-->
NI Act: ಸಹಿ ಹಾಕಿದ ಖಾಲಿ ಚೆಕ್ ಕೊಟ್ಟರೂ ಫಿರ್ಯಾದಿ ಪರ ಪೂರ್ವಭಾವನೆ- ಕೇರಳ ಹೈಕೋರ್ಟ್‌

NI Act: ಸಹಿ ಹಾಕಿದ ಖಾಲಿ ಚೆಕ್ ಕೊಟ್ಟರೂ ಫಿರ್ಯಾದಿ ಪರ ಪೂರ್ವಭಾವನೆ- ಕೇರಳ ಹೈಕೋರ್ಟ್‌

NI Act: ಸಹಿ ಹಾಕಿದ ಖಾಲಿ ಚೆಕ್ ಕೊಟ್ಟರೂ ಫಿರ್ಯಾದಿ ಪರ ಪೂರ್ವಭಾವನೆ- ಕೇರಳ ಹೈಕೋರ್ಟ್‌





ಆರೋಪಿಯು ತನ್ನ ಸಹಿ ಹಾಕಿದ ಖಾಲಿ ಚೆಕ್ ನೀಡಿದ್ದರೂ ಅಂತಹ ಚೆಕ್ ಅಮಾನ್ಯಗೊಂಡಿದ್ದರೆ ಸೆಕ್ಷನ್ 139ರ ಪ್ರಕಾರ ಅದು ಕಾನೂನಾತ್ಮಕ ಹಣಕಾಸು ಬಾಕಿಗೆ ನೀಡಲಾದ ಚೆಕ್ ಎಂದೇ ಫಿರ್ಯಾದಿ ಪರ ಪೂರ್ವಭಾವನೆಯಾಗುತ್ತದೆ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.


ನ್ಯಾ. ಸೋಫಿ ಥಾಮಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ಆರೋಪಿಗೆ ಶಿಕ್ಷೆ ನೀಡಿದ್ದ ಮೇಲ್ಮನವಿ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ.



ಸದ್ರಿ ಈ ಪ್ರಕರಣದಲ್ಲಿ ಆರೋಪಿಯು ಫಿರ್ಯಾದಿಯಿಂದ ನಾಲ್ಕು ಲಕ್ಷ ರೂ. ಮೊತ್ತದ ಹಣಕಾಸು ಸಾಲವನ್ನು ಪಡೆದಿದ್ದರು. ಮತ್ತು ಈ ಮೊತ್ತದ ಮರುಪಾವತಿಗೆ ನೀಡಿದ್ದ ಚೆಕ್ ಸಾಕಷ್ಟು ನಗದು ಇಲ್ಲ ಎಂಬ ಕಾರಣದ ಹಿಂಬರಹದೊಂದಿಗೆ ಬ್ಯಾಂಕ್ ಖಾತೆಯಿಂದ ಅಮಾನ್ಯಗೊಂಡಿತ್ತು. ಈ ಬಗ್ಗೆ ಫಿರ್ಯಾದಿಯು ಲೀಗಲ್ ನೋಟೀಸ್ ನೀಡಿದ್ದರು.



ಬೀರ್ ಸಿಂಗ್ Vs ಮುಖೇಶ್ ಕುಮಾರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಚೆಕ್ ಮತ್ತು ಚೆಕ್‌ನ ಸಹಿಯನ್ನು ಒಪ್ಪಿಕೊಂಡರೆ, ಅದು ಫಿರ್ಯಾದಿ ಪರವಾದ ಪೂರ್ವಭಾವನೆ ಹೊಂದಲು ಅವಕಾಶವಾಗುತ್ತದೆ.


ಆದರೆ, ಚೆಕ್ ನೀಡಿಕೆಯು ಕಾನೂನಾತ್ಮಕ ಮರುಪಾವತಿಸಬೇಕಾದ ಮೊತ್ತಕ್ಕೆ ಅಲ್ಲ ಎಂಬುದನ್ನು ಅಲ್ಲಗಳೆಯುವ ಅವಕಾಶ ಆರೋಪಿಗೆ ಇದೆ. ಇದನ್ನು ಆರೋಪಿ ಪರ ಸಾಕ್ಷ್ಯ ವಿಚಾರಣೆ ಮೂಲಕವೇ ನಡೆಸಬೇಕು ಎಂಬ ಕಟ್ಟುಪಾಡು ಇಲ್ಲ. ಫಿರ್ಯಾದಿಯು ತಾನು ಹಾಜರುಪಡಿಸಿದ ಸಾಕ್ಷಿ ದಾಖಲೆಗಳನ್ನು ಮುಂದಿಟ್ಟು ಇಲ್ಲವೇ ಸಮರ್ಪಕ ಅಡ್ಡ ವಿಚಾರಣೆಯ ಮೂಲಕ ಆರೋಪಿಯು ಅಲ್ಲಗಳೆಯಬಹುದಾಗಿದೆ.



ಅತ್ಯುತ್ತಮ ಗುಣಮಟ್ಟದ ಸಾಕ್ಷ್ಯದ ಮೂಲಕ ಹೊಣೆಗಾರಿಕೆಯನ್ನು ಅಲ್ಲಗಳೆದರೆ, ಆಗ ಪೂರ್ವಭಾವನೆಯು ಆರೋಪಿ ಪರವಾಗಿ ಬದಲಾಗಲಿದ್ದು, ಹೊಣೆಗಾರಿಕೆ ಫಿರ್ಯಾದಿಯ ಹೆಗಲಿಗೇರಲಿದೆ ಎಂದು ಬೀರ್ ಸಿಂಗ್ Vs ಮುಖೇಶ್ ಕುಮಾರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ ಎಂಬುದನ್ನು ಹೈಕೋರ್ಟ್ ನ್ಯಾಯಪೀಠ ಗಮನಿಸಿತು.


ಪ್ರಕರಣ: ಪಿ.ಕೆ. ಉತ್ತುಪ್ಪು Vs ಎನ್.ಜೆ. ವರ್ಗೀಸ್

ಕೇರಳ ಹೈಕೋರ್ಟ್

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200