-->
ಚೆಕ್ ಅಮಾನ್ಯ ಪ್ರಕರಣ: ಚೆಕ್ ಮೇಲಿನ ಶಾಯಿಯ ವಯಸ್ಸು ನಿರ್ಧರಿಸಲಾಗದು- ಹೈಕೋರ್ಟ್‌

ಚೆಕ್ ಅಮಾನ್ಯ ಪ್ರಕರಣ: ಚೆಕ್ ಮೇಲಿನ ಶಾಯಿಯ ವಯಸ್ಸು ನಿರ್ಧರಿಸಲಾಗದು- ಹೈಕೋರ್ಟ್‌

ಚೆಕ್ ಅಮಾನ್ಯ ಪ್ರಕರಣ: ಚೆಕ್ ಮೇಲಿನ ಶಾಯಿಯ ವಯಸ್ಸು ನಿರ್ಧರಿಸಲಾಗದು- ಹೈಕೋರ್ಟ್‌

ಚೆಕ್ ಬೌನ್ಸ್ ಪ್ರಕರಣವೊಂದರ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್‌, ಚೆಕ್ ಬರವಣಿಗೆಯಲ್ಲಿ ಬಳಸಲಾದ ಇಂಕ್‌ನ ವಯಸ್ಸನ್ನು ನಿರ್ಧರಿಸಲಾಗುವುದಿಲ್ಲ ಎಂದು ಆದೇಶ ಹೊರಡಿಸಿದೆ.ನ್ಯಾ. ಅನಿಲ್ ಎಲ್. ಪನ್ಸಾರೆ ಅವರಿದ್ದ ನಾಗ್ಪುರ ಹೈಕೋರ್ಟ್ ನ್ಯಾಯಪೀಠ ಈ ತೀರ್ಪು ನೀಡಿದೆ.

ಆಕ್ಷೇಪಿತ ಪ್ರಕರಣವು ಅರ್ಜಿದಾರರಾದ ಜ್ಞಾನೇಶ್ವರ ಏಕನಾಥ್ ಗುಲ್ಹಾನೆ ಮತ್ತು ಪ್ರತಿವಾದಿ ವಿನೋದ್ ರಾಮಚಂದ್ರ ಲೋಖಂಡೆ ನಡುವೆ ವಿವಾದವನ್ನು ಒಳಗೊಂಡಿತ್ತು.ಆರೋಪಿಯು 2010ರಲ್ಲಿ ಭದ್ರತೆಗಾಗಿ ನೀಡಿದ್ದ ಚೆಕ್‌ನ್ನು ಎಷ್ಟೋ ವರ್ಷಗಳ ನಂತರ ಅಂದರೆ 2016ರಲ್ಲಿ ಫಿರ್ಯಾದಿಯು ದುರ್ಬಳಕೆ ಮಾಡಿದ್ದಾರೆ ಎಂಬುದು ಆರೋಪಿತರ ವಾದವಾಗಿತ್ತು. 


ಸಹಿ ಹೊರತಾದ ಚೆಕ್‌ನ ಇತರ ಅಂಶಗಳನ್ನು ಸ್ವತಃ ದೂರುದಾರರೇ ಭರ್ತಿ ಮಾಡಿದ್ದಾರೆ. ಚೆಕ್‌ನಲ್ಲಿ ಇರುವ ಇತರ ಕಾಲಂನಲ್ಲಿ ನಮೂದಾಗಿರುವ ಬರಹಗಳ ಪ್ರಾಯವನ್ನು ನಿರ್ಧರಿಸುವಂತೆ ಮಾನ್ಯ ನ್ಯಾಯಪೀಠದ ಮುಂದೆ ವಾದ ಸಲ್ಲಿಸಿದ್ದರು.


ಚೆನ್ನೈನ ವಿಧಿವಿಜ್ಞಾನ ಸಂಸ್ಥೆಯ ದಾಖಲಾತಿ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಅಧಿಕೃತ ವಿವರಣೆಯನ್ನು ನೀಡಿದ್ದು, ಶಾಯಿಯ ವಯಸ್ಸನ್ನು ಅಳತೆ ಮಾಡುವ ಯಾವುದೇ ವೈಜ್ಞಾನಿಕ ಮಾನದಂಡ ಇಲ್ಲ ಎಂದು ಹೇಳಿದ್ದರು. ಈ ವಿವರಣೆಯನ್ನು ಆಧರಿಸಿ ಮತ್ತು ನ್ಯಾಯಾಲಯಗಳ ಹಿಂದಿನ ತೀರ್ಪನ್ನು ಆಧರಿಸಿ ನ್ಯಾ. ಅನಿಲ್ ಎಲ್ ಪನ್ಸಾರೆ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಈ ತೀರ್ಪನ್ನು ನೀಡಿದೆ.Case Name: Dnyaneshwar Eknath Gulhane Vs Vinod Ramchandra Lokhande (ಬಾಂಬೆ ಹೈಕೋರ್ಟ್, ನಾಗ್ಪುರ ಹೈಕೋರ್ಟ್ Dated 2-11-2023)


Ads on article

Advertise in articles 1

advertising articles 2

Advertise under the article