗಳ ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200