-->
ಅಂತಿಮ ದರ್ಶನಕ್ಕೂ ಮುನ್ನ ಶವಾಗಾರದಲ್ಲಿದ್ದ ಶವ ಕೊಳೆತ: ಆಸ್ಪತ್ರೆಗೆ 5 ಲಕ್ಷ ರೂ. ದಂಡ

ಅಂತಿಮ ದರ್ಶನಕ್ಕೂ ಮುನ್ನ ಶವಾಗಾರದಲ್ಲಿದ್ದ ಶವ ಕೊಳೆತ: ಆಸ್ಪತ್ರೆಗೆ 5 ಲಕ್ಷ ರೂ. ದಂಡ

ಅಂತಿಮ ದರ್ಶನಕ್ಕೂ ಮುನ್ನ ಶವಾಗಾರದಲ್ಲಿದ್ದ ಶವ ಕೊಳೆತ: ಆಸ್ಪತ್ರೆಗೆ 5 ಲಕ್ಷ ರೂ. ದಂಡ




ಅಂತಿಮ ದರ್ಶನಕ್ಕೆ ದೂರದಿಂದ ಬರುವ ಬಂಧುಗಳಿಗಾಗಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ ಶವ ಕೊಳೆತ ಸ್ಥಿತಿಯಲ್ಲಿ ನೀಡಿದ್ದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಐದು ಲಕ್ಷ ರೂ. ಪಾವತಿಸುವಂತೆ ಗ್ರಾಹಕರ ವ್ಯಾಜ್ಯಗಳ ಪರಿಹಾರಗಳ ಆಯೋಗ ಆದೇಶ ಹೊರಡಿಸಿದೆ.


ವಿಲ್ಸನ್ ಆಲನ್ ಫರ್ನಾಂಡಿಸ್ ಎಂಬವರು 2019ರ ಅಕ್ಟೋಬರ್‌ನ ನಿಧನರಾಗಿದ್ದರು. ಪರವೂರಿನಲ್ಲಿರುವ ಸಂಬಂಧಿಕರು, ಆಪ್ತರು ಆಗಮಿಸಲು ಕಾಲಾವಕಾಶ ಬೇಕಾಗಿದ್ದ ಕಾರಣಕ್ಕೆ ಮೃತರ ಕುಟುಂಬದವರು ವಿಲ್ಸನ್ ಅವರ ಶವವನ್ನು ಶವಾಗಾರದ ಶೈತ್ಯಾಗಾರದಲ್ಲಿ ಇರಿಸುವಂತೆ ಆಸ್ಪತ್ರೆಗೆ ಸೂಚಿಸಿದ್ದರು. ಇದಕ್ಕೆ ಸೂಕ್ತ ಶುಲ್ಕವನ್ನೂ ಅವರು ಆಸ್ಪತ್ರೆಗೆ ನೀಡಿದ್ದರು.


ಆದರೆ, ಎರಡೇ ದಿನಗಳಲ್ಲಿ ಶವ ಕೊಳೆತಿದೆ ಎಂಬ ಮಾಹಿತಿಯನ್ನು ಆಸ್ಪತ್ರೆ ಸಿಬ್ಬಂದಿ ನೀಡಿದ್ದರು. ಮೃತರ ಕುಟುಂಬ ಸದಸ್ಯರು ಸ್ಥಳಕ್ಕೆ ಬಂದು ನೋಡಿದಾಗ, ಶವ ಕೊಳತು ಮುದ್ದೆಯಾಗಿ ದುರ್ನಾತ ಬರುತ್ತಿತ್ತು. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಯನ್ನು ವಿಚಾರಿಸಿದಾಗ ವಿದ್ಯುತ್ ನಿಲುಗಡೆಯ ನೆಪ ಹೇಳಿದ್ದರು. ಈ ಬಗ್ಗೆ ಮೃತರ ಕುಟುಂಬದವರು ಪೊಲೀಸ್ ದೂರನ್ನೂ ನೀಡಿದ್ದರು.


ಸದ್ರಿ ಈ ವಿಚಾರವಾಗಿ ಮೃತರ ಸಹೋದರ ನೆಲ್ಸನ್ ಫರ್ನಾಂಡಿಸ್ ಗ್ರಾಹಕರ ನ್ಯಾಯಾಲಯದ ಕದ ತಟ್ಟಿದ್ದರು. ಈ ದೂರನ್ನು ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯ, ಮೃತರ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ನೀಡಿದೆ. 


ಒಂದು ತಿಂಗಳೊಳಗೆ ಪಾವತಿಸದಿದ್ದರೆ ಶೇ. 18ರ ದಂಡನಾ ಬಡ್ಡಿ ಸಹಿತ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಮೃತರ ಕುಟುಂಬದ ಪರವಾಗಿ ನ್ಯಾಯವಾದಿ ದಿನೇಶ್ ಭಂಡಾರಿ ವಾದ ಮಂಡಿಸಿದ್ದರು.



Ads on article

Advertise in articles 1

advertising articles 2

Advertise under the article